ಹೆಬ್ಬಾಳ: ಗ್ರಾಪಂಗೆ ತ್ಯಾಜ್ಯ ವಿಲೆವಾರಿ ವಾಹನ

ಲೋಕದರ್ಶನ ವರದಿ

ಯಮಕನಮರಡಿ 22: ಸಮೀಪದ ಹೆಬ್ಬಾಳ ಗ್ರಾಮ ಪಂಚಾಯತಗೆ ನೂತನವಾಗಿ ಕಸವಿಲೆವಾರಿ ವಾಹನವನ್ನು ಯಮಕನಮರಡಿಯ ಶಾಸಕರಾದ ಸತೀಶ ಜಾರಕಿಹೊಳಿ. ವಾಹನವನ್ನು ಉದ್ಘಾಟಿಸಿದರು.

ತ್ಯಾಜ್ಯ ನಿರ್ವಹಣೆಯಲ್ಲಿ ಹುಕ್ಕೇರಿ ತಾಲೂಕಿನಲ್ಲೆ ಮಾದರಿಯಾದ ಗ್ರಾಮ ಪಂಚಾಯತ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೆಬ್ಬಾಳ ಗ್ರಾಮ ಪಂಚಾಯತಗೆ ಸುಮಾರು 20 ಲಕ್ಷ ರೂ ಗಳಷ್ಟು ಅನುದಾನದಲ್ಲಿ ಟಾಟಾ ಎಸ್ ವಾಹನ ಹಾಗೂ ನಿರ್ವಹಣೆಗಾಗಿ ಪ್ರತಿ ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳಿಗೆ 10 ಲೀಟರ್ ನ ಸುಮಾರು 2000 ಬಕೇಟ್ ಗಳನ್ನು ತ್ಯಾಜ್ಯ ನಿರ್ವಹಣೆಗಾಗಿ ನೀಡುವ ಯೋಜನೆ ಹೊಂದಲಾಗಿದೆ ಸರಕಾರದ ತ್ಯಾಜ್ಯ ನಿರ್ವಹಣೆಯ ಯೊಜನೆಯಡಿಯಲ್ಲಿ ಈ ವಾಹನ ನೀಡಲಾಗಿದೆ. ಈ ಯೋಜನೆಗೆ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಲಿದೆ,  ತಾಲೂಕಾ ಪಂಚಾಯತನ ಸದಸ್ಯರಾದ ನಿಂಗನಗೌಡಾ ಪಾಟೀಲ, ಕುಶಾಲ ಕಾಡಗಿ, ಗುರುಲಿಂಗಯ್ಯಾ ಹಿರೇಮಠ, ಶಹನಾಜ ಗಡೆಕಾಯಿ, ಪಿ,ಡಿ,ಓ ವಿನಯಕುಮಾರ, ಹಾಗೂ ಗ್ರಾ,ಪಂ,ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.