ವಿಜಯಪುರ: ಗುತ್ತಿಗೆದಾರರ ಬಿಲ್ಲು ತಡೆಹಿಡಿಯಲು ಮನವಿ

ಲೋಕದರ್ಶನ ವರದಿ

ವಿಜಯಪುರ 19: ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಲ್ಲಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಹಾಗೂ ಕಾಲುವೆಗಳ ವಿಶೇಷ ದುರಸ್ತಿಗೊಳಿಸುವ ಕ್ಲೋಜರ್ ಹಾಗೂ ಸ್ಪೇಶಲ್ ರಿಪೇರಿ ಕಾಮಗಾರಿಗಳ ಗುತ್ತಿಗೆ ಪಡೆದವರ ಬಿಲ್ಲನ್ನು ತಡೆಹಿಡಿಯಬೇಕು ಎಂದು ಕೃಷ್ಣಾ ಭಾಗ್ಯ ಜಲನಿಗಮದ ಆಲಮಟ್ಟಿ ವಲಯ ಮುಖ್ಯಅಭಿಯಂತರ ಮೂಲಕ ಜಲಸಂಪನ್ಮೂಲ ಸಚಿವರಿಗೆ ಕರವೇ ಆಲಮಟ್ಟಿ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. 

ಬೇಸಿಗೆಯ ಅವಧಿಯಲ್ಲಿ ಕಾಲುವೆಗಳಲ್ಲಿನ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಮತ್ತು ವಿಶೇಷ ದುರಸ್ತಿಗೊಳಿಸುವ ಕಾಮಗಾರಿಗಳನ್ನು ಮಾಡದೇ ಮುಂಗಾರು ಮಳೆ ಆರಂಭವಾದ ನಂತರ ಮತ್ತು ಕೃಷ್ಣೆಯ ಉಗಮಸ್ಥಾನದಲ್ಲಿ ವ್ಯಾಪಕವಾಗಿ ಮಳೆ ಸುರಿದು ಆಲಮಟ್ಟಿ ಲಾಲಬಹಾದ್ದೂರಶಾಸಿ ಜಲಾಶಯ ತುಂಬುವ ವೇಳೆಯಲ್ಲಿ ಕಾಲುವೆಗಳ ಕ್ಲೋಜರ್ ಹಾಗೂ ಸ್ಪೇಶಲ್ ರಿಪೇರಿ ಕಾಮಗಾರಿಗಳಿಗೆ ಟೆಂಡರ್ ಕರೆದಿರುವದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. 

ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಬಿಲ್ಲನ್ನು ತಡೆಹಿಡಿಯದ ಪಕ್ಷದಲ್ಲಿ ಅವಳಿ ಜಿಲ್ಲೆಯ ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಉಗ್ರಹೋರಾಟ ಮಾಡಲಾಗುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಕನರ್ಾಟಕ ರಕ್ಷಣಾವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಆಲಮಟ್ಟಿ ಘಟಕದ ಅಧ್ಯಕ್ಷ ಚಂದ್ರಶೇಖರ ಬಳ್ಳಾರಿ, ರಫೀಕ ಅಥಣಿ, ಮೈಬೂಬ ಡೊಣೂರ, ಆಶೀ ಕಂಕಣಪೀರ, ಮೈಬೂಬ ತೆಲಗಿ ಮೊದಲಾದವರಿದ್ದರು.