ಮಕ್ಕಳನ್ನು ಶೈಕ್ಷಣಿಕ ಒತ್ತಡದ ವಾತಾವರಣಕ್ಕೆ ತಳ್ಳುತ್ತಿರುವುದು ಕಳವಳಕಾರಿ

ಲೋಕದರ್ಶನ ವರದಿ

ಬೆಳಗಾವಿ 14:  "ಇಂದಿನ ಸ್ಫದರ್ಾತ್ಮಕ ಜಗತ್ತಿನಲ್ಲಿ ಹೆಚ್ಚಿನ ಪಾಲಕರು ಹಾಗೂ ಶಿಕ್ಷಕರು ಮಕ್ಕಳನ್ನು ಹೆಚ್ಚು ಅಂಕಗಳನ್ನು ಪಡೆಯಬೇಕೆಂದು ಶೈಕ್ಷಣಿಕ ಒತ್ತಡದ ವಾತಾವರಣದತ್ತ ತಳ್ಳುತ್ತಿರುವುದು ಕಳವಳಕಾರಿ ಸಂಗತಿ" ಎಂದು ಕಣಬರಗಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ  ಸಂಸ್ಥಾಪಕ ಅಧ್ಯಕ್ಷರಾದ ಶಂಕರ ಬಾಗೇವಾಡಿ  ಹೇಳಿದರು.

ನಗರದ ಹೊರವಲಯದ ಕಣಬರಗಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ   ಜರುಗಿದ  'ಮಕ್ಕಳ ದಿನಾಚರಣೆ ಹಾಗೂ ಚಾಚಾ ನೆಹರು ಜನ್ಮದಿನ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಮಕ್ಕಳ ಸವರ್ಾಂಗೀಣ  ಪ್ರಗತಿಯೇ ಶಿಕ್ಷಣದ ಮುಖ್ಯ ಉದ್ದೇಶವೆಂದು ಹೇಳುತ್ತಲೇ ಅವರನ್ನು  ಯಂತ್ರಗಳಂತೆ  ನಿಮರ್ಿಸುತ್ತಿದ್ದೇವೆ. ನೈತಿಕ-ಮೌಲಿಕ-ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಉಚ್ಚ ಧ್ಯೇಯ ಹೊಂದಿರುವ ಇಂದಿನ ಹೊಸ ಶಿಕ್ಷಣ ನೀತಿಯಿಂದ ಮಕ್ಕಳು ಬಾಲ್ಯವನ್ನು ಅನುಭವಿಸಬಹುದಾಗಿದೆ. ಇದರಿಂದ ಸದೃಢ ಮಕ್ಕಳು ಸೃಷ್ಟಿಯಾಗುತ್ತಾರೆ. 

ಜಗತ್ತಿನಲ್ಲೇ ಅತಿಯಾಗಿ ನಿರ್ಲಕ್ಷಗೊಳಗಾದ ಮಕ್ಕಳನ್ನು ಕಾಳಜಿಪೂರ್ವಕವಾಗಿ ಪ್ರೀತಿಸುತ್ತಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಘೋಷಿಸುವ ಮೂಲಕ ಇಡೀ ದೇಶವೇ ವರ್ಷಕ್ಕೊಮ್ಮೆಯಾದರೂ ಮಕ್ಕಳ ಕುರಿತು ಆಲೋಚಿಸುವಂತಾಗಿದೆ" ಎಂದು ಅಭಿಪ್ರಾಯಪಟ್ಟರು.

'ಚಾಚಾ ನೆಹರುರವರ ಜೀವನ' ಕುರಿತು ಶಿಕ್ಷಕರಾದ ವಿಶ್ವನಾಥ ಕವಳೆ ಅವರು ಉಪನ್ಯಾಸ ನೀಡಿ "ನಮ್ಮ ದೇಶದ ಪ್ರಥಮ ಪ್ರಧಾನಿ ಹಾಗೂ ಸ್ವಾತಂತ್ರ ಹೋರಾಟಗಾರರಾದ ಪಂಡಿತ ಜವಾಹರಲಾಲ ನೆಹರೂರವರು ಕಾಶ್ಮೀರಿ ಪಂಡಿತರ ಮನೆತನದವರಾದರೂ ಪ್ರಜಾಪ್ರಭುತ್ವ ಸಿದ್ಧಾಂತದಲ್ಲಿ ಅಪಾರ ನಂಬಿಕೆ ಇಟ್ಟವರಾಗಿದ್ದರು. ಮಹಾತ್ಮಾ ಗಾಂಧೀಜಿಯವರಂಥ ಮಹನೀಯರ ಒಡನಾಟ ಅವರಲ್ಲಿ ಮತ್ತಷ್ಟು ನಾಯಕತ್ವ ಹಾಗೂ ಆಡಳಿತಾತ್ಮಕ ಗುಣ ಬೆಳೆಯುವಂತೆ ಮಾಡಿತು. 

ನೆಹರೂ ಅವರು ಗುಲಾಬಿ ಮತ್ತು ಮಕ್ಕಳೆಂದರೆ ಬಹಳ ಪ್ರೀತಿಯುಳ್ಳವರಾಗಿದ್ದರು. ಮಕ್ಕಳನ್ನು ಕಡೆಗಣಿಸಿದರೆ ಯಾವುದೇ ದೇಶಕ್ಕೆ ಭವಿಷ್ಯವಿಲ್ಲ ಎಂದು ಹೇಳುತ್ತಿದ್ದರು. ನಮ್ಮ ಮಕ್ಕಳಿಗೆ ಮನೆ ಮತ್ತು ಶಾಲೆಗಳಲ್ಲಿ ಹೆಚ್ಚಾಗಿ ಪ್ರೀ-ವಾತ್ಸಲ್ಯ ನೀಡುವ ಮೂಲಕ ಅವರ ಭವ್ಯ ಭವಿಷ್ಯಕ್ಕೆ ನೀರೆರೆಯಬೇಕಾಗಿದೆ" ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪಧರ್ೆ ಹಾಗೂ  'ಮಕ್ಕಳ ಚಾಚಾ ನೆಹರು' ಕುರಿತು ಭಾಷಣ ಸ್ಫಧರ್ೆ ಏರ್ಪಡಿಸಲಾಗಿತ್ತು. ಶ್ರೀಮತಿ ತೇಜಸ್ವಿನಿ ಬಾಗೇವಾಡಿ, ಶ್ರೀಮತಿ ರೇಣುಕಾ ಮಜಲಟ್ಟಿ, ಶ್ರೀಮತಿ ಎಸ್.ಕೆ. ಪಟ್ಟಣಶೆಟ್ಟಿ, ಶ್ರೀಮತಿ ಸುನಿತಾ ಸೋನಗೋಜೆ, ಪ್ರಭುಲಿಂಗ ಹೊಸೂರ, ಮಲಿಕಜಾನ ಗದಗಿನ, ಜಯಶ್ರೀ ನಾಯಕ, ಅಪಣರ್ಾ ಗೌಡರ, ಶ್ರೀದೇವಿ ಕುಂಬಾರ, ಶಾಂತಾ ಮೋದಿ, ಭುವನೇಶ್ವರಿ ನಂದಿಹಳ್ಳಿ ಶಾಲೆಯ ಮಕ್ಕಳು, ಪಾಲಕರು ಪಾಲ್ಗೊಂಡಿದ್ದರು. 

ಆರಂಭದಲ್ಲಿ ಶಿಕ್ಷಕಿ ಶ್ರೀಮತಿ ಸುನಿತಾ ಸೋನಗೋಜೆ ಮಕ್ಕಳ ಗೀತೆ ಹಾಡಿದರು. ಶಿಕ್ಷಕ ಪ್ರಭುಲಿಂಗ ಹೊಸೂರ ಸ್ವಾಗತಿಸಿದರು. ಶಿಕ್ಷಕಿ ಅಪಣರ್ಾ ಗೌಡರ ನಿರೂಪಿಸಿದರು.  ಶಿಕ್ಷಕಿ ಮಲಿಕಜಾನ ಗದಗಿನ ವಂದಿಸಿದರು.