“ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ-2025”

“National Award Ambikatanaya Datt-2025”

ಧಾರವಾಡ 13: ಪ್ರತಿ ವರ್ಷದಂತೆ ವರಕವಿ ಡಾ.ದ.ರಾ.ಬೇಂದ್ರೆಯವರ ಜನ್ಮದಿನ 31ನೇ ಜನವರಿ 2025ರಂದು ದ.ರಾ.ಬೇಂದ್ರೆಯವರ ಹೆಸರಿನಲ್ಲಿ ನಾಡಿನ ಶ್ರೇಷ್ಠ ಕವಿ, ವಿಮರ್ಶಕ, ಸಾಹಿತಿಗೆ ನೀಡುತ್ತ ಬಂದಿರುವ “ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ”ಗೆ ನವೋದಯ ಸಾಹಿತ್ಯದ ಸ್ತ್ರೀ ಸಂವೇದನೆಯ ಸೃಜನಶೀಲ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ, ಧಾರವಾಡ ಹಾಗೂ ಕವಿ, ವಿಮರ್ಶಕ, ಸಂಸ್ಕೃತಿ ಚಿಂತಕರಾದ ಪ್ರೊ. ಎಸ್‌.ಜಿ.ಸಿದ್ಧರಾಮಯ್ಯ, ಬೆಂಗಳೂರು ಇವರು ಆಯ್ಕೆಯಾಗಿದ್ದಾರೆ.   

ಪ್ರಶಸ್ತಿಯನ್ನು ದಿ. 31ರಂದು ನಗರದ ಬೇಂದ್ರೆ ಭವನದಲ್ಲಿ ಏರಿ​‍್ಡಸಿರುವ ವರಕವಿ ಡಾ.ದ.ರಾ. ಬೇಂದ್ರೆಯವರ 129ನೇ ಜನ್ಮದಿನದಂದು ಪ್ರದಾನ ಮಾಡಲಾಗುವುದು.  ಪ್ರಶಸ್ತಿ ಮೊತ್ತ ರೂ.1 ಲಕ್ಷ ನಗದು (ತಲಾ ಐವತ್ತು ಸಾವಿರ), ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನೊಳಗೊಂಡಿರುತ್ತದೆ.