ಸೈಕಲ್ ಜಾಥಾ ಮೂಲಕ ಪರಿಸರ ಜಾಗೃತಿ: ಗೋನಾಳ ರಿಂದ ಮೆಚ್ಚುಗೆ
ಕೊಪ್ಪಳ 18: ಪರಿಸರ ಉಳಿಸಿ ಬೆಳೆಸಿ ಎಂಬ ಸೈಕಲ್ ಜಾಥಾ ಮೂಲಕ ರಾಜ್ಯದ್ಯಂತ ಪ್ರವಾಸ ಕೈಗೊಂಡಿರುವ ತುಮಕೂರಿನ ಯುವಕ ಮಾಲಿಂಗ ರವರು ಹಮ್ಮಿಕೊಂಡಿರುವ ಸೈಕಲ್ ಜಾಥಾ ರವಿವಾರದಂದು ಕೊಪ್ಪಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆಯ ರಾಜ್ಯ ಅಧ್ಯಕ್ಷರಾದ ಕೊಪ್ಪಳದ ಹಿರಿಯ ಸಾಹಿತಿ ಜಿಎಸ್ ಗೋನಾಳ ರವರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಸೈಕಲ್ ಜಾಥಾ ಯುವಕ ಮಾಲಿಂಗ ರವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಕೋರಿ ಕೊಪ್ಪಳದಿಂದ ಬೀಳ್ಕೊಡಲಾಯಿತು.ಪರಿಸರ ಉಳಿಸಿ ನಾಡು ಬೆಳೆಸಿ, ಎಲ್ಲಾ ರೋಗಗಳ ಮೂಲ ಆಸ್ವಚ್ಚತೆಯಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಮನೆಗೊಂದು ಮರ ಬೆಳೆಸಿ ನಗರವನ್ನು ನಂದನವನ ವನ್ನಾಗಿ ಮಾಡಿ ಎಂದು ಕೊಪ್ಪಳ ಜಿಲ್ಲೆಯ ಜನತೆಗೆ ಜಿಎಸ್ ಗೋನಾಳ್ ಮನವಿ ಮಾಡಿಕೊಂಡರು, ಇಂತಹ ಜಾಥಾ ಕೈಗೊಂಡಿರುವ ತುಮಕೂರು ಯುವಕನ ಕಾರ್ಯ ಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಇದೆ ವೇಳೆ ಸಲಹೆ ನೀಡಿದರು, ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು