ಹಾವೇರಿ: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಜಯಂತಿ ಅಂಗವಾಗಿ ನಗರದ ಅಕ್ಕಮಹಾದೇವಿ ಹೊಂಡದಲ್ಲಿ ಶ್ರಮದಾನ ಮೂಲಕ ಮಹಾತ್ಮರಿಗೆ ನಮನ ಸಲ್ಲಿಸಲಾಯಿತು.
ಮಹಾತ್ಮಾಗಾಂಧೀಜಿ ಅವರ ಚಿಂತನೆಗಳಾದ ಸ್ವಚ್ಛತೆ, ಸದ್ಭಾವನೆಯ ತತ್ವಗಳ ಪೂರಕವಾಗಿ ಅವರ ಜಯಂತಿಯ ಅಂಗವಾಗಿ ಜಿಲ್ಲಾಡಳಿತ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಸದ್ಭಾವನಾ ನಡಿಗೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಶಾಸಕ ನೆಹರು ಓಲೇಕಾರ ಅವರು ಚಾಲನೆ ನೀಡಿದರು.
ನಗರದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಗೌರವ ನಮನ ಸಲ್ಲಿಸಿ ಸದ್ಭಾವನಾ ನಡಿಗೆಯಲ್ಲಿ ಸಾವಿರಾರು ವಿದ್ಯಾಥರ್ಿಗಳೊಂದಿಗೆ ಶಾಸಕ ನೆಹರು ಓಲೇಕಾರ ಹಾಗೂ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಭಾಗವಹಿಸಿದ್ದರು.
ಅಕ್ಕಮಹಾದೇವಿ ಹೊಂಡದಲ್ಲಿ ಪೌರಕಾಮರ್ಿಕರೊಂದಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿದ್ಯಾಥರ್ಿಗಳು ಶ್ರಮದಾನದಲ್ಲಿ ಭಾಗವಹಿಸುವ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಗುರುಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ 'ಪಾಪು-ಬಾಪು' ಕಿರು ಹೊತ್ತಿಗೆ, ಜನಪದ ಮತ್ತು ಮಾಚರ್್ ಆಫ್ ಕನರ್ಾಟಕ ಗಾಂಧಿ ವಿಶೇಷ ಸಂಚಿಕೆಗಳನ್ನು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಸಂಸದರಾದ ಶಿವಕುಮಾರ ಉದಾಸಿ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಗೆ ಎಲ್.ಇ.ಡಿ. ಮೂಲಕ ಗಾಂಧೀಜಿ ಜೀವನ ಆಧಾರಿತ ಸಾಕ್ಷ್ಯಚಿತ್ರ ಹಾಗೂ ಗಾಂಧಿ ಕುರಿತಂತೆ ಭಾರತ ದೇಶ ಹಾಗೂ ಜಗತ್ತಿನ ನಾನಾ ದೇಶಗಳಲ್ಲಿ ಹೊರತಂದಿರುವ ಅಂಚೆ ಚೀಟಿಗಳ ಪ್ರದರ್ಶನ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಚೇರ್ಗಳ ಬದಲಾಗಿ ಗಾಂಧಿ ಸತ್ಯಾಗ್ರಹ ವ್ರತಗಳಲ್ಲಿ ಬಳಸುತ್ತಿದ್ದ ಮಾದರಿಯಲ್ಲಿ ದಿಂಬು-ಹಾಸಿಗೆ ಬಳಸಿ ಅತಿಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು.
ಉದ್ಘಾಟನೆಗಾಗಿ ಕೈಮಗ್ಗ ನೂಲು ತೆಗುವ ಯಂತ್ರ ತಿರುಗಿಸುವುದರ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಗಾಂಧೀಜಿ ಅವರ ಪ್ರೀಯವಾದ ವೈಷ್ಣವೋ ಜನತೆ ಹಾಗೂ ರಘುಪತಿ ರಾಘವ ರಾಜಾರಾಂ ಗೀತೆಗೆ ವಿದ್ಯಾಥರ್ಿಗಳು ಹಾಡುಗಾರರೊಂದಿಗೆ ಧ್ವನಿಗೂಡಿಸಿ ಹಾಡಿದ್ದು ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆಯಿತು.