ನಗರದಲ್ಲಿ 132ನೇ ಗುರುದೇವ ಪರಮಹಂಸ ಯೋಗಾನಂದರ ಜಯಂತಿ ಆಚರಣೆ
ಬೆಳಗಾವಿ: ನಗರದಲ್ಲಿ 5 ರಂದು ವೈಎಸ್‌ಎಸ್ ಮಂಡಳಿಯು ತಮ್ಮ ಗುರುಗಳ ಪರಮಹಂಸ ಯೋಗಾನಂದರ 132ನೇ ಜನೋತ್ಸವವನ್ನು ಭಕ್ತಿಗೌರವಗಳೊಂದಿಗೆ ಆಚರಿಸಲಾಯಿತು. ಯೋಗಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಯೋಗಾನಂದ ಜ್ಞಾನಪ್ರಭಾ ಹಾಗೂ ಭಗವತಿಚರಣ್ ಘೋಷ್ ಎಂಬ ದೈವಭಕ್ತ ಮಾತಾಪಿತರಿಗೆ, 5ನೇ ತಾರೀಖು ಜನವರಿ 1893 ರಂದು ಘೋರಖ್‌ಪುರದಲ್ಲಿ ಜನಿಸಿದರು. ಜ್ಞಾನಪ್ರಭಾ ತಮ್ಮ ತೋಳುಗಳಲ್ಲಿದ್ದ ಮಗು ಮುಕುಂದನೊಂದಿಗೆ ತಮ್ಮ ಗುರುಗಳಾದ ಲಾಹಿರಿ ಮಹಾಶಯರನ್ನು ಭೇಟಿಯಾದಾಗ ಆ ಮಹಾನ್ ಸಂತರು ಆಕೆಯನ್ನು ಆಶೀರ್ವದಿಸಿದರು. ಹೇಮಾತೆ ನಿನ್ನ ಮಗ ಒಬ್ಬ ಯೋಗಿಯಾಗುತ್ತಾನೆ. ಆಧ್ಯಾತ್ಮಿಕ ಎಂಜಿನ್ ಆಗಿ ಅನೇಕ ಆತ್ಮಗಳನ್ನು ಭಗವಂತನ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತಾನೆ. "ಕಾಲಾಂತರದಲ್ಲಿ ಆ ಪವಿತ್ರವಾಣಿ ಸತ್ಯವಾಯಿತು ಎಂದು ಹೇಳಿದರು.
1917ರಲ್ಲಿ ರಾಂಚಿಯಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಹಾಗೂ 1920ರಲ್ಲಿ ಲಾಸ್ ಏಂಜಲಿಸ್‌ನಲ್ಲಿ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ (ಎಸ್‌ಆರ್‌ಎಫ್) ಅನ್ನು ಸ್ಥಾಪಿಸಿದರು. ಈ ಎರಡು ಸಂಸ್ಥೆಗಳ ಮೊದಲ ಆದ್ಯತೆ ಪ್ರಾಚೀನ ಆಧ್ಯಾತ್ಮಿಕ ವಿಜ್ಞಾನವಾದ 'ಕ್ರಿಯಾಯೋಗ' ಧ್ಯಾನತಂತ್ರವನ್ನು ಪ್ರಸಾರ ಮಾಡಿ ಜೀವನದ ಅಂತಿಮ ಉದ್ದೇಶವಾದ ಪರಮಾತ್ಮನೊಂದಿಗೆ ಆತ್ಮನ ಐಕ್ಯವನ್ನು ಅರಿಯುವಂತೆ ಮಾಡುವುದು ಎಂದರು.
ಅಮೇರಿಕೆಯಲ್ಲಿ ಇರುವಾಗಲೇ, ಯೋಗಾನಂದಜಿಯವರು ಭಾರತೀಯ ಪ್ರಾಚೀನ ಧ್ಯಾನಯೋಗ ತಂತ್ರಗಳನ್ನು ಮತ್ತು ಬಾಬಾಜಿ ಅವರಿಂದ ಪುನರುಜ್ಜಿವನಗೊಂಡ ಕ್ರಿಯಾ ಯೋಗವನ್ನು ಹರಡಲು ಅವಿಶ್ರಾಂತವಾಗಿ ಕೆಲಸ ಮಾಡಿದರು. ಅದು ಚೆನ್ನಾಗಿ ಸ್ವೀಕರಿಸಲ್ಪಟ್ಟಿತು ಹಾಗೂ ಪ್ರಶಂಸಿಲ್ಪಟ್ಟಿತು. ಭಗವಂತನ ಅನ್ವೇಷಣೆಯನ್ನು ಹಂಚಿಕೊಳ್ಳುವ ಹಂಬಲದಿಂದ ಉತ್ತೇಜಿತರಾಗಿ, ಅತೀವ ಮೆಚ್ಚುಗೆಗೆ ಪಾತ್ರವಾದ ಮೇರುಕೃತಿ 'ಯೋಗಿಯ ಆತ್ಮಕಥೆ'ಯನ್ನು ಬರೆಯಲು ತೊಡಗಿದರು, 3 ಪುಸ್ತಕವು ಜಗತ್ತಿನಾದ್ಯಂತ ಅಗಣಿತ ವ್ಯಕ್ತಿಗಳ ಮೇಲೆ ಗಾಢಪ್ರಭಾವವನ್ನು ಬೀರಿತು, ಅಲ್ಲದೇ 50 ಕ್ಕಿಂತ ಹೆಚ್ಚು ಭಾಷೆಗಳಿಗೆ ತರ್ಜುಮೆ ಆಯಿತು ಹೊಂದಿದವರು ಎಂದು ಹೇಳಿದರು.
ಈಗ ಗೌರವಾನ್ವಿತ ಜಗದ್ಗುರುವನ್ನು ಜಗತ್ತಿನಾದ್ಯಂತ ಭಾರತದ ಪ್ರಾಚೀನ ಬೋಧನೆಗಳ ಪ್ರಭಾವಶಾಲಿ ರಾಯಭಾರಿ ಎಂದು ಪರಿಗಣಿಸಲಾಗಿದೆ. ಅವರ ಜೀವನ ಹಾಗೂ ಬೋಧನೆಗಳು ಜೀವನದ ಎಲ್ಲಾ ವರ್ಗದ ಜನರಿಗೆ ಅವರ ಜಾತಿ, ಸಂಸ್ಕೃತಿ, ನಂಬಿಕೆಗಳನ್ನು ಮೀರಿ, ಸ್ಫೂರ್ತಿ ಹಾಗೂ ಉತ್ತೇಜನಗಳ ನಿರಂತರ ಸೆಲೆಯಾಗಿ ಸೇವೆ ಸಲ್ಲಿಸುತ್ತಿವೆ ಸದಸ್ಯರಾದ ಸದಾಶಿವ ಮುನ್ನೋಳಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಶಿಕಾಂತ ಚುನಮರಿ, ರವೀಂದ್ರ ಪಟ್ಟಣಶೆಟ್ಟಿ, ಕರ್ನಲ್ ಮಾರನ ಬಸರಿ, ರಾಮಚಂದ್ರ ಉಪ್ಪಿನ, ಶ್ರೀನಿವಾಸ ಕೋರೆ್ಡ, ದೇವನಾಳ, ಸದಾಶಿವ ಮುನ್ನೋಳಿ, ಮಂಜುಳಾ ಚುನಮರಿ, ಶೈಲಜಾ ಕೋರಿಶೆಟ್ಟಿ ಹಾಗೂ ಇತರರು ಇದ್ದರು.