ಲೋಕದರ್ಶನ ವರದಿ
ವಿಜಯಪುರ 24: ಜಿಲ್ಲೆಯಲ್ಲಿ ದಿ.ಅಮೀರಬಾಯಿ ಕನರ್ಾಟಕ, ಶಾಂತಾರಾಮ, ಶಾಂತಾಬಾಯಿ ಕೌತಾಳ, ಅನೀಲ ಕುಮಾರ ನಿಕ್ಕಂ ಅಂತಾರಾಷ್ಟ್ರೀಯ ಸಂಗೀತಗಾರರು, ಕಲಾವಿದರು ಆಗಿಹೋಗಿದ್ದಾರೆ. ಬಿಜಾಪುರ ಮ್ಯೂಜಿಕಲ್ ಆರ್ಟಿಸ್ಟ್ ಅಸೋಸಿಯೇಶನ್ ಇದನ್ನು ಒಂದು ವರ್ಷದ ಹಿಂದೆ ಸ್ಥಾಪನೆ ಮಾಡಿ ಎಲ್ಲ ಕಲಾವಿದರನ್ನು ಸೇರಿಸಿ ಈ ಸಂಘ ಸ್ಥಾಪಿಸಲಾಗಿದೆ. ಕಲಾವಿದರಿಗೆ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಮಾಡುವ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ ಎಂದು ಬಿಜಾಪುರ ಮ್ಯೂಜಿಕಲ್ ಆರ್ಟಿಸ್ಟ್ ಅಸೋಸಿಯೇಶನ್ ಅಧ್ಯಕ್ಷರಾದ ಮನೋಹರ ಐನಾಪುರ ಹೇಳಿದರು.
ನಗರದ ಬೆಂಗಳೂರು ರೆಸ್ಟೋರಂಟ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಿಜಾಪುರ ಮ್ಯೂಜಿಕಲ್ ಆರ್ಟಿಸ್ಟ್ ಅಸೋಸಿಯೇಶನ್ ತನ್ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಗಾಯನ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆ ನೀಡಿ ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಲ್ಲಿ ಪ್ರೇರಣೆ ನೀಡುವ ಸಲುವಾಗಿ ಸಿಂಗಿಂಗ್ ಸ್ಟಾರ್ಸ್ ಆಫ್ ವಿಜಯಪುರ ಎಂಬ ಗಾಯನ ಸ್ಪರ್ದೇ ದಿ: 28, ಜುಲೈ 2019 ರಿಂದ ಆಗಷ್ಟ್ 18 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಡಿಷನ್ ರವಿವಾರ ದಿ. 28 ಜುಲೈ 2019 ರಂದು ಜರುಗಲಿದೆ. ಕ್ವಾಟರ್ ಪಿನಾಲೆ ರವಿವಾರ ದಿ. 4 ಅಗಸ್ಟ್ 2019 ರಂದು ಜರುಗಲಿದೆ. ಸೆಮಿ ಫಿನಾಲೆ ರವಿವಾರದ ದಿ. 11 ಅಗಷ್ಟ್ 2019 , ಗ್ರ್ಯಾಂಡ್ ಪಿನಾಲೆ ರವಿವಾರ ದಿ. 18 ಆಗಸ್ಟ್ 2019 ರಂದು ಜರುಗಲಿದೆ. ಎಂದರು. ನಗರದ ಲಿಂಗದ ರಸ್ತೆಯಲ್ಲಿರುವ ಪಾರೇಖ್ ಸಿಗ್ನೇಚರ್ ಮಾಲ್ ನಲ್ಲಿರುವ ಎನ್.ಬಿ. ಪಾಟೀಲ ಪಿ.ಯು.ಕಾಲೇಜ್ ಅಡಿಟೋರಿಯಂನಲ್ಲಿ ನಡೆಯಲಿದೆ. 14 ವರ್ಷ ಮೇಲ್ಪಟ್ಟ ಗಾಯಕ-ಗಾಯಕಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಉಪಾಧ್ಯಕ್ಷರಾದ ಅರವಿಂದ ಮಹೇಂದ್ರಕರ, ಪಬ್ಲಿಕ್ ರಿಲೇಶನ್ ಆಫೀಸರ್ ಫಯಾಜ್ ಕಲಾದಗಿ, ಖಂಚಾಚಿಗಳಾದ ಪ್ರಕಾಶ ಮಠ, ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.