ವಿಜಯಪುರ: ಕರಡು ಮತದಾರರ ಪಟ್ಟಿ ಪ್ರಕಟ

ಲೋಕದರ್ಶನ ವರದಿ

ವಿಜಯಪುರ 17; ಭಾರತ ಚುನಾವಣಾ ಆಯೋಗ ಹಾಗೂ  ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ 2020ರ ಜನವರಿ 1ಕ್ಕೆ ಇದ್ದಂತೆ ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ದಿ: 01-01-2020ಕ್ಕೆ ಇದ್ದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರನ್ವಯ ಕರಡು ಮತದಾರರ ಪಟ್ಟಿ ಇಂದು ಪ್ರಕಟಿಸಲಾಗಿದೆ. ಮತದಾರ ಪಟ್ಟಿಯಲ್ಲಿನ ವಿವಿಧ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 2020ರ ಜನವರಿ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳಿಗೆ ವಿಲೇವಾರಿ ಮಾಡಲು ಜನವರಿ 27 ನಿಗದಿಪಡಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು 2020ರ ಫೆಬ್ರುವರಿ 7 ರಂದು ಪ್ರಕಟಿಸಲಾಗುವುದು. 

ಕರಡು ಮತದಾರರ ಪಟ್ಟಿಯನ್ವಯ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 927455 ಪುರುಷ ಮತದಾರರು ಹಾಗೂ 884398 ಮಹಿಳಾ ಮತದಾರರು, 260 ಇತರೆ ಮತದಾರರನ್ನೊಳಗೊಂಡು ಒಟ್ಟು 1812113 ಮತದಾರರಿದ್ದಾರೆ. 

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  104746 ಪುರುಷ, 100120 ಮಹಿಳಾ ಹಾಗೂ 34 ಇತರೆ ಸೇರಿದಂತೆ 204900 ಮತದಾರರಿದ್ದಾರೆ. 

ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 108267 ಪುರುಷ, 101234 ಮಹಿಳಾ ಹಾಗೂ 19 ಇತರೆಮತದಾರರು ಸೇರಿದಂತೆ 209520 ಮತದಾರರಿದ್ದಾರೆ. 

ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 103492 ಪುರುಷ, 98078 ಮಹಿಳಾ ಹಾಗೂ 18 ಇತರೆ ಮತದಾರರು ಸೇರಿದಂತೆ ಒಟ್ಟು 201588 ಮತದಾರರಿದ್ದಾರೆ. 

ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ 105018 ಪುರುಷ, 100596 ಮಹಿಳಾ ಹಾಗೂ 12ಇತರೆ ಮತದಾರರು ಸೇರಿದಂತೆ ಒಟ್ಟು 205626 ಮತದಾರರಿದ್ದಾರೆ.

ವಿಜಯಪುರ ನಗರ ಮತಕ್ಷೇತ್ರದಲ್ಲಿ 121763 ಪುರುಷ, 120212 ಮಹಿಳಾ ಹಾಗೂ 78 ಇತರೆ ಸೇರಿದಂತೆ ಒಟ್ಟು 242053 ಮತದಾರರಿದ್ದಾರೆ.

ನಾಗಠಾಣ ಮತಕ್ಷೇತ್ರದಲ್ಲಿ 131136ಪುರುಷ, 122663ಮಹಿಳಾ ಹಾಗೂ 30ಇತರೆ ಮತದಾರರು ಸೇರಿದಂತೆ ಒಟ್ಟು 253829 ಮತದಾರರಿದ್ದಾರೆ. 

ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 120282 ಪುರುಷ, 111670 ಮಹಿಳಾ ಹಾಗೂ 23 ಇತರೆ ಮತದಾರರು ಸೇರಿದಂತೆ 231975 ಮತದಾರರಿದ್ದಾರೆ.

ಸಿಂದಗಿ ಮತಕ್ಷೇತ್ರದಲ್ಲಿ 116963 ಪುರುಷ, 109357 ಮಹಿಳಾ ಹಾಗೂ 28 ಇತರೆ ಮತದಾರರು ಸೇರಿದಂತೆ 226348 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 911667 ಪುರುಷ, 863930 ಮಹಿಳಾ ಹಾಗೂ 242 ಇತರೆ ಸೇರಿದಂತೆ 17,75, 839 ಮತದಾರರಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಮತಗಟ್ಟೆಗೆ ಓರ್ವ ಬಿಎಲ್ಎ ನೇಮಿಸುವಂತೆ ಕೋರಲಾಗಿದೆ. ಅದರನ್ವಯ ಬಬಲೇಶ್ವರ, ವಿಜಯಪುರ ಹಾಗೂ ಇಂಡಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ  ಕಾಂಗ್ರೆಸ್ ಪಕ್ಷದ ಒಟ್ಟು 794 ಬಿಎಲ್ಎಗಳನ್ನು ನೇಮಕ ಮಾಡಲಾಗಿದೆ. ಅದರಂತೆ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದಿಂದ 29 ಹಾಗೂ ಜೆಡಿಎಸ್ ಪಕ್ಷದಿಂದ 269 ಬಿಎಲ್ಎಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯ ಒಟ್ಟು 2101 ಮತಗಟ್ಟೆಗಳಲ್ಲಿ  ಬಿಎಲ್ಎಗಳನ್ನು ನೇಮಿಸುವಂತೆ ಕೋರಲಾಗಿದೆ. 

ಮತದಾರರ ಪರಿಶೀಲನೆ ಕಾರ್ಯಕ್ರಮದ ಅಂಗವಾಗಿ (ಇಲೆಕ್ಟರ್ಸ್ ವೇರಿಫೇಕೇಶನ್ ಪ್ರೊಗ್ರಾಮ) ಅಂಗವಾಗಿ 1766890ಮತದಾರರು, ಮತಗಟ್ಟೆ ಮಟ್ಟದ ಅಧಿಕಾರಿ ಮತ್ತು ನಾಗರಿಕ ಸೇವಾ ಕೇಂದ್ರಗಳ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. 2019ರ ಜನವರಿ 1ಕ್ಕೆ 911667 ಪುರುಷ, 863930 ಮಹಿಳಾ ಹಾಗೂ 242 ಇತರೆ ಮತದಾರರು ಸೇರಿದಂತೆ ಒಟ್ಟು 1775839 ಮತದಾರರಿದ್ದರು. ಈಗ ಮತದಾರರ ಪರಿಶೀಲನೆ ನಂತರ ಕರಡು ಮತದಾರರ ಪಟ್ಟಿಯಲ್ಲಿ 1812113 ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ನಡೆದ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಚಂದ್ರಕಾಂತ ಹಿರೇಮಠ, ಇರಫಾನ್ ಶೇಖ, ಚನ್ನಬಸಪ್ಪ ನಂದರಗಿ ಉಪಸ್ಥಿತರಿದ್ದರು.