ಉತ್ತರ ವಲಯ ನೂತನ ಐಜಿಪಿಯಾಗಿ ಚೇತನಸಿಂಗ್ ಅಧಿಕಾರ ಸ್ವೀಕಾರ
ಬೆಳಗಾವಿ 01: ಉತ್ತರ ವಲಯ ಪೊಲೀಸ್ ಮಹಾನೀರೀಕ್ಷಕರಾಗಿ ಚೇತನಸಿಂಗ್ ರಾಥೋಡ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.
ಬೆಳಗಾವಿಗೆ ಈಗಿದ್ದ ಐಜಿಪಿ ವಿಕಾಸ್ ಕುಮಾರ್ ಅವರನ್ನು ಬೆಂಗಳೂರು ಪಶ್ಚಿಮ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರ ಅವರ ಸ್ಥಾನಕ್ಕೆ ಚೇತನಸಿಂಗ್ ರಾಥೋಡ್ ಅವರನ್ನು ಉತ್ತರ ವಲಯದ ಐಜಿಪಿಯನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಉತ್ತರ ವಲಯದ ನೂತನ ಐಜಿಪಿಯಾಗಿ ಚೇತನಸಿಂಗ್ ರಾಥೋಡ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.