ಸ್ಮಾಟರ್್ ಬೆಳಗಾವಿಗೆ ಬಿತ್ತಿ ಚಿತ್ರಗಳಿಂದ ಕಳೆ

ಮಹೇಶ ಇಂಚಲಕರಂಜಿ

ಸ್ಮಾಟರ್್ ಸಿಟಿ ಕಾರ್ಯ ಭರದಿಂದ ಸಾಗುತ್ತಿದ್ದು ನಗರದ ರಸ್ತೆಗಳ ದುರಸ್ಥಿ, ಹೊಸ ಬಸ್ ನಿಲ್ದಾಣ ಕಾಮಗಾರಿಗಳ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ರಸ್ತೆ ಬದಿಯಲ್ಲಿ ಸಕರ್ಾರಿ ಕಚೇರಿ ಗೋಡೆಗಳ ಮೇಲೆ ಬಿತ್ತಿ ಚಿತ್ರಗಳನ್ನು ಬಿಡಿಸುವ ಕೆಲಸವು ಭರದಿಂದ ಸಾಗುತ್ತಿದೆ. 

ಕೋಟ್ಯಾಂತರ ರೂ ಸುರಿದು ನಗರಗಳನ್ನು ಸ್ಮಾಟರ್್ ಮಾಡುವುದು ಅಷ್ಟೇಅಲ್ಲ ಅವುಗಳನ್ನು ರಕ್ಷಿಸಿಕೊಳ್ಳುವುದು ಸಾರ್ವಜನಿಕರ ಕರ್ತವ್ಯ. ಮಹಾನಗರ ಪಾಲಿಕೆಯು ನಗರದ ರಸ್ತೆ ಬದಿ ಇರುವ ಸಕರ್ಾರಿ ಕಚೇರಿಗಳ ತಡೆಗೋಡೆಗಳ ಮೇಲೆ ವಿವಿಧ ಬಿತ್ತಿ ಚಿತ್ರಗಳನ್ನು ಬಿಡಿಸುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. 

ಸ್ಮಾಟರ್್ ಸಿಟಿ ಅಡಿಯಲ್ಲಿ ನಗರಲ್ಲಿ ರಸ್ತೆಗಳ ಸುಧಾರಣೆ, ಹೊಸ ಬಸ್ ನಿಲ್ದಾಣಗಳ ನಿಮರ್ಾಣ, ವಿದ್ಯುತ್ ಕೇಬಲ್ಗಳ ಅಂಡರ್ ಪಾಸ್, ಉದ್ಯಾನವನಗಳ ನಿಮರ್ಾಣ, ರಸ್ತೆಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಳವಡಿಕೆ ಹೀಗೆ ಸ್ಮಾಟರ್್ ಸಿಟಿಗಾಗಿ ಹಲವು ಅಭಿವೃದ್ದಿ ಕಾರ್ಯಗಳು ಭರದಿಂದ ಸಾಗಿವೆ. ಅವುಗಳನ್ನು ಉಳಿಸಿಕೊಂಡು ನಗರವನ್ನು ಸುಂದರ ಮತ್ತು ಸ್ವಚ್ಚವಾಗಿಡಲು ಜನರಲ್ಲಿ ಅರಿವು ಮೂಡಿಸುವುದು ಒಂದು ಮಹತ್ವದ ಕಾರ್ಯ, ಅದರಂತೆ ಜನರಲ್ಲಿ ಪರಿಸರ ರಕ್ಷಣೆಯ ಕುರಿತು ಅರಿವನ್ನು ಮೂಡಿಸುವುದು ಅಷ್ಟೇ ಮಹತ್ವದ್ದು.  

ಸ್ಥಳೀಯ ಮತ್ತು ಅಂತರಾಜ್ಯದಿಂದ ಅನೇಕ ಕಲಾವಿದರನ್ನೂ ಕರೆಸಿ ನಗರದ ಸಕರ್ಾರಿ ಕಚೇರಿ ತಡೆಗೋಡೆಗಳ ಮೇಲೆ ಪರಿಸರ ರಕ್ಷಣೆಯ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಪರಿಸರವನ್ನು ಮನುಷ್ಯನ ಸ್ವಾರ್ಥಕ್ಕೆ ಬಳಸುತ್ತಿರುವುದರಿಂದ ಪ್ರಕೃತಿ ವಿಕೋಪಗಳಿಗೆ ಕಾರಣ ವಾಗುತ್ತಿದೆ. ಜನರು ಪರಿಸರವನ್ನು ರಕ್ಷಿಸಬೇಕೆಂದು ಚಿತ್ರಗಳು ತಿಳಿಸುತ್ತವೆ. ಗೋಡೆಗಳ ಮೇಲೆ ಪಕ್ಷಿಗಳ ಚಿತ್ರಗಳನ್ನು ತೆಗೆದಿರುವುದು ನಗರದ ಮಕ್ಕಳಿಗೆ ವಿವಿಧ ಪಕ್ಷಿಗಳ ಪರಿಚಯ ಮಾಡಿಸುತ್ತದೆ. ಅಷ್ಟೇ ಅಲ್ಲದೆ ಪರಿಸರ ರಕ್ಷಣೆಯಿಂದ ಪ್ರಾಣಿ ಮತ್ತು ಪಕ್ಷಿ ಸಂಕುಲವನ್ನು ಉಳಿಸಲು ಸಾಧ್ಯ ಎಂಬುದು ಸಾರ್ವಜನಿಕರು ಮತ್ತು ವಿದ್ಯಾಥರ್ಿಗಳಲ್ಲಿ ಅರಿವು ಮೂಡಿಸುತ್ತದೆ. 

ಗೋಡೆಗಳ ಮೇಲೆ ಬಿಡಿಸಿರುವ ನದಿಗಳ ಚಿತ್ರ ಜಲ ಸಂರಕ್ಷಣೆ ಮತ್ತು ಮಿತವಾದ ನೀರಿನ ಬಳಕೆಯ ಕುರಿತು ಅರಿವನ್ನು ಮೂಡಿಸುತ್ತವೆ. ಮತ್ತು ಜೀವನೋಪಾಯಕ್ಕೆ ಬೇಕಾದ ಆಹಾರ ಬೆಳೆಯುವ ಕೃಷಿಯಲ್ಲಿ ನೀರಿನ ಮಹತ್ವದ ಕುರಿತು ಶಾಲಾ ಕಾಲೇಜುಗಳ ವಿದ್ಯಾಥರ್ಿಗಳಿಗೆ ಅರಿವು ಮೂಡಿಸುತ್ತದೆ.

ಸಾರ್ವಜನಿಕರಿಗೆ ಇತಿಹಾಸ ವನ್ನು ತಿಳಿಸಲು ಕೆಲವು ರಾಜ್ಯ ವಂಶದ ಕೋಟೆಗಳ ಚಿತ್ರ ಬಿಡಿಸಲಾಗುತ್ತಿದೆ. ವೀರ ರಾಣಿ ಕಿತ್ತೂರು ಚನ್ನಮ್ಮಳ ಧೈರ್ಯ ಸಾಹಸವನ್ನು ತಿಳಿಸಲು ಮತ್ತು ಅವಳ ಜೀವನ ಚರಿತ್ರೆಯ ಕುರಿತು ತಿಳಿಸಲು ಅನೇಕ ಚಿತ್ರಗಳನ್ನು ಬಿಡಿಸಲಾಗುತ್ತದೆ. ಮದರ್ಥೆರೆಸಾ, ಸಾವಿತ್ರಿಬಾಯಿ ಪುಲೆ ಅವರಂತಹ ದೇಶದಲ್ಲಿ ಇತಿಹಾಸ ಸೃಷ್ಟಿಸಿದ ಮೊದಲ ಮಹಿಳೆಯರ ಚಿತ್ರಗಳನ್ನು ಸಹ ಬಿಡಿಸಲಾಗುತ್ತಿದೆ.

ಕ್ರೀಡೆಗೆ ಸಂಬಂದಿಸಿದ ಚಿತ್ರಗಳನ್ನು ಬಿಡಿಸಿ ಜನರಿಗೆ ಕ್ರೀಡೆಯಲ್ಲಿ ಸಾಧನೆಗೈದವರನ್ನು ಪರಿಚಯಿಸಲಾಗುತ್ತದೆ. ಮತ್ತು ವಿದ್ಯಾಥರ್ಿಗಳ ಸಾಧನೆಗೆ ಸ್ಪೂತರ್ಿ ನೀಡುವ ಕಾರ್ಯ ಮಾಡುತ್ತದೆ. ಹಳೆಕಾಲದಲ್ಲಿ ಸುಣ್ಣಗಳ ಮೂಲಕ ಚಿತ್ರಿಸುತ್ತಿದ್ದ ಚಿತ್ರಗಳನ್ನು ಸಹ ಗೊಡೆಗಳ ಮೇಲೆ ಬಿಡಿಸಲಾಗುತ್ತಿದೆ.

ಇನ್ನೂ ಈ ಬಣ್ಣ ಬಣ್ಣದ ಬಿತ್ತಿ ಚಿತ್ರಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಪ್ರಸ್ತುತ ದಿನಗಳಲ್ಲಿ ಪರಿಸರ ರಕ್ಷಣೆ ಅನಿವಾರ್ಯವಾಗಿದ್ದು ಜನತೆ ಇತ್ತಕಡೆ ಗಮನ ಹರಿಸಬೇಕು ಮತ್ತು ಸ್ವಚ್ಚತೆಯನ್ನು ಕಾಪಾಡುವುದರ ಜೊತೆಗೆ ಇಂತಹ ಜಾಗೃತಿ ಬಿತ್ತಿ ಚಿತ್ರಗಳನ್ನೂ ಇತರರ ಪ್ರದರ್ಶನಕ್ಕೆ ಅನುಕೂಲವಾಗುವಂತೆ ರಕ್ಷಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.