ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ರವಿವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೊಸ ಬಟ್ಟೆ ತೊಟ್ಟ ಮಕ್ಕಳು, ಮಹಿಳೆಯರು ವಿವಿಧೆಡೆ ನಾಗ ದೇವರ ಮಂದಿರ ಮತ್ತು ಹುತ್ತಗಳಿಗೆ ತೆರಳಿ ಹಾಲೆರೆದು ಭಕ್ತಿಯನ್ನು ಮೆರೆದರು. ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಮಕ್ಕಳು, ಮಹಿಳೆಯರು, ವೃದ್ಧೆಯರು ಸೇರಿದಂತೆ ಎಲ್ಲ ವರ್ಗದ ವಯೋಮಾನದವರು ಗ್ರಾಮದ ಆರಾಧ್ಯ ದೈವ ನೆಲೆಸಿರುವ ಹಾಲಸ್ವಾಮಿ ಮಠ, ದುಗರ್ಾದೇವಿ ದೇವಸ್ಥಾನ, ಕಲ್ಲು ನಾಗದೇವರ ದೇವಸ್ಥಾನ ಮತ್ತು ಸಮೀಪದ ಹೊಲಗಳಲ್ಲಿ ಕಂಡು ಬರುವ ಹುತ್ತಕ್ಕೆ ತೆರಳಿ ಹಾಲೆನೆರೆದು ಪೂಜೆ ಸಲ್ಲಿಸಿ, ನೈವೇದ್ಯವನ್ನು ಅಪರ್ಿಸಿದರು.
ಜೋಳದ ಅಳ್ಳು, ಕುಪ್ಪಸ ದೇವರಿಗೆ ಅಪರ್ಿಸಿ, ಹಾಲೆರೆದು ಭಕ್ತಿಯಿಂದ ನಮಿಸಿದರು. ಮನೆಯಿಂದ ಹುತ್ತದವರೆಗೆ ಹಾಗೂ ಹುತ್ತದಿಂದ ಮನೆವರೆಗೆ ಜೋಳದ ಅಳ್ಳನ್ನು ಚೆಲ್ಲುತ್ತ ಸಾಗಿ, ಸಾಂಪ್ರದಾಯಿಕವಾಗಿ ನಾಗರ ಪಂಚಮಿ ಹಬ್ಬದ ಆಚರಣೆಯನ್ನು ಮಾಡಲಾಯಿತು.
ಎಲ್ಲೆಡೆ ತವರಿಗೆ ಬಂದಿರುವ ಮಹಿಳೆಯರು ಹೊಸ ಬಟ್ಟೆ ತೊಟ್ಟು, ಅಳ್ಳು, ರವೆಯುಂಡೆ, ಅಳ್ಳಿಟ್ಟು, ಹುರಿದ ಶೇಂಗಾ, ಕಡಲೆ ಹಾಗೂ ಹೋಳಿಗೆಯ ಸಿಹಿ ಖಾದ್ಯಗಳನ್ನು ಸವಿದರು. ಮಧ್ಯಾಹ್ನದ ನಂತರ ಮಹಿಳೆಯರು, ಮಕ್ಕಳು, ಯುವಕರು ಜೋಕಾಲಿಯಾಡಿ ಖುಷಿ ಪಟ್ಟು ಸಂಭ್ರಮಿಸಿ, ಅತ್ಯಂತ ಸಡಗರದಿಂದ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.