ವಿಜಯಪುರ: 59 ಕೋಟಿ ರೂ. ಯೋಜನೆಗೆ ಸರ್ಕಾರ ಅನೋಮೊದನೆ

ಲೋಕದರ್ಶನ ವರದಿ

ವಿಜಯಪುರ 13: ಜಿಲ್ಲೆಯಲ್ಲಿ ನಿಮರ್ಿಸಿರುವ ಕಾಲುವೆಗೆ ನೀರು ಹರಿಸಿ, ಆ ಕಾಲುವೆಗಳಿಂದ ಜಿಲ್ಲೆಯ ವಿವಿಧ 200ಹಳ್ಳಗಳಿಗೆ ನೀರು ಹರಿಸುವ 59ಕೋಟಿ ರೂ. ಯೋಜನೆಗೆ ಸರ್ಕಾರ ಅನೋಮೊದನೆ ನೀಡಿದೆ ಎಂದು ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಹೇಳಿದ್ದಾರೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನಾಗರಾಳದಲ್ಲಿ ನಾಗರಾಳ-ನಿಡೋಣಿ-ಹೆಬ್ಬಾಳಟ್ಟಿ-ಅರ್ಜುಣಗಿವರೆಗೆ 7ಕಿ.ಮೀ ರಸ್ತೆಯನ್ನು 450ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ವಿಜಯಪುರ ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಲು ನನ್ನ ಪ್ರಮಾಣಿಕವಾದ ಪ್ರಯತ್ನ ಮಾಡಿದ್ದೇನೆ. ಆಲಮಟ್ಟಿ ಆಣೆಕಟ್ಟು ಎತ್ತರಿಸಲು ಕಾನೂನಾತ್ಮಕ ತೊಂದರೆಗಳಿಂದ ಜಿಲ್ಲೆ ವಂಚಿತವಾಗಬಾರದು. ಆ ಕಾರಣಕ್ಕಾಗಿ ಈಗಾಗಲೇ ನಿಮರ್ಿಸಿದ ಕಾಲುವೆ ಜಾಲ ಮೂಲಕ ಹಳ್ಳಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಪ್ರತಿ ಹಳ್ಳಗಳಿಗೆ 500ಮೀಟರಗೆ ಒಂದು ಚೆಕ್ಡ್ಯಾಂ, ಒಂದು ಇಂಗು ಭಾವಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಹಳ್ಳಗಳಲ್ಲಿ ವೇಗವಾಗಿ  ನೀರು ಹರಿದು, ಪೋಲಾಗದಂತೆ ತಡೆಯುವದು ಮತ್ತು ಹೆಚ್ಚಿನ ನೀರನ್ನು ಭೂಮಿಯಲ್ಲಿ ಇಂಗಿಸುವ ಮೂಲಕ ಜಿಲ್ಲೆಯಾದ್ಯಂತ ಅಂತಜರ್ಾಲವನ್ನು ಹೆಚ್ಚಿಸುವ ವಿನೂತನ ಪರಿಕಲ್ಪನೆ ಈ ಯೋಜನೆಯಲ್ಲಿದೆ. ಅಲ್ಲದೆ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಇಂಡಿ ತಾಲೂಕಿನ 15-20ಕೆರೆಗಳನ್ನು ತುಂಬಿಸಲಾಗುವುದು ಎಂದರು.

ನಿಡೋಣಿ-ಧನ್ಯಾಳ ವರೆಗೆ 7ಕಿ.ಮೀ ರಸ್ತೆಯನ್ನು 4ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿ. ಕೋಟ್ಯಾಳ-ದಾಶ್ಯಾಳ-ನಿಡೋಣಿ 6ಕಿ.ಮೀ ರಸ್ತೆಯನ್ನು 5ಕೋಟಿ ವೆಚ್ಚದಲ್ಲಿ ಹಾಗೂ ಹೆಬ್ಬಾಳಟ್ಟಿ-ಅರ್ಜುನಗಿ 4ಕಿ.ಮೀ 92ಲಕ್ಷ, ಹೆಬ್ಬಾಳಟ್ಟಿ-ತೊದಲಬಾಗಿ 4ಕಿ.ಮೀ 90ಲಕ್ಷ ವೆಚ್ಚದಲ್ಲಿ ರಸ್ತೆ ಸುಧರಾಣೆ ಕಾಮಾಗಾರಿಗಳಿಗೆ ಎಂ.ಬಿ.ಪಾಟೀಲ್ ಇಂದು ಆಯಾ ಗ್ರಾಮಗಳಲ್ಲಿ ಚಾಲನೆ ನೀಡಿದರು.

ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ್, ತಾಜಪುರ ಗ್ರಾ.ಪಂ. ಅಧ್ಯಕ್ಷ ದಾಮುಲು ಚವ್ಹಾಣ, ಆರ್.ಜಿ.ಯರನಾಳ, ಮುಖಂಡರಾದ, ಸಾಹೇಬಗೌಡ ಪಾಟೀಲ್, ಎಸ್.ವಿ.ಪಾಟೀಲ್, ಬಿ.ಒ.ಪಾಟೀಲ್. ಆರ್.ವಿ.ಜಾಧವ, ನಿಂಗನಗೌಡ ಬಿರಾದಾರ, ಬಾಪುಗೌಡ ಬಿರಾದಾರ, ಮೊಹಮ್ಮದ ಹನಿಫ್ ಜಮಾದಾರ, ಮುಕ್ತಾಂಕರ ಬೆನಕಟ್ಟಿ, ಸದಾಶಿವ ತೊದಲಬಾಗಿ, ನಾಗಪ್ಪ ಬೂದಿ, ಮಲ್ಲನಗೌಡ ಪಾಟೀಲ್, ನಾಗರಾಜ ಲಂಬು ಮತ್ತಿತರರು  ಉಪಸ್ಥಿತರಿದ್ದರು.