ಪ್ರವಾಹದಿಂದ ತೊಂದರೆಯಾದವರಿಗೆ ಹಣ ಕೊಟ್ಟಿದ್ದೇವೆ: ಡಿಸಿಎಂ ಕಾರಜೋಳ

ಲೋಕದರ್ಶನ ವರದಿ

ಕೊಪ್ಪಳ 21: ಸಿದ್ದರಾಮಯ್ಯರ ಅವಧಿಯಲ್ಲಿ ಎರಡು ಮತ್ತು ಮೂರು ಸಾವಿರ ರೂ. ಕೊಟ್ಟಿದ್ದಾರೆ ಇವತ್ತು ಪ್ರವಾಹದಿಂದ ತೊಂದರೆಯಾದವರಿಗೆ ನಮ್ಮ ಸರಕಾರ ಹತ್ತು ಸಾವಿರ ರೂ.  ಕೊಟ್ಟಿದ್ದೇವೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಅವರು ಶುಕ್ರವಾರ ಸಂಜೆ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನ ಸಭೆಯಲ್ಲಿ ಪಾಲ್ಗೋಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರದಿಂದ ಅನುದಾನ ಕೇಳಲು ದಮ್ ಇಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ಇಡೀ ರಾಜ್ಯದಲ್ಲಿ ಜನರಿಗೆ ಹಣ ಕೊಟ್ಟಿದ್ದೇವೆ ಮನೆ ಕಟ್ಟಲು ಪ್ರಾರಂಭ ಮಾಡಿದವರಿಗೆ ಒಂದು ಲಕ್ಷ ಕೊಟ್ಟಿದ್ದೇವೆ. ಕೇಂದ್ರ ಸಕರ್ಾರಕ್ಕೆ 32 ಸಾವಿರ ಕೋಟಿ ಹಾನಿಯಾಗಿದೆ ಎಂದು ಮನವಿ ಮಾಡಿದ್ದೇವೆ, ಕೇಂದ್ರದಿಂದ ಹಣ ಬಿಡುಗಡೆಯಾಗುತ್ತೆ, ಅನುಮಾನ ಬೇಡ ನಮಗೆ ಹಣದ ಕೊರತೆ ಇಲ್ಲ ಎಂದ ಕಾರಜೋಳ, ಹಣ ಬಂದಿಲ್ಲ ಅಂತಾ ಯಾವುದೇ ಕೆಲಸ ನೋಡಿಲ್ಲ ಡಿ.ಸಿ.ಎಮ್ ಕ್ಷೇತ್ರದಲ್ಲಿ ಚೆಕ್ ಗೋಲ್ ಮಾಲ್ ವಿಚಾರ. ಅದು ಸತ್ಯಕ್ಕೆ ದೂರವಾದ ವಿಚಾರ ಕೆಲವರು ಕೆಲಸ ಇಲ್ಲದವರು ಆರೋಪ ಮಾಡುತ್ತಿದ್ದಾರೆ ಕೆಲ ಕುಟುಂಬಗಳು ಡಿವೈಡ್ ಆಗಿವೆ. ಹೀಗಾಗಿ ನಾಲ್ಕೈದು ಚೆಕ್ ವಿತರಣೆಯಾಗಿದೆ ನಾವು ಚೆಕ್ ಪರಿಶೀಲನೆ ಮಾಡಿ ಕೊಟ್ಟಿದ್ದೇವೆ, ಅಲ್ಲಿ ಯಾವುದೇ ಅಕ್ರಮವಾಗಿಲ್ಲ.

ಇಡೀ ತಾಲೂಕಿನಲ್ಲಿ ಇರೋರು ನಮ್ಮ ಬೆಂಬಲಿಗರೇ ಸಿಎಂಯಡಿಯೂರಪ್ಪ ಪತ್ನಿ ಸಾವಿನ ಅನುಮಾನ ವಿಚಾರ ಯಾರೂ ವಯಕ್ತಿಕ ವಿಚಾರ ಮಾತನಾಡಬಾರದು ವಯಕ್ತಿಕವಾಗಿ ಮಾತನಾಡೋದು ಅದು ಸರಿ ಅಲ್ಲ ಅದರ ಬಗ್ಗೆ ನಾನು ಮಾತನಾಡೋದಿಲ್ಲ ಎಂದ ಅವರು ವಿಜಯನಗರ ಜಿಲ್ಲೆ ವಿಚಾರ ಶಾಸಕರಾದ ಸೋಮಶೇಖರ್ ರೆಡ್ಡಿ ಮಾತನಾಡಿದ್ದು ನನಗೆ ಗೊತ್ತಿಲ್ಲ, ಬೆಳಗಾವಿ ಜಿಲ್ಲೆ ಡಿವೈಡ್ ಮಾಡಲಾಗಲ್ಲ, ಗಡಿ ಸಮಸ್ಯೆ ಇದೆ, ಹಾಗಾಗಿ ನಾವು ಡಿವೈಡ್ ಮಾಡಲ್ಲ.

ಹೊಸ ಜಿಲ್ಲೆಗೆ ನಾನು ಯಾವಾಗ ಸಪೋಟರ್್ ಮಾಡಬೇಕು ಅನ್ನೋದು ನನಗೆ ಗೊತ್ತು ಕ್ಯಾಬಿನೆಟ್ ನಲ್ಲಿ ನನ್ನ ಅನಿಸಿಕೆ ತಿಳಿಸುತ್ತೇನೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ್ ದಡೇಸೂಗೂರು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಹಾಗೂ ಜಿಲ್ಲಾ ಸಂಚಾಲಕ ಸಿ.ವಿ.ಚಂದ್ರಶೇಖರ, ಮುಖಂಡರಾದ ಬಸವರಾಜ ಬೋವಿ,ಗಣೇಶ ಹೊರತಟ್ನಾಳ್, ದೇವರಾಜ್ ಹಾಲಸಮುದ್ರ, ಹಾಲೇಶ ಕಂದಾರಿ ಮತ್ತೀತರರು ಉಪಸ್ಥಿತರಿದ್ದರು.