ಲೋಕದರ್ಶನ ವರದಿ
ಕೊಪ್ಪಳ 13: ಪ್ರಕೃತಿ ವಿಕೋಪದಿಂದ ತತ್ತರಿಸಿ ನೆಲೆ ಕಳೆದುಕೊಂಡ ಕೊಡಗು ಜಿಲ್ಲೆ ಪತ್ರಕರ್ತರಲ್ಲಿ ಸುಮಾರು 11ಜನ ಮನೆ ಕಳೆದುಕೊಂಡು ನಿರಾಶ್ರಿರಾಗಿದ್ದು ಅವರಿಗೆ ಸಹಾಯಧನ ಒದಗಿಸಲು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಸಮಿತಿಯ ನಿದರ್ೇಶನದಂತೆ ಕೊಪ್ಪಳದ ಪತ್ರಕರ್ತರು ಪರಿಹಾರ ನಿಧಿ ಸಂಗ್ರಹಿಸಿ ರಾಜ್ಯ ಸಮಿತಿಗೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಜಿಲ್ಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಗುರುವರ ಬೆಳಿಗ್ಗೆ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸರಳ ಸಾಂಕೇತಿಕ, ಸ್ವಾಗತ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಿದ ಸಂದರ್ಭದಲ್ಲಿ ಕೊಡಗು ಸಂತ್ರಸ್ತ ಪತ್ರಕರ್ತರ ನಿಧಿಗೆ ಸಹಾಯಧನ ನೀಡಲಾಯಿತು, ಮತ್ತು 76500 ರೂಪಾಯಿಗಳ ಡಿಡಿ ಗಂಗಾವತಿ ತಾಲೂಕ ಕಾರ್ಯನಿರತ ಪರವಾಗಿ ಸಂಗ್ರಹಿಸಿದ ಪರಿಹಾರ ಧನ ಒದಗಿಸಲಾಯಿತು. ಅತಿ ಹೆಚ್ಚು ಮೊತ್ತ ಸಂಗ್ರಹಿಸಿ ಸಹಾಯ ಒದಗಿಸಿದ ಗಂಗಾವತಿ ಪತ್ರಕರ್ತರ ಕಾರ್ಯ ವೈಖರಿಗೆ ಹಾಗೂ ಕೊಪ್ಪಳ ಜಿಲ್ಲೆಯ ಸಂಘಕ್ಕೆ ರಾಜ್ಯಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿ ಕೆಯುಡಬ್ಲೂಜೆ ಪರವಾಗಿ ಮತ್ತು ಕೊಡಗು ಸಂತ್ರಸ್ತ ಪತ್ರಕರ್ತರ ಪರವಾಗಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ ಮಾತನಾಡಿ ಶೀಘ್ರ ಮತ್ತೊಮ್ಮೆ ಇನ್ನಷ್ಟೂ ಪರಿಹಾರ ನಿಧಿ ಸಂಗ್ರಹಿಸಿ ನೀಡಲಾಗುವುದು ಎಂದು ತಿಳಿಸಿದರು, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಿ.ಎಸ್.ಗೋನಾಳ, ನಾಮ ನಿದರ್ೇಶಿತ ರಾಜ್ಯಸದಸ್ಯ ಹರೀಶ್ ಹೆಚ್.ಎಸ್. ಕೋಶಾಧ್ಯಕ್ಷ ಸಿರಾಜ್ ಬಿಸರಳ್ಳಿ, ಸದಸ್ಯರಾದ ಸಿದ್ದನಗೌಡ ಪಾಟೀಲ್, ರಾಜು ಬಿ.ಆರ್, ಮೌಲಾ ಹುಸೇನ್ ಬುಲ್ಡಿಯಾರ್, ಬಸವರಾಜ ಗುಡ್ಲಾನೂರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್.ಎಮ್.ದೊಡ್ಡಮನಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವರಾಜ ನುಗುಡೋಣಿ ಹಾಗೂ ಎಲ್ಲಾ ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.