ಲೋಕದರ್ಶನ ವರದಿ
ವಿಜಯಪುರ 13: ಬಸವನ ಬಾಗೇವಾಡಿ ತಾಲೂಕಿನ ಯಂಭತ್ತಾಳ ಗ್ರಾಮದಲ್ಲಿ ಶ್ರೀ ಗೌರಿಶಂಕರ ದೇವರ 75ನೇ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಸಾಧಕರಿಗೆ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ 'ಶ್ರೀ ಗೌರಿಶಂಕರ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ವಿಜಯಪುರದ ಹಾಸಿಂಪೀರ ವಾಲಿಕಾರ (ಸಮಾಜ ಕ್ಷೇತ್ರ), ಶಕುಂತಲಾ ಹಿರೇಮಠ (ಸಂಗೀತ ಕ್ಷೇತ್ರ), ತಾಳಿಕೋಟಿಯ ಡಾ. ಸುಜಾತಾ ಚಲವಾದಿ (ಸಾಹಿತ್ಯ ಕ್ಷೇತ್ರ), ಇಂಗಳೇಶ್ವರದ ಕೆ.ಎಸ್. ಬಾಗೇವಾಡಿ (ಜಾನಪದ ಕ್ಷೇತ್ರ) ಈ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಇ ಸಚಿವ, ಬ.ಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ, ಚಿಮ್ಮಲಗಿಯ ಶ್ರೀ ನೀಲಕಂಠೇಶ್ವರ ಶಿವಾಚಾರ್ಯರು, ಶಿವಾನಂದ ಮಂಗಾನವರ ಮುಂತಾದವರು ಸಮಾರಂಬದಲ್ಲಿ ಉಪಸ್ಥಿತರಿದ್ದರು.