ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕಟ್ಟಡ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಿ: ಜಿಲ್ಲಾ ಪಂಚಾಯತ ಅಧ್ಯಕ್ಷ ವಿಶ್ವನಾಥರಡ್ಡಿ


ಕೊಪ್ಪಳ 10: ಕೊಪ್ಪಳ ಜಿಲ್ಲೆಯಾದ್ಯಂತ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಡಿಪಿಒ ಭೇಟಿ ನೀಡಿ ಕಟ್ಟಡಗಳ ಸ್ಥಿತಿ-ಗತಿ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥರಡ್ಡಿ ಅವರು ಸೂಚನೆ ನೀಡಿದರು.  

ಅವರು ಜಿಲ್ಲಾ ಪಂಚಾಯತನ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಇಂದು (ಡಿ.10) ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಮಂಜುರಾದ 05 ಅಂಗನವಾಡಿ ಕಾಮಗಾರಿಗಳು ಅದರಲ್ಲಿ ನಾಲ್ಕು ಕಾಮಗಾರಿಗಳು ಪ್ರಾರಂಭದ ಹಂತದಲ್ಲಿವೆ. 2017-18ನೇ ಸಾಲಿನ ಸ್ವಚ್ಛ ಭಾರತ ಮಿಷನ್ (ಗ್ರಾ) ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಒಗ್ಗೂಡಿಕೆಯಲ್ಲಿ ಜಿಲ್ಲೆಯಲ್ಲಿ ಅಂಗನವಾಡಿ ಶೌಚಾಲಯಗಳ ನಿಮರ್ಾಣ ಮಾಡುವುದಕ್ಕೆ 50 ಕಾಮಗಾರಿಕೆಯನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ 37 ಅಂಗನವಾಡಿ ಕಾಮಗಾರಿಗಳು ಪೂರ್ಣಗೊಂಡಿದ್ದು, 12 ಕಾಮಗಾರಿಗಳು ಪ್ರಗತಿಯಲ್ಲಿವೆ. ಎರಡು ಕಾಮಗಾರಿಗಳಿಗೆ ನಿವೇಶನಗಳು ದೊರೆತಿರುವುದಿಲ್ಲ.  ಜಿಲ್ಲೆಯಲ್ಲಿ ಇನ್ನು 120 ಅಂಗನವಾಡಿಗಳ ಅವಶ್ಯಕತೆ ಇದೆ. ಅಂಗನವಾಡಿಯಲ್ಲಿ ಮಕ್ಕಳು ಹೆಚ್ಚಾಗಿರುವುದರಿಂದ ಕಿಚನ್ ಗಾಡರ್್ನ್ ನಿರ್ಮಿಸಿ ಅವರಿಗೆ ಪೌಷ್ಠಿಕ ಆಹಾರ ನೀಡುವುದು ನಮ್ಮೆಲ್ಲರ ಕರ್ತವ್ಯ.  ಬಹಳಷ್ಟು ಹಳ್ಳಿಗಳಲ್ಲಿ ಅಂಗನವಾಡಿ ಸಮಸ್ಯೆಗಳು ಇವೆ. ಜಿಲ್ಲೆಯಲ್ಲಿರುವ ಹಲವಾರು ಹಳ್ಳಿಗಳಲ್ಲಿ ಬಾಡಿಗೆ ಮನೆಗಳಲ್ಲಿ  ಅಂಗನವಾಡಿಗಳನ್ನು ನಡೆಸುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿ.ಡಿ.ಪಿ.ಓ.ಗಳು ಜಿಲ್ಲೆಯಲ್ಲಿರು ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಎರಡು ದಿನಗಳಲ್ಲಿ ಅಲ್ಲಿರುವ ಅಂಗನವಾಡಿ ಪ್ರಗತಿಯ ಬಗ್ಗೆ ನಮಗೆ ಮಾಹಿತಿ ತಿಳಿಸಬೇಕು ಎಂದು ಹೇಳಿದರು.

ಕುಡಿಯುವ ನೀರನ್ನು ಮುಂದಿನ ಬೇಸಿಗೆಗೆ ಉಳಿತಾಯವಾಗುವಂತೆ ಬಳಸಿ.  ಜಿಲ್ಲೆಯಲ್ಲಿ  1,400 ಕೃಷಿ ಹೊಂಡಗಳಿವೆ ಬರಗಾಲದಲ್ಲಿ ಕೃಷಿ ಹೊಂಡಗಳು ರೈತ ಕೈ ಹಿಡಿಯುತ್ತವೆ ಎಂದರು.

2020ರ ಫೆಬ್ರುವರಿ ತಿಂಗಳ ಒಳಗೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಟೆಂಡರ್ಗಳನ್ನು ಮುಗಿಸಿರಬೇಕು. ಇರಕಲ್ಲಗಡದಲ್ಲಿ ಸರ್ಕಾರಿ ವಸತಿ ಶಾಲೆ ನಿರ್ಮಿಸಲು ಜಾಗ ಇದೆ. ಅಲ್ಲಿರುವ ಜಾಗ ಸರ್ಕಾರಿ ಜಾಗ ಹೌದಾ ಅಲ್ಲಾವಾ ಎಂದು ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಇರಕಲ್ಲಗಡ ಬಿಟ್ಟು ಒಂದು ನೂರು ಕಿ.ಮಿ. ದೂರದಲ್ಲಿ ವಸತಿ ಶಾಲೆಯನ್ನು ನಿಮರ್ಿಸಿದರೆ ಮಕ್ಕಳಿಗೆ ಅನಾರೋಗ್ಯವಾದಾಗ ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲಾ. ಆದ್ದರಿಂದ ಮಕ್ಕಳಿಗೆ ಅನುಕೂಲವಾಗುವಂತೆ ವಸತಿ ಶಾಲೆಯನ್ನು ನಿರ್ಮಿಸಬೇಕು ಎಂದು ತಿಳಿಸಿದರು.      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂರ್ತಿ  ಮಾತನಾಡಿ, ಸರ್ಕಾರ ದಿಂದ ಆದೇಶ ಬಂದ ಮೇಲೆ ಲ್ಯಾಂಡ್ ಆಮರ್ಿ ತೆಗೆದುಕೊಂಡು ಆವರ್ೊ ಪ್ಲ್ಯಾಂಟ್ಗಳನ್ನು ನಿರ್ಮಾಣ ಮಾಡಬೇಕು. ಗ್ರಾಮೀಣ ಕುಡಿಯುವ ನೀರು  ಲ್ಯಾಂಡ್ ಆಮರ್ಿ ಸರಿಯಾದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಆವರ್ೊ ಪ್ಲ್ಯಾಂಟ್ಗಳು ಆಳಾಗಿದ್ದರಿಂದ ಸರಿಯಾದ ವ್ಯವಸ್ಥೆಯಲ್ಲಿ ಜನರಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂಕಿ-ಅಂಶಗಳ ಆದಾರದ ಮೇಲೆ ಜನರಿಗೆ ಕುಡಿಯುವ ನೀರನ್ನು ಕೊಡುವುದಕ್ಕೆ ಆಗುವುದಿಲ್ಲ. ರಾಜ್ಯದಲ್ಲಿ ಮೊದಲಿಗೆ ನಮ್ಮ ಜಿಲ್ಲೆಯೇ ಆವರ್ೊ ಪ್ಲ್ಯಾಂಟ್ಗೆ ಅನುದಾನ ಕೊಡಿ ಎಂದು ಕೇಳಿದ್ದೇವೆ. ಆದ್ದರಿಂದ ಕುಡಿಯುವ ನೀರು ಮುಂದೆ ಬರುವ ಬೇಸಿಗೆಗೆಯನ್ನು ಗಮನದಲ್ಲಿಟ್ಟಿಕೊಂಡು ನೀರನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಉಪ ಕಾರ್ಯದಶರ್ಿ ಎನ್.ಕೆ ತೊರವಿ, ಯೋಜನಾ ನಿರ್ದೇಶಕ ರವಿ ಬಿಸರಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಜಂಟಿ ಕೃಷಿ ನಿರ್ದೇಶಕಿ ಶಬಾನಾ ಎಂ. ಶೇಖ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಲಿಂಗರಾಜ್, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣಾ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಇದೇ ಸಂದರ್ಭದಲ್ಲಿ ನಡೆಯಿತು.