ಬೆಳಗಾವಿಗೆ ಚಾರುಕೀತರ್ಿ ಶ್ರೀಗಳ ಭೇಟಿ

ಬೆಳಗಾವಿ 16: ಶ್ರವಣಬೆಳಗೊಳದ ಚಾರುಕೀತರ್ೀ ಭಟ್ಟಾರಕ ಶ್ರೀಗಳು ಗುರುವಾರ ಸಾಯಂಕಾಲ ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ ಬೋಡರ್ಿಂಗಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾಣಿಕಬಾಗ ದಿಗಂಬರ ಜೈನ ಬೋಡರ್ಿಂಗ ವತಿಯಿಂದ ಶ್ರೀಗಳ  ಪಾದಪೂಜೆ ನೆರವೇರಿಸಿ ಅವರನ್ನು ಗೌವರಿಸಲಾಯಿತು. ಈ ಸಂದರ್ಭದಲ್ಲಿ ಆಶರ್ಿವಚನ ನೀಡಿದ ಚಾರುಕೀತರ್ಿ ಭಟ್ಟಾರಕ ಶ್ರೀಗಳು ಬೆಳಗಾವಿ ಜಿಲ್ಲೆಯ ನೆಲ ಅತ್ಯಂತ ಪವಿತ್ರವಾಗಿದೆ. ಈ ನಾಡಿನಲ್ಲಿ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮುನಿಗಳು, ಆಚಾರ್ಯರತ್ನ ದೇಶಭೂಷಣ ಮಹಾರಾಜರು , ಆಚಾರ್ಯ ವಿದ್ಯಾನಂದ ಮುನಿಗಳು ಹಾಗೂ ಆಚಾರ್ಯ ವಿದ್ಯಾಸಾಗರ ಮುನಿಗಳು ಜನ್ಮ ಪಡೆದ  ಸ್ಥಳವಾಗಿದ್ದು, ಇದು ಪಾವನಭೂಮಿ ಎಂದು ಗುರುತಿಸಿಕೊಂಡಿದೆ. ಈ ಭೂಮಿಯಲ್ಲಿ ಜನ್ಮ ಪಡೆಯಲು ಪೂರ್ವ ಜನ್ಮದ ಪುಣ್ಯ ಇರಬೇಕೆಂದರು.

ಜೈನ ಧರ್ಮದ ಹಿರಿಯ ದಾನಿಗಳಲ್ಲಿ ಒಬ್ಬರಾದ ಮಾಣೀಕಚಂದ ಸೇಠಿ ಅವರು ನೂರು ವರ್ಷಗಳ ಹಿಂದೆಯೇ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕಾಗಿ  ಬೋಡರ್ಿಂಗ ಪದ್ದತಿಯನ್ನು ಪ್ರಾರಂಭಿಸಿದ್ದರು. ಇದರ ಪರಿಣಾಮವೇ  ಇಂದು ದೇಶದ ಎಲ್ಲ ಭಾಗದಲ್ಲಿ ಜೈನ ವಿದ್ಯಾಥರ್ಿ ನಿಲಯಗಳನ್ನು ನಾವು ಕಾಣುತ್ತಿದ್ದೇವೆ. ದಕ್ಷಿಣ ಭಾರತ ಜೈನ ಸಭೆಯು ತನ್ನ ಎಲ್ಲ ಶಾಖೆಗಳಲ್ಲಿ ವಿದ್ಯಾಥರ್ಿ ನಿಲಯಗಳನ್ನು ಪ್ರಾರಂಭಿಸಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವುದು ಸಂತೋಷದ ಸಂಗತಿಯಾಗಿದೆ ಎಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಮಾಣಿಕಬಾಗ ದಿಗಂಬರ ಜೈನ ಬೋಡರ್ಿಂಗ ಪದಾಧಿಕಾರಿಗಳಾದ ಕೀತರ್ಿಕುಮಾರ ಕಾಗವಾಡ, ಅಶೋಕ ಜೈನ, ಪುಷ್ಪಕ ಹನಮಣ್ಣವರ, ಬಾಹುಬಲಿ ಸಾವಂತ, ಸನ್ಮತಿ ಕಸ್ತೂರಿ, ಕುಂತಿನಾಥ ಕಲಮನಿ,  ನೀತಿನ ಚಿಪ್ರೆ, ಸಂಜೀವ ಜಿನಗೌಡ, ರಾಜು ಕಟಗೆನ್ನವರ, ಬೇಲೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಸಂಜಯ ಕುಚನೂರೆ ಸ್ವಾಗತಿಸಿದರು. ಇಂದಿರಾ ಶಂಕರಗೌಡಾ ಪ್ರಾರ್ಥನೆ ನಡೆಸಿದರು.