ವಿಜಯಪುರ 12: ನಗರದ ನರಸಿಂಹ ದೇವಾಲಯದಲ್ಲಿ ದಿ: 05-12-2019 ರಿಂದ 12-12-2019 ರವರೆಗೆ ಶ್ರೀ ದತ್ತ ಜಯಂತಿ ಉತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಆಚರಿಸಲಾಯಿತು.
ದಿ: 11-12-2019 ರಂದು ಸಂಜೆ 5.55 ಗಂಟೆಗೆ ದತ್ತ ಜನ್ಮ ನಿಮಿತ್ಯ ತೊಟ್ಟಿಲು ಕಟ್ಟಿ ದತ್ತನ ಭಾವಚಿತ್ರವನ್ನು ತೊಟ್ಟಿಲಲ್ಲಿ ತೂಗುವ ಮೂಲಕ ದತ್ತ ಜಯಂತಿಯನ್ನು ಆಚರಿಸಲಾಯಿತು.
ಇದಕ್ಕೂ ಮುಂಚೆ ಸಾತಾರ ಜಿಲ್ಲೆಯ ಸಜ್ಜನಗಡದ ಸಮರ್ಥ ಭಕ್ತ ಪ್ರಸಾದ ಗುವಾ ರಾಮದಾಸ ಇವರು ತಮ್ಮ ಕೀರ್ತನೆ ಮಾಡಿ ಮಾತನಾಡಿ, ಸದ್ಗುರು ದತ್ತಮಹಾರಾಜರು ಈ ಭವದ ಜನರ ಕಷ್ಟಕಾರ್ಪಣ್ಯಗಳನ್ನು ನಿವಾರಣೆ ಮಾಡುವ ದಿವ್ಯ ಶಕ್ತಿಯನ್ನು ಹೊಂದಿದ್ದಾರೆ.
ದತ್ತ ಮಹಾಜರು ತಮ್ಮ ದಿವ್ಯ ಚೇತನದ ಮೂಲಕ ಈ ಲೋಕದ ಜನತೆಗೆ ತಮ್ಮ ದರ್ಶನ ನೀಡುತ್ತಿದ್ದಾರೆ. ಈ ವಿಜಯಪುರ ಕ್ಷೇತ್ರವು ಐತಿಹಾಸಿಕ ಪುರಾತನ ಹಿನ್ನೆಲೆ ಹೊಂದಿರುವ ಕ್ಷೇತ್ರವಾಗಿದೆ. ಅದಕ್ಕಾಗಿಯೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಕನರ್ಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ಭಕ್ತಿಭಾವದಿಂದ ದೇವರ ದರ್ಶನಪಡೆಯುತ್ತಿದ್ದಾರೆ ಎಂದರು. ದತ್ತ ಜಯಂತಿ ಮುಗಿದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದಿ: 12-12-2019 ರಂದು ಮುಂಜಾನೆ 9 ಗಂಟೆಗೆ ಮಹಾರುದ್ರಾಭಿಷೇಕ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ವಿನೋದ ಭಿಡೆ, ಶ್ರೀಪಾದ ಪಾಟಣಕರ, ಗಜಾನನ ಚವ್ಹಾಣ, ಸದಾಶಿವ ಚವ್ಹಾಣ, ದೀಪಕ ಕದಂ, ದತ್ತಾ ಅಷ್ಟೇಕರ, ರಮೇಶ ಬನ್ನಟ್ಟಿ, ದೇವಾಲಯದ ಅರ್ಚಕರಾದ ಪ್ರವೀಣ ಪೂಜಾರಿ, ನಿಂಗಪ್ಪ ಪೂಜಾರಿ, ಧನಜಂತಿಯ ಛತ್ರಿ, ಅನೀಲ ಜಾಧವ, ಅಶೋಕ ಯಾದವಾಡ, ಚಂದ್ರಕಾಂತ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.