ಲೋಕದರ್ಶನ ವರದಿ
ವಿಜಯಪುರ 19: ಗ್ರಾಹಕರ ಉತ್ಕೃಷ್ಟ ಸೇವೆಗಾಗಿ ಕಂಪನಿ ವತಿಯಿಂದ ವಿನೂತನ ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಮಾಡಿಕೊಡುತ್ತಿದ್ದು, ಇದೊಂದು ಪ್ರಗತಿಪರವಾದ ಮನೋಭಾವನೆ ಹೊಂದಿದ ಉದ್ದಿಮೆಯಾಗಿದೆ. ಗ್ರಾಹಕರನ್ನು ಸಂತೃಪ್ತ ಪಡಿಸುವುದೇ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜೆಕೆ ಟೈರ ಉದ್ಯಮದ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಶರ್ಮಾ ಹೇಳಿದರು.
ಶುಕ್ರವಾರ ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮನಗೂಳಿ ರಸ್ತೆಯ ಪಕ್ಕದಲ್ಲಿ ಪ್ರಾರಂಭಿಸಲಾದ ಜೆಕೆ ಟೈರ್ ಸೆಂಟರ್ ನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ 47 ಕೇಂದ್ರಗಳನ್ನು ಈಗಾಗಲೇ ಪ್ರಾರಂಭವಾಗಿದ್ದು, ಕರ್ನಾಟಕದಲ್ಲಿ ಇದು 4 ನೇಯ ಶಾಖೆಯಾಗಿದೆ. ದೇಶದಲ್ಲಿ ಸಾಕಷ್ಟು ಕಂಪನಿಗಳಿದ್ದರೂ ಗ್ರಾಹಕರ ಉತ್ಕೃಷ್ಟ ಬೇಡಿಕೆಗಳಿಗೆ ತಕ್ಕಂತೆ ಜೆಕೆ ಕಂಪನಿಯು ಉತ್ತಮ ರೀತಿಯ ಉತ್ಪಾದನೆ ಮಾಡಿ ಅನುಕೂಲ ಮಾಡಿಕೊಡುತ್ತಿದೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ನೂರು ದೇಶಗಳಲ್ಲಿ ಜೆಕೆ ಕಂಪನಿ ಕಾರ್ಯ ನಿರ್ವಹಿಸುತ್ತಿದೆ.
ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ಅತ್ಯಂತ ಆಧುನಿಕ ಉದ್ದಿಮೆಯನ್ನು ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಈ ನಿಟ್ಟಿನಲ್ಲಿ ಗ್ರಾಹಕರು ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜೆ.ಕೆ.ಟಾಂರ್ಸ್, ರಾಜಗೋಪಾಲ, ಫೀಲಿಟ್ ಮ್ಯಾನೇಜರ್, ಜಿ. ವಿನಯ, ಸೇಲ್ಸ್ ಮ್ಯಾನೇಜರ್, ರೋನಾಲ್ಡ್ ಡಿಸೋಜಾ ಫೀಲಿಟ್ ಮ್ಯಾನೇಜರ್, ರಾಜನ್, ಸಂತಿಲ್, ಸುಬ್ರಮಣ್ಯ, ನವೀನ, ನಿಜಲಿಂಗ ಡುಮಕಿಮಠ, ಲಾರಿ ಟ್ರಾನ್ಸ್ಪೋಟರ್್ ಮಾಲೀಕರಾದ ಅಶೋಕ ಉಪ್ಪಿನ್, ರಾಜು ಕುಲರ್ೆ, ಚಂದ್ರಶೇಖರ ನಾಡಗೌಡ, ವೈ.ಎಸ್. ಟಿಂಗಳೆ, ಟೈಯರ್ಸ್ & ವಿಲ್ಸ್ ಮಾಲೀಕರಾದ ಅರುಣ ಯಡಹಳ್ಳಿ, ಸಂಜೀವ ದಿವಾನಿಜಿ, ಗೀರೀಶ ಅಕ್ಕಲಕೋಟ, ಗೋವಿಂದ ಜೋಶಿ ಇತರರು ಉಪಸ್ಥಿತರಿದ್ದರು.