ಲೋಕದರ್ಶನ ವರದಿ
ವಿಜಯಪುರ 29: ನಗರದ ಚಿದಂಬರ ದೇವಸ್ಥಾನದಲ್ಲಿ ವಿವಿಧ ಮಹಿಳಾ ಭಜನಾ ಮಂಡಳಿಗಳ ಸಮಾವೇಶ ಜುರುಗಿತು. ಈ ಸಂದರ್ಭದಲ್ಲಿ ಸಾನಿಧ್ಯತೆ ವಹಿಸಿ ಮಾತನಾಡಿದ ಪಂಡಿತ ಮಧ್ವೇಶಾಚಾರ್ಯ ಮುತ್ತಗಿ ಭಗವಂತನ ಕೃಪೆಗೆ ಪಾತ್ರರಾಗಲು ದಾಸರಪದಗಳು ಪ್ರಮುಖ ಮಾಧ್ಯಮ ಎಂದು ಹೇಳಿದರು. ಮಂತ್ರಾಲಯ ದಾಸ ಸಾಹಿತ್ಯ ಪ್ರೊಜೆಕ್ಟ್ ಹಮ್ಮಿಕೊಂಡ ದಾಸರ ಕಡೆ ನಮ್ಮ ನಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಭಜನಾ ಮಂಡಳಿಗಳು ದಾಸರ ಪದಗಳನ್ನು ಹಾಡುವ ಮೂಲಕ ಪರಮಾತ್ಮನಿಗೆ ಸಂಗೀತ ಸೇವೆ ಸಲ್ಲಿಸುತ್ತಿರುವದು ಅತ್ಯಂತ ಸ್ತುತ್ಯಾರ್ಹ ಎಂದು ಪ್ರಶಂಸಿದರು. ಇಂತಹ ಕಾರ್ಯಕ್ರಮಗಳ ಮೂಲಕ ಭಗವಂತನ ಸೇವೆಯ ಜೊತೆಗೆ ಮನಸ್ಸಿಗೆ ಶಾಂತಿ ಕೂಡ ಲಭಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಖ್ಯಾತ ವೈದ್ಯರಾದ ಜಯಶ್ರೀ ಕುಲಕರ್ಣಿ, ಸುಷ್ಮಾ ಕನ್ನೂರ, ಜಯಶ್ರೀ ಮುಂಡೇವಾಡಿ ಮತ್ತು ಮಾಧುರಿ ಕುಲಕಣರ್ಿ ಅವರನ್ನು ಫಲ ಪುಷ್ಪಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಭೀಮಣ್ಣ ಕುಲಕರ್ಣಿ ಸ್ವಾಗತಿಸಿದರು. ಸಚಿನ ಜೋಶಿ ವಂದಿಸಿದರು. ನಂತರ ಭಜನಾ ಮಂಡಳಿಗಳಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಪಿ.ಜಿ.ಕುಲಕಣರ್ಿ ತೆಲಗಿ ಮತ್ತು ಅರವಿಂದ ದೇಶಪಾಂಡೆ, ಪ್ರಮೊದ, ದೇಶಪಾಂಡೆ ಕೆ.ವ್ಹಿ.ಕುಲಕರ್ಣಿ, ವಿಜಯ ಜೋಶಿ, ಸಚಿನ ಆಚಾರ್ಯಜೋಶಿ, ವೆಂಕಟೇಶ ಜೋಶಿ, ರಾಘವೇಂದ್ರ ಗ್ರಾಮ ಪುರೋಹಿತ, ಪದ್ಮನಾಭ ಜೋಶಿ, ಸುಧೀಂದ್ರ ಕುಲಕಣರ್ಿ, ಶೋಭಾ ಜೋಶಿ, ಸಾವಿತ್ರಿ ಜೋಶಿ, ಸುವಣರ್ಾ ಕುಲಕರ್ಣಿ, ಜ್ಯೋತಿ ಕುಲಕಣರ್ಿ, ಹಾಗೂ ದೇವಸ್ಥಾನದ ಧರ್ಮದರ್ಶಿಗಳು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ದೇವಸ್ಥಾನ ಕಟ್ಟಡ ಅಭಿವೃದ್ಧಿಗಾಗಿ ಸಂಸದ ರಮೇಶ ಜಿಗಜಿಣಗಿ ತಮ್ಮ ಅನುದಾನದಿಂದ ರೂ. 3 ಲಕ್ಷ ಮಂಜೂರಿ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಲಾಯಿತು.