ಲೋಕದರ್ಶನ ವರದಿ
ವಿಜಯಪುರ 15: ತಿಕೋಟಾ ಗ್ರಾಮ ಪಂಚಾಯ್ತಿಯನ್ನು ಮೇಲ್ದರ್ಜೆಗೆರಿಸಿ, ಪಟ್ಟಣ ಪಂಚಾಯ್ತಿ ಮಾಡಿದ್ದು, ಅದೇ ರೀತಿ ಬಬಲೇಶ್ವರ ಗ್ರಾಮ ಪಂಚಾಯ್ತಿಯನ್ನು ಸಹ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವದು ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕ ಹೇಳಿಕೆ ನೀಡಿರುವ ಅವರು, ಬಬಲೇಶ್ವರ ಮತ್ತು ತಿಕೋಟಾ ಎರಡು ಗ್ರಾಮ ಪಂಚಾಯತಗಳನ್ನು ಪಟ್ಟಣ ಪಂಚಾಯತ್ ಮಾಡುವ ಉದ್ದೇಶದಿಂದ ಬೆಂಗಳೂರಿನ ಟೈಡ್ ಟೆಕ್ನೋ ಕ್ರ್ಯಾಕ್ ಪ್ರೈವೈಟ್ ಕಂಪನಿಯು 2018ರಲ್ಲಿ ಈ ಎರಡು ಗ್ರಾಮಗಳನ್ನು ಸರ್ವೆ ಮಾಡಿ, ಒಟ್ಟಿಗೆ ಪಟ್ಟಣ ಪಂಚಾಯತ್ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಸದರಿ ಪ್ರಸ್ತಾವನೆಯನ್ನು ಪರಿಗಣಿಸಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್.ಡಿ.ಪಿ.ಆರ್) ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡಿದ ಗ್ರಾಮಗಳಿಗೆ ಮಾತ್ರ ಪಟ್ಟಣ ಪಂಚಾಯತ್ ಎಂದು ಘೋಷಿಸಿದ್ದು, ಇನ್ನುಳಿದ ಗ್ರಾಮಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್.ಡಿ.ಪಿ.ಆರ್) ಇಲಾಖೆಯಿಂದ ನಿರಪೇಕ್ಷಣಾ ಪತ್ರ ಸಲ್ಲಿಸಿದ ನಂತರ ಬಬಲೇಶ್ವರ ಗ್ರಾಮ ಪಂಚಾಯತ ಸಹ ಪಟ್ಟಣ ಪಂಚಾಯತ್ ಎಂದು ಘೋಷಿಸುವುದಾಗಿ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್.ಡಿ.ಪಿ.ಆರ್) ಇಲಾಖೆ ಪ್ರಧಾನಕಾರ್ಯದಶರ್ಿಗಳೊಂದಿಗೆ ಇಂದು ನಾನು ದೂರವಾಣಿ ಮೂಲಕ ಮಾತನಾಡಿದ್ದು, ಶೀಘ್ರದಲ್ಲಿ ಬಬಲೇಶ್ವರ ಗ್ರಾಮ ಪಂಚಾಯತ್ನ್ನು ಪಟ್ಟಣ ಪಂಚಾಯತ್ನ್ನಾಗಿ ಮೇಲ್ದಜರ್ೆಗೆ ಏರಿಸುವ ಕ್ರಮ ಜರುಗಿಸಲಿದ್ದಾರೆ ಎಂದು ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ