ಲೋಕದರ್ಶನ ವರದಿ
ವಿಜಯಪುರ 28: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಚಿಮ್ಮಲಗಿ ತಾಂಡಾದ ಮನೆಯೊಂದರ ಮೇಲೆ ಅಬಕಾರಿ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ವಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 60 ಸಾವಿರ ರೂ. ಮೌಲ್ಯದ 2.5 ಕೆ,.ಜಿ ಗಾಂಜಾ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂದಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಆರೋಪಿ ಸಗರಪ್ಪ ಬಾನಪ್ಪ ಲಮಾಣಿ ಎಂಬವರ ಮನೆ ಮನೆಯಲ್ಲಿ ಅಬಕಾರಿ ದಾಳಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ. ವೈ ಮಂಜುನಾಥ ಹಾಗೂ ವಿಜಯಪುರ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಎ.ರವಿಶಂಕರ ರವರ ಇವರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಚಕ್ಷಣಾ ದಳದ ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಅಬಕಾರಿ ದಾಳಿಯಲ್ಲಿ ಸಿಬ್ಬಂದಿಗಳಾದ ಆಯ್ ಆರ್ ಹಟ್ಟಿ, ಎನ್ ಎ ಬಾರಾಗಣಿ, ರುದ್ರು ಕುಂಬಾರ, ವಿನೋಧ ಶಾಪೇಟಿ, ಆನಂದ ಪೂಜಾರಿ, ವಿಶಾಲ ಬಂಡಿ ಅವರು ಭಾಗವಹಿಸಿದ್ದರು.