ಲೋಕದರ್ಶನ ವರದಿ
ವಿಜಯಪುರ 02: ಒಂದು ಕಾಲೇಜಿನ ಆಡಳಿತ, ಕಾರ್ಯಚಟುವಟಿಕೆಗಳು ಉತ್ತಮ ರೀತಿಯಿಂದ ನಡೆಯಬೇಕಾದರೆ ಅಲ್ಲಿಯ ಬೋಧಕೇತರ ಸಿಬ್ಬಂದಿ ಕಾರ್ಯಜ್ಞಾನ ಹೊಂದಿದವರಾಗಿರಬೇಕು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ಹೆಚ್ಚಾಗಿ ಪ್ರತಿಯೊಂದು ವಿಷಯವು ಗಣಕಯಂತ್ರ, ಅಂತರ್ಜಾಲದ ಮೂಲಕವೇ ನಡೆಯುತ್ತಿವೆ ಇಂತಹ ಸಂದರ್ಭದಲ್ಲಿ ಆ ಸಿಬ್ಬಂದಿಗಳಿಗೆ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ತರಬೇತಿ ಅತೀ ಅವಶ್ಯಕವಾಗಿದೆ.
ಕಾರ್ಯಾಗಾರ ಕೇವಲ ಸರಕಾರಿ, ಅನುದಾನಿತ ಸಿಬ್ಬಂದಿಗೆ ನೀಡದೇ ಅನುದಾನರಹಿತ ಸಿಬ್ಬಂದಿಗೂ ವಿಸ್ತರಿಸಿದ್ದು ಶ್ಲಾಘನೀಯ. ಈ ಕಾರ್ಯಾಗಾರ ಲಾಭ ಎಲ್ಲರೂ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ಪ.ಪೂ.ಶಿ.ಇಲಾಖೆಯ ಉಪನಿರ್ದೇಶಕರಾದ ಜೆ.ಎಸ್.ಪೂಜೇರಿ ಮಾತನಾಡಿ ಪದವಿ ಪೂರ್ವ ವಿಭಾಗದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು ಆನ್ಲೈನ್ನಲ್ಲಿ ತ್ವರಿತವಾಗಿ ಮಾಹಿತಿ ದಾಖಲಿಸುವುದು,ಸೇವಾ ಪುಸ್ತಕ, ಸರಕಾರಿ/ಅರೆಸರಕಾರಿ ಹಣಕಾಸಿನ ನಿರ್ವಹಣೆ, ದಾಖಲಾತಿ ನಿರ್ವಹಣೆ, ಕಡತಗಳ ನಿರ್ವಹಣೆ ಹೀಗೆ ಹತ್ತು ಹಲವು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ ಆದಕಾರಣ ಹೊಸದಾಗಿ ಸೇವೆ ಸೇರಿದವರಿಗೂ, ಈಗಾಗಲೇ ಸೇವೆಯಲ್ಲಿರುವವರಿಗೂ ತರಬೇತಿ ಅವಶ್ಯವಾಗಿರುವದರಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕದ ಚುನಾವಣೆಯಲ್ಲಿ ಕಾರ್ಯಕಾರಿ ಸಮೀತಿಯ ನಿರ್ದೇಶಕರಾಗಿ ಅವಿರೋಧವಾಗಿ ಚುನಾಯಿತರಾದ ಪ.ಪೂ.ಶಿ.ಇಲಾಖೆಯ ಅಧೀಕ್ಷಕರಾದ ಬಿ.ಟಿ.ಗೊಂಗಡಿಯವರನ್ನು, ವಿಧಾನ ಪರಿಷತ್ತಿನ ಸದಸ್ಯ ಅರುಣ ಶಹಾಪುರ ಹಾಗೂ ಉಪನಿರ್ದೇಶಕರಾದ ಜೆ.ಎಸ್.ಪೂಜೇರಿ ಯವರನ್ನು ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜು ಹಾಗೂ ಬೋಧಕೇತರ ಸಿಬ್ಬಂದಿ ಒಕ್ಕೂಟದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಅಡಿವೆಪ್ಪ. ಸಾಲಗಲ್, ನ್ಯಾಯವಾದಿಗಳಾದ ನಾಗರಾಜ ಲಂಬು, ಎಸ್.ಬಿ.ಹೀರೇಮಠ ಉಪಸ್ಥಿತರಿದ್ದರು. ನಿವೃತ್ತ ಅಧಿಕಾರಿಗಳಾದ ಎನ್.ಎಸ್. ಪುರೋಹಿತ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿ ಮಾಹಿತಿ ಒದಗಿಸಿದರು. ಜಿಲ್ಲೆಯ ಪ.ಪೂ.ಶಿ.ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 250 ಜನ ಬೋಧಕೇತರ ಸಿಬ್ಬಂದಿ ಕಾರ್ಯಗಾರದ ಲಾಭ ಪಡೆದುಕೊಂಡರು.
ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಸಾವಳಸಂಗ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಪ್ರೊ.ಎಸ್.ಆರ್.ಬಿರಾದಾರ ವಂದಿಸಿದರು, ಪ್ರೊ.ಎಂ.ಬಿ.ರಜಪೂತ ಅಚ್ಚುಕಟ್ಟಾಗಿ ಕಾಯಕ್ರಮವನ್ನು ನಿರೂಪಿಸಿದರು.