ಗ್ರಾಮೀಣ ಪ.ಜಾ, ಪ ಪಂ, ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆ 64 ಕೋಳಿಮರಿಗಳನ್ನು ವಿತರಿಸಿದರು: ಡಿ.ಎಮ್‌.ಐಹೊಳೆ

Distributed 64 chickens, 20 each, to women farmers of rural P.J., P.P., category: D.M. Aihole

ಗ್ರಾಮೀಣ ಪ.ಜಾ, ಪ ಪಂ, ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆ 64 ಕೋಳಿಮರಿಗಳನ್ನು ವಿತರಿಸಿದರು:   ಡಿ.ಎಮ್‌.ಐಹೊಳೆ

ರಾಯಬಾಗ 18:  ಸರ್ಕಾರ ಗ್ರಾಮೀಣ ಮಹಿಳೆಯರಿಗೆ ಕೋಳಿ ಮರಿಗಳನ್ನು ನೀಡುತ್ತಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಡಿ.ಎಮ್‌.ಐಹೊಳೆಯವರು ಹೇಳಿದರು. ಭಾನುವಾರ ಪಟ್ಟಣದ ಪಶು ಇಲಾಖೆ ಕಚೇರಿ ಆವರಣದಲ್ಲಿ ಕುಕ್ಕುಟೊದ್ಯಮ 05 ವಾರದ ಕೋಳಿಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಪ.ಜಾ, ಪ ಪಂ, ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆ 64 ಫಲಾನುಭವಿಗಳಿಗೆ ಕೋಳಿಮರಿಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಕೋಳಿಮರಿಗಳನ್ನು ಸಾಕಿ, ಕೋಳಿ ಮೊಟ್ಟೆ ತಿಂದು ಸದೃಢರಾಗಬೇಕು,  ಈ ಯೋಜನೆಯನ್ನು ಯಶಸ್ಸುಗೊಳಿಸಬೇಕೆಂದರು. ಮುಖಂಡರಾದ ಸದಾಶಿವ ಘೋರೆ​‍್ಡ, ಪಶುವೈದ್ಯಾಧಿಕಾರಿ ಡಾ.ಎಮ್‌.ಬಿ.ಪಾಟೀಲ, ಡಾ.ಸಚೀನ ಸೌಂದಲಗಿ, ಡಾ. ಪ್ರಮೋದ ತಳವಾರ, ಸಿದ್ದಪ್ಪ ಮನ್ನಿಕೇರಿ, ಆನಂದ ಕದಂ, ಸಿದ್ದು ಅಲಕನೂರ, ಶ್ರೀಕಾಂತ ಹುಕ್ಕೇರಿ, ಸಂತೋಷ ಮನ್ನಿಕೇರಿ, ರಾಜು ಹಳಬರ, ಕಲ್ಲಪ್ಪ ಸನದಿ, ಸುರೇಶ ಐಹೊಳೆ, ಅಕ್ಷಯ ಕರೀಹೊಳಿ, ಮಲ್ಲಪ್ಪ ಶಾರಬಿದ್ರೆ ಇದ್ದರು.