ವಿಜಯಪುರ: ವಿಳಂಬ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮನವಿ

ವಿಜಯಪುರ 14: ಗೋವಾದಲ್ಲಿ ನಡೆದ ನೈಋತ್ಯ ರೇಲ್ವೆ ಇಲಾಖೆಯ ಸಭೆಯಲ್ಲಿ ರೇಲ್ವೆ ಮಂಡಳಿ ಸದಸ್ಯ ಮಳುಗೌಡ ಪಾಟೀಲ ಭಾಗವಹಿಸಿ ನಮ್ಮ ಜಿಲ್ಲೆಯಲ್ಲಿ ನಡೆದ ಎಲ್ಲ ಇಲಾಖೆ ಕಾಮಗಾರಿಯ ವಿಳಂಬದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮನವಿ ಮಾಡಿದರು. 

ನಂತರ ವಜ್ರಹನುಮಾನ ದೇವಸ್ಥಾನದ ಹತ್ತಿರ ಒವರ ಬ್ರಿಜ್ನ್ನು ಮಾರ್ಚ 2020 ತಿಂಗಳಲ್ಲಿ ಮುಗಿಸುವದಾಗಿ ವ್ಯವಸ್ಥಾಪಕರಾದ ವಿ.ಕೆ.ಸಿಂಗ ಅವರು ಮಳುಗೌಡ ಪಾಟೀಲ ಅವರಿಗೆ ತಿಳಿಸಿದರು. ಹಾಗೂ ವಜ್ರಹನುಮಾನ ದೇವಸ್ಥಾನದ ಹತ್ತಿರ ಸ್ಕೈ ವಾಕನ್ನು ನಿರ್ಮಿಸಲು ಹಾಗೂ ವಿಜಯಪುರ ಯಶವಂತಪೂರ ರೈಲಿನ ಸಮಯವನ್ನು ಬದಲಾವಣೆ ಮಾಡುವದು ಹಾಗೂ ರೈಲ್ವೆ ನಿಲ್ದಾಣದಲ್ಲಿ ಸಿ.ಸಿ. ಟಿ.ವಿ ಅಳವಡಿಸುವದು, ಜಿಲ್ಲೆಯಲ್ಲಿರುವ ಎಲ್ಲ ರೇಲ್ವೆ ನಿಲ್ದಾಣದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಮುಂತಾದ ಸಮಸ್ಯೆಗಳನ್ನು ಶಿಘ್ರದಲ್ಲಿ ಪೂರ್ಣಗೊಳಿಸಲಾಗುವದು ಎಂದು ಭರವಸೆ ನೀಡಿದರು.