ವಿಜಯಪುರ: ವಿದ್ಯುನ್ಮಾನ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲು ಆಗ್ರಹ

ಲೋಕದರ್ಶನ ವರದಿ

ವಿಜಯಪುರ 10: ವಿಧಾನ ಮಂಡಲದ ಕಲಾಪಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ಬಂಧ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಪಬ್ಲಿಕ್ ಪವರ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಕಾಶ ಕುಂಬಾರ ಮಾತನಾಡಿ, ಇತ್ತೀಚೆಗೆ ನ್ಯಾಯ, ನೀತಿ, ಧರ್ಮ ಮರೆತು ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರದ ದಾಹ ಕುಚರ್ಿಯ ಮೋಹ ಸ್ವ ಹಿತಾಸಕ್ತಿ ಸ್ವ ಪ್ರತಿಷ್ಠೆಗಾಗಿ ಜಿದ್ದಿಗೆ ಬಿದ್ದು ರಾಜ್ಯದ ಅಭಿವೃದ್ಧಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಪರಿಸ್ಥಿತಿ ಜನತೆಯದು. ರಾಜಕೀಯ ಪಕ್ಷಗಳದು ನಿತ್ಯ ದೊಂಬರಾಟ, ಪ್ರಹಸನ ಮತ್ತು ಹೈಡ್ರಾಮ ನೋಡುವುದು ಮಾತ್ರ ಜನತೆಗೆ ಅನಿವಾರ್ಯವಾಗಿದೆ. ಜನತೆಯ ಮುಂದೆ ಇವರ ಆಟಾಟೋಪ, ಬಣ್ಣ ಬಯಲು ಮಾಡುವಂತಹ ವಿದ್ಯುನ್ಮಾನ ಮಾಧ್ಯಮಗಳನ್ನು ವಿಧಾನ ಮಂಡಲದ ಉಭಯ ಸದನಗಳ ಸಭಾಂಗಣದಲ್ಲಿ ನಿರ್ಬಂಧ ಹೇರಿರುವ ಕ್ರಮ ಸರಿಯಲ್ಲ ಎಂದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ  ದಸ್ತಗೀರ ಸಾಲೋಟಗಿ ಮಾತನಾಡಿ, ಜನರು ನ್ಯಾಯಾಂಗ ಮತ್ತು ಪತ್ರಿಕಾ ರಂಗದ ಭರವಸೆಯ ಮೇಲೆ ಬದುಕು ಸಾಗಿಸುತ್ತಿದ್ದಾರೆ. ಸಮಾಜ, ಸಾರ್ವಜನಿಕ ಕಳಕಳಿ ಪ್ರದಶರ್ಿಸುವ ಮಾಧ್ಯಮಗಳ ಮೇಲೆ ಸರ್ವಾಧಿಕಾರ ಮೆರೆದರೆ ರಾಜ್ಯದ ಜನತೆ ಮಾಧ್ಯಮದ ಪರ ಮತ್ತು ಸರಕಾರದ ತಮ್ಮ ನಿರ್ಧಾರದ ವಿರುದ್ಧವಾಗಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಕೂಡಲೇ ಸ್ಪೀಕರ್ ತಮ್ಮ ತಪ್ಪು ನಿರ್ಧರದಿಂದ ಹಿಂದೆ ಸರಿಯಬೇಕೆಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.

ಕೆಪಿಪಿ ಮುಖಂಡ ಫಯಾಜ ಕಲಾದಗಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿಧಾನ ಪರಿಷತ್ ಮಹತ್ವದ ಸ್ಥಾನ ಪಡೆದಿದೆ. ಜನ ಸಾಮಾನ್ಯರ ಆಶೋತ್ತರಗಳು ನಾಡಿನ ಸವರ್ಾಂಗೀಣ ಅಭಿವೃದ್ಧಿ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ  ನಡೆಯುವ ವಿಧಾನ ಮಂಡಲ ಕಲಾಪಗಳನ್ನು ಟಿ.ವಿ. ಮಾಧ್ಯಮಗಳು ಪ್ರಸಾರ ಮಾಡುವುದಕ್ಕೆ ಅವಕಾಶ ಕಲ್ಪಿಸುಬೇಕು. ಇದರಿಂದ ಕಲಾಪಗಳು ಇನ್ನಷ್ಟು ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆಯಲು ಸಾಧ್ಯವಾಗುತ್ತದೆ. ಅಗತ್ಯ ಇದ್ದರೆ ಅದಕ್ಕೊಂದು ಮಾಧ್ಯಮ ನೀತಿ ಸಂಹಿತೆ ರೂಪಿಸಬಹುದು. ಆದರೆ ಯಾವುದೇ ಚಚರ್ೆ ಸೂಕ್ತ ಅಭಿಪ್ರಾಯ ಪಡೆಯದೆ ಏಕಾಏಕಿ ಸ್ಪೀಕರ್ ಈ ಕ್ರಮ ಕೈಗೊಂಡಿದ್ದು ಸರಿಯಲ್ಲ. ಈ ಕೂಡಲೇ ವಿದ್ಯುನ್ಮಾನ ಮಾಧ್ಯಮಗಳ ನಿರ್ಬಂಧ ಆದೇಶ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು. 

ರಾಜ್ಯ ಉಪಾಧ್ಯಕ್ಷ ದಯಾನಂದ ಸಾವಳಗಿ, ಸಂತೋಷ ಸಜ್ಜನ, ಮನೋಹರ ತಾಜವ, ಮಲ್ಲು ಮಡಿವಾಳರ, ನಸೀಮ ರೋಜೀಂದಾರ, ಎಂ.ಎಂ.ಹಕೀಂ, ಪೈರೋಜ ಖಾನ, ಪಿದಾ ಕಲಾದಗಿ, ಕೃಷ್ಣಾ ಗಂಜಿ, ಹಾಸೀಂ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.