ವಿಜಯಪುರ: ನ್ಯಾಯವಾದಿಯ ಮೇಲೆ ದೌರ್ಜನ್ಯ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ವಿಜಯಪುರ 18: ಸಿಂದಗಿಯ ನ್ಯಾಯವಾದಿ ಎಂ.ಬಿ. ಅಂಗಡಿ ಅವರ ಮೇಲೆ ದೌರ್ಜನ್ಯ ನಡೆಸಿರುವ ದೇವರಹಿಪ್ಪರಗಿ ಪಿಎಸ್ಐ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ನ್ಯಾಯವಾದಿಗಳು ಬುಧವಾರ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್. ಖಾಸನೀಸ್, ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯವಾದಿಗಳ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಲೇ ಇವೆ, ನ್ಯಾಯದಾನದ ಪವಿತ್ರ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಅದರಲ್ಲೂ ಕಾನೂನಿನ ರಕ್ಷಕರಾದ ಪೊಲೀಸರೇ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ದುರ್ದ್ಯ್ವ ಹಾಗೂ ನೋವಿನ ಸಂಗತಿ, ಕಾನೂನು ರಕ್ಷಣೆಯ ಕರ್ತವ್ಯದಲ್ಲಿರುವವರೇ ಈ ರೀತಿಯ ಕೃತ್ಯವೆಸಗಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನ್ಯಾಯವಾದಿ ಎಂ.ಬಿ. ಅಂಗಡಿ ಅವರ ಮೇಲೆ ದೇವರಹಿಪ್ಪರಗಿ ಪಿಎಸ್ಐ ದೌರ್ಜನ್ಯ ನಡೆಸಿರುವುದು ಖಂಡನೀಯ. ಕೂಡಲೇ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ನೀಡಿ, ನ್ಯಾಯವಾದಿಗಳ ಮೇಲೆ ಹಲ್ಲೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

     ನ್ಯಾಯವಾದಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎನ್.ರುಣವಾಲ, ಕಾರ್ಯದಶರ್ಿ ಆರ್.ಎನ್.ಅಡ್ಡೋಡಗಿ,  ಸಹ ಕಾರ್ಯದಶರ್ಿ ಸಿ.ಎ.ಇಂಚಿಗೇರಿ, ಗಂಥಾಲಯ ಕಾರ್ಯದರ್ಶಿ  ಎಸ್.ಎಸ್.ಚೂರಿ, ಆಡಳಿತ ಮಂಡಳಿಯ ಸದಸ್ಯರಾದ  ಬಿ.ಬಿ.ಹಿಪ್ಪರಗಿ, ಕೆ.ಸಿ.ರಾಠೋಡ, ಎಂ.ಆರ್.ಹವಾಲ್ದಾರ, ವಿ.ಎಸ್. ಪಾಟೀಲ, ಈಶ್ವರ ಅಲ್ಲಿಗೀಡದ,  ಗೀತಾ ಕನಕರಡ್ಡಿ, ಬಿ.ಎ.ಲಾಹೋರಿ, ಮಾಚಕನೂರ, ವ್ಹಿ.ಟಿ.ರಾಮು ಅಂಗಡಿ, ಎ.ಎ.ಮಾನೆ, ಎಚ್.ಎಂ. ಪಟೇಲ, ಎಸ್.ಎಸ್.ಪೂಜಾರಿ, ಎಸ್.ಎಸ್.ಹೋನಮನಿ, ಎಸ್.ಎಸ್.ಬಿರಾದಾರ ಬರಡೋಲ,  ಸಂತೋಷ ಗುಡದಿನ್ನಿ, ಬಿ.ವೈ. ಧಾಳಿ, ನಾಟಿಕಾರ ವ್ಹಿ.ಪಿ, ಎಸ್.ಐ.ಪಾಟೀಲ, ಎ.ಎಚ್ ಜೈನಾಪೂರ, ಸಿ.ಪಿ.ಪಾಟೀಲ, ಎಸ್.ಬಿ.ನಂದೂರ, ಕೆ.ಎಂ.ಜತಕರ, ಡಿ.ಕೆ.ಯರನಾಳ, ಅಣ್ಣಪ್ಪಗೌಡ ಪಾಟೀಲ,  ಬನಸೋಡೆ, ಎನ್.ಎಸ್.ಕುಲಕಣರ್ಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.