ಮತದಾರ ಪಟ್ಟಿ ವಿಶೇಷ ಪರಿಪ್ಕರಣೆ ಡಿ. 16ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ

ಗದಗ 07: ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ವಿಧಾನಸಭಾ ಕ್ಷೇತ್ರವಾರು  ಮತದಾರರ ಪಟ್ಟಿ ವಿಶೇಷ  ಪರಿಷ್ಕರಣೆ ನಡೆಯುತ್ತಿದ್ದು ಕರಡು ಮತದಾರರ ಪಟ್ಟಿಯನ್ನು  ಡಿ. 16ರಂದು  ಪ್ರಕಟಿಸಲಾಗುತ್ತಿದೆ.  2020ರ ಜನೆವರಿ 15ರವರೆಗೆ  ಈ ಮತದಾರರ ಕರಡು ಪಟ್ಟಿಯ ಕುರಿತಂತೆ ಮತದಾರರು ಪರಿಶೀಲಿಸಿ  ಹಕ್ಕು ಹಾಗೂ ತಿದ್ದುಪಡಿ ಗಳನ್ನು ಸಲ್ಲಿಸಬಹುದಾಗಿದೆ ಎಂದು  ಗದಗ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ವೀಕ್ಷಕರಾದ ಹಾಗೂ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ  ಅವರು ತಿಳಿಸಿದರು.  

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ  ಕ್ಷೇತ್ರಗಳ  ಮತದಾರರ ಪಟ್ಟಿಯ ವಿಶೇಷ  ಪರಿಷ್ಕರಣೆ ಚಟುವಟಿಕೆಗಳನ್ನು ಪರಿಶಿಲಿಸಿ ಅವರು ಮಾತನಾಡಿದರು.   ಕರಡು ಮತದಾರರ ಪಟ್ಟಿಯ ಕುರಿತಂತೆ  ಬರುವ ಹಕ್ಕು ಹಾಗೂ ತಿದ್ದುಪಡಿಗಳನ್ನು  2020ರ ಜನೆವರಿ 27 ರೊಳಗಾಗಿ  ವಿಲೇವಾರಿ ಮಾಡಬೇಕಿದ್ದು, ಫೆಬ್ರುವರಿ 4 ಕ್ಕೆ   ಪೂರಕ ಮತದಾರರ ಪಟ್ಟಿಗಳನ್ನು ತಯಾರಿಸಿ ಫೆಬ್ರುವರಿ 7 ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದೆಂದರು. ರಾಜ್ಯದಲ್ಲಿ  ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ   ಗದಗ ಜಿಲ್ಲೆಯು 4 ನೇ ಸ್ಥಾನದಲ್ಲಿದೆ.  ಇದನ್ನು ಹೆಚ್ಚಿಸಲು ಅವಕಾಶವಿದ್ದು  ಈ ಕುರಿತು ನಿಗಾ ವಹಿಸಿ ತೀವ್ರವಾಗಿ  ಬಾಕಿ ಉಳಿದ ಪರಿಷ್ಕರಣಾ ಕಾರ್ಯ ಮುಗಿಸಬೇಕು.  18 ವರ್ಷ ಪೂರ್ಣಗೊಂಡ ಯುವಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ವಿಶೇಷ  ಶಿಬಿರಗಳನ್ನು ಆಯೋಜಿಸಬೇಕು.    ಮರಣದ ಸಂದರ್ಭದಲ್ಲಿ  ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಾಗ  ಕಡ್ಡಾಯವಾಗಿ ನಿಯಮಗಳ ಪಾಲನೆ ಮಾಡಿ ಸರಿಯಾದ ದಾಖಲೆಯನ್ನು ಹಾಗೂ ವರದಿಗಳನ್ನು    ಪೂರಕವಾಗಿ  ಇಟ್ಟುಕೊಳ್ಳಬೇಕು.  ವಿಶೇಷ ಪರಿಷ್ಕರಣೆ  ಕಾರ್ಯ ಡಿಸೆಂಬರ್ 10 ಕ್ಕೆ  ಕೊನೆಗೊಳ್ಳಲಿದ್ದು  ಅಲ್ಲಿಯವರೆಗೂ ಕಾಯದೇ   ಆದಷ್ಟು ಬೇಗನೇ  ಬಾಕಿ ಉಳಿದಿರುವ  ಒಟ್ಟು  18,831  ಪರಿಷ್ಕರಣೆ ಗಳನ್ನು ಪೂರ್ಣಗೊಳಿಸಲು  ಶಿವಯೋಗಿ ಕಳಸದ ಅವರು  ಸೂಚನೆ ನೀಡಿದರು. 

ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ  ಚುನಾವಣಾ ಸಹಾಯವಾಣಿ 1950ಹೆಚ್ಚು  ಕಾಳಜಿಯಿಂದ ಕಾರ್ಯನಿರ್ವಹಿಸಿ  ಮತದಾರರಿಗೆ ಅಗತ್ಯದ ಸಹಕಾರ ಹಾಗೂ ಮಾಹಿತಿ ನೀಡಬೇಕು.  ಮತಗಟ್ಟೆ ಅಧಿಕಾರಿಗಳಿಗೆ  ಕಾಲಕಾಲಕ್ಕೆ ತರಬೇತಿ  ನೀಡಿ ಅವರ ಕೆಲಸವು ಗುಣಾತ್ಮಕವಾಗಿರುವಂತೆ ನೋಡಿಕೊಳ್ಳಬೇಕು.    ಜಿಲ್ಲೆಯಲ್ಲಿ ಕುಟುಂಬದ ಮತದಾರರನ್ನು ಒಗ್ಗೂಡಿಸುವ ಕಾರ್ಯ  ಕೇವಲ ಶೇ. 67 ರಷ್ಟಾಗಿದೆ. ಉಳಿದ ಕಾರ್ಯವನ್ನು  ತೀವ್ರಗೊಳಿಸಬೇಕು.  ಚುನಾವಣಾ ಗುರುತಿನ ಚೀಟಿಯಲ್ಲಿ  ಮತದಾರರ ಹೆಸರು, ವಯಸ್ಸು, ವಿಳಾಸ  ಸರಿಯಾಗಿರುವಂತೆ ಹಾಗೂ ಛಾಯಾಚಿತ್ರದ ಗುಣಮಟ್ಟ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದು   ಶಿವಯೋಗಿ ಕಳಸದ ನುಡಿದರು.     

ಅರ್ಹತೆ ಇರುವ ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಿಂದ  ಬಿಟ್ಟು ಹೋಗಬಾರದು ಎನ್ನಬಾರದು ಎನ್ನುವುದು ಚುನಾವಣೆಯ ಮುಖ್ಯ ಉದ್ದೇಶ.   ಇದಕ್ಕಾಗಿ ಎಲ್ಲ ಹಂತದ  ಜನಪ್ರತಿನಿಧಿಗಳೂ ರಾಜಕೀಯ ಪಕ್ಷಗಳ  ಮುಖಂಡರು,    ಮತಗಟ್ಟೆ ಏಜೆಂಟರು,   ಮತಗಟ್ಟೆ ಅಧಿಕಾರಿಗೆ ಸಹಕಾರ ಹಾಗೂ ಸರಿಯಾದ ಮಾಹಿತಿ ನೀಡುವ ಮೂಲಕ  ವಿಶೇಷ ಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸಲು ಚುನಾವಣಾ ಆಯೋಗದ ಮತದಾರರ ಪಟ್ಟಿ ವೀಕ್ಷಕ ಶಿವಯೋಗಿ ಕಳಸದ ಅವರು ಮನವಿ ಮಾಡಿದರು.

ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ  ಜಿಲ್ಲೆಯಲ್ಲಿ  8,54,223 ಮತದಾರರಿದ್ದು  ಮತದಾರರ  ವಿವರಗಳ ಸಂಪೂರ್ಣ ಪರಿಷ್ಕರಣೆ  ಮಾಡಲಾಗಿದೆ.   ಮತಗಟ್ಟೆ ಅಧಿಕಾರಿಗಳಿಗೆ  ಕಂದಾಯ ಹಾಗೂ ಪಂಚಾಯತ್  ಅಧಿಕಾರಿ ಸಿಬ್ಬಂದಿಗಳು ಸಹಾಯ ನೀಡುತ್ತಿದ್ದು  ಶೇಕಡ 60 ಕ್ಕೂ ಹೆಚ್ಚು ಒಟ್ಟು  ಮತದಾರರ ಮಾಹಿತಿಯನ್ನು  ಮನೆ ಮನೆಗೆ ಹೋಗಿ  ಪಡೆಯಲಾಗಿದೆಎಂದು ಮಾಹಿತಿ ನೀಡಿದರಲ್ಲದೇ  ಜಿಲ್ಲೆಯ ಮತದಾರರ ವಿಶೇಷ ಪರಿಷ್ಕರಣೆ ಕುರಿತಂತೆ ಬಾಕಿ ಉಳಿದಿರುವ ಕಾರ್ಯವನ್ನು ನಿಗದಿತ ಅವಧಿಯೊಳಗಾಗಿ   ಪೂರ್ಣಗೊಳಿಸಲು ಸಹಾಯಕ ಚುನಾವಣಾಧಿಕಾರಿಗಳಾದ  ತಹಶೀಲ್ದಾರರುಗಳಿಗೆ  ಸೂಚನೆ  ನೀಡಿದರು.  

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಡಾ. ಆನಂದ್ ಕೆ  ಅವರು ಮಾತನಾಡಿ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ  ಸದ್ಯ ಅಂಗನವಾಡಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು  ಅವರ ಸ್ಥಾನದಲ್ಲಿ  ನಿವೃತ್ತ ಸರ್ಕಾರಿ ಸಿಬ್ಬಂದಿ, ಪಂಚಾಯತಿಯ ಬಿಲ್ ಕಲೆಕ್ಟರ್ಸ್ ಅವರುಗಳನ್ನು ನೇಮಿಸಬಹುದಾಗಿದೆ.    ಮತದಾರರ ಮಾಹಿತಿ ಪಡೆಯಲು ಅವಕಾಶ ವಿರುವ ಸಾಮಾನ್ಯ ಸೇವಾ ಕೇಂದ್ರಗಳು ಒಟ್ಟಾರೆ ಜಿಲ್ಲೆಯಲ್ಲಿ 300 ಇದ್ದು ಅವುಗಳ ಪೈಕಿ ಕೇವಲ 102 ಮಾತ್ರ  ಕಾರ್ಯನಿರ್ವಹಿಸುತ್ತಿವೆ.  ಈ ಕೇಂದ್ರಗಳು ಸರಿಯಾಗಿ ಕೆಲಸವನ್ನು ಮಾಡುವ ಕುರಿತು ಜನರಿಗೆ ವಿಶ್ವಾಸ ಕಡಿಮೆ ಆಗಿರುವುದು ಇದಕ್ಕೆ ಒಂದು ಕಾರಣವಾಗಿದೆ.  ಜಿಲ್ಲೆಯಲ್ಲಿ 18 ವರ್ಷ ಪೂರ್ಣಗೊಳಿಸಿದ  ಹಾಗೂ ಅರ್ಹರಿದ್ದು ಮತದಾರರ ಪಟ್ಟಿಯಲ್ಲಿ ಸೇರದವರು   ಮತದಾರರ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಗ್ರಾಮಮಟ್ಟದಲ್ಲಿ ಹಾಗೂ ಕಾಲೇಜು ಮಟ್ಟದಲ್ಲಿ  ವಿಶೇಷ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ  ಬಿಟ್ಟು ಹೋಗದಂತೆ  ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಧಲಿಂಗೇಶ್ವರ  ಎಚ್. ಪಾಟೀಲ,  ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ,  4 ವಿಧಾನಸಭಾ ಕ್ಷೇತ್ರಗಳ  ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸಿದ್ದರು.