ಮಣಗುತ್ತಿ ಗ್ರಾಮಸ್ಥರಿಂದ ದಾನಿಗಳಿಗೆ ಸನ್ಮಾನ

Donors honored by Managutti villagers

ಮಣಗುತ್ತಿ ಗ್ರಾಮಸ್ಥರಿಂದ ದಾನಿಗಳಿಗೆ ಸನ್ಮಾನ 

ಯಮಕನಮರಡಿ, 07 : ಸಮೀಪದ ಮಣಗುತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಶಿಖರದ ಕಳಸಾರೋಹಣ ಸಮಾರಂಭಕ್ಕೆ ಕೊಲ್ಲಾಪುರದ ಅನಂತ ಪೌಂಡೆಷನ್ ಅಧ್ಯಕ್ಷರಾದ ಓಂಕಾರ ಜಾವೀರ ಹಾಗೂ ಟ್ರಸ್ಟಿಗಳಾದ ಸಚಿನ ಕಾಂಬಳೆ ಸುನಿಲ ಪಾಟೀಲ ಪ್ರಶಾಂತ ಜಾಧವ, ಉಪಸ್ಥಿತರಿದ್ದು ಮಣಗುತ್ತಿ ಗ್ರಾಮದ ಲಕ್ಷ್ಮೀ ಧೇವಿ ಮಂದಿರದ ಜೀರ್ಣೋದ್ದಾರಕ್ಕಾಗಿ 29 ಲಕ್ಷರೂಪಾಯಿ ದೇಣಿಗೆ ಸಲ್ಲಿಸಿದರು ಅದರಂತೆ ಮಲ್ಲಿಕಾರ್ಜುನ ಮಂದಿರಕ್ಕೆ 2.50 ಲಕ್ಷ ರೂಪಾಯಿಗಳನ್ನು ದೇಣಿಗೆ ಸಲ್ಲಿಸಿ ಲಕ್ಷ್ಮಿದೇವಿ ಹಾಗೂ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಎರಡು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಅಧ್ಯಕ್ಷರು ಉಪಸ್ಥಿತರಿದ್ದು ದಾಣಿಗಳಿಗೆ ಆತ್ಮಿಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.