ಪ್ರತಿನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬರು ವಚನಗಳನ್ನು ಅಳವಡಿಸಿಕೊಳ್ಳಬೇಕು

Everyone should adopt the vows in their daily life

ಪ್ರತಿನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬರು ವಚನಗಳನ್ನು ಅಳವಡಿಸಿಕೊಳ್ಳಬೇಕು  

ಗದಗ :02: ಪ್ರತಿನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬರು ವಚನಗಳನ್ನು  ಅಳವಡಿಸಿಕೊಳ್ಳಬೇಕು ಇಂದಿನ ಬದುಕಿಗೆ ಶಿವಯೋಗಿ   ಸಿದ್ಧರಾಮರ ಮಾರ್ಗದರ್ಶನ ಅವಶ್ಯ.12 ನೇ ಶತಮಾನದಲ್ಲಿ ಅವಿರತವಾಗಿ ಶ್ರಮಿಸಿದ ಮಹಾ ಶರಣ ಕಾಯಕಯೋಗಿ ಶಿವಯೋಗಿ   ಸಿದ್ಧರಾಮರು.ಸಮಾಜದ ಬಗ್ಗೆ ಮಾತನಾಡಿ ತಾಲೂಕ ಮಟ್ಟ ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟಿತರಾಗಿದ್ದು,ಆದರೆ ಜಿಲ್ಲಾ ಮಟ್ಟದಲ್ಲಿ ಇನ್ನೂ ಸಂಘಟಿತರಾಗಿಲ್ಲ ಎಂಬುದು ಈ ಜಯಂತ್ಯೋತ್ಸವದಿಂದ ಗೊತ್ತಾಗುತ್ತದೆ. ಸಮಾಜ ಸಂಘಟಿತರಾಗಬೇಕಿದೆ.ಸಮಾಜಕ್ಕೆ ಒಬ್ಬ ಪೂಜ್ಯರು ದೊರಕಿದ್ದು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ ಎಂದು ಕರ್ನಾಟಕ ಖನಿಜ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ ಎಸ್ ಪಾಟೀಲ ಹೇಳಿದರು.ನಗರದ ತೋಂಟದ ಸಿದ್ಧಲಿಂಗ ಕಲ್ಯಾಣ ಮಂಟಪದಲ್ಲಿ ನಡೆದ ಕಾಯಕಯೋಗಿ   ಶಿವಯೋಗಿ ಸಿದ್ಧರಾಮೇಶ್ವರರ 852 ನೇ ಜಯಂತ್ಯೋತ್ಸವ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದರು.           ಉದ್ಘಾಟನಾ ಭಾಷಣ ಮಾಡಿದ ಸಚಿವ ಎಚ್ ಕೆ ಪಾಟೀಲ ಅವರು ಬಸವಾ ಬಸವಾ ಎಂಬುದೇ ಭಕ್ತಿ ಕಾಣಾ ಎಂದು ಶ್ರೀ ಸಿದ್ಧರಾಮ ಶಿವಯೋಗಿ ಹೇಳುತ್ತಿದ್ದರು.  

ಸಮಾಜದಲ್ಲಿ ಯಾವ ರೀತಿ ಮನಸ್ಸುಗಳಿವೆ ಅಂತಾ ನಿಮಗೆ ಗೊತ್ತು, ಜಾತಿ ವ್ಯವಸ್ಥೆಯಲ್ಲಿ ಸಿಲುಕಿದ ಸಮಾಜಗಳು ಜಾಗೃತಗೊಳಿಸಲು ಅತ್ಯಂತ ಹತ್ತಿರದಿಂದ ಎಲ್ಲರನ್ನು ಒಗ್ಗೂಡಿಸಲು ಮುಂದಾಗಬೇಕು.ಬಹಳ ಕಡಿಮೆ ಓದುವ ಜನಾಂಗ,ಸಮಾಜದಲ್ಲಿ ಒಗ್ಗಟ್ಟು ಮುಖ್ಯ, ಈ- ಲೈಬ್ರರಿ ಸೇರಿದಂತೆ ನಿಮ್ಮ ಎಲ್ಲ ಅನೂಕೂಲಗಳನ್ನ ಸರಕಾರದಿಂದ ಒದಗಿಸುವುದಾಗಿ ಮಾಡುವುದಾಗಿ ಎಚ್ ಕೆ ಪಾಟೀಲ ತಿಳಿಸಿದರು.                  ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಗಳು  ಮಾತನಾಡಿ ಸಿದ್ಧರಾಮರು ಶ್ರಮಿಕ ವರ್ಗಕ್ಕೆ ಮಾರ್ಗದರ್ಶಕರು, ದರ​‍್ಣ ಇದ್ದಂತೆ. ಸಿದ್ಧರಾಮರನ್ನ ವಿರೋಧ ಬಾಸವಾಗಿ ಕಂಡಿದ್ದೇವೆ.ಸಿದ್ಧರಾಮರು ಅಂದಿನ ಕಾಲದ ಪವಾಡ ಪುರುಷರು, ಪರಿವರ್ತನಾ ಪುರುಷ. ಒಬ್ಬರ ಮನೆಯ ಘಾತವ ಮಾಡದೇ,ಒಬ್ಬರ ಮನವ ನೋಯಿಸದೆ ಜೀವನ ಮಾಡಿದರೆ ಸಾಕು. ಆದಿ ಮಾನವನಿಂದ ಆಧುನಿಕ ಮಾನವನ ವರೆಗೆ ಎಂದರು.ನಾವೆಲ್ಲರೂ ದೊಡ್ಡವರಾಗಲೂ ಒಗ್ಗಟ್ಟಾಗಬೇಕಿದೆ. ಮತ್ತೊಬ್ಬರ ಬದುಕಿಗೆ ಬೆಳಕಾಗಬೇಕಿದೆ. ಮನಸ್ಸುಗಳನ್ನ ಕಟ್ಟಬೇಕಾಗಿದೆ.ಸಮಾಜ ಕಾಂಕ್ರೀಟ್ ಆದಂತೆ ಆಗಬೇಕು.ಅಕ್ಷರ ಕ್ರಾಂತಿ, ಆರ್ಥಿಕ ಕ್ರಾಂತಿ, ಆಧ್ಯಾತ್ಮಿಕ ಕ್ರಾಂತಿ ಆಗಬೇಕೆಂದರು.     

        ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಯಾರಿಗೆ ಶಿಕ್ಷಣ ಸಿಗುತ್ತೋ ಅಂತವರು ತಲೆ ಎತ್ತಿ ಬಾಳುವರು. ನಮ್ಮಲ್ಲಿ ಶಿಕ್ಷಣ ಇಲ್ಲದೆ ಹೋದರೆ ಸ್ವಾಮಿಜಿಗಳ ಶ್ರಮಕ್ಕೆ ಫಲವಾಗಿ ಅವರಿಗೆ ನಿಜವಾದ ಕಾಳಜಿ ಇದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ವಚನಗಳನ್ನ ಕಲಿಸಬೇಕೆಂದರು. ಮನಸ್ಸುಗಳನ್ನ ಕಟ್ಟಿ  ನಾವು ದೇವರಾಗಬೇಕು ದೆವ್ವ ಆಗಬಾರದೆಂದ ಅವರು ಶಿಕ್ಷಣದಿಂದ ವಂಚಿತರಾದರೆ ದೆವ್ವ ಆಗುತ್ತೇವೆ. ನಿಮ್ಮ ಉನ್ನತಿ ಅವನತಿ ನಿಮ್ಮ ಕೈಯಲ್ಲಿದೆ.ಪ್ರತಿಯೊಬ್ಬರು ಒಂದಲ್ಲ ಒಂದು ವಚನವನ್ನ ಕಲಿಯಬೇಕು.ನಮ್ಮ ಬದುಕಿನ ಕತ್ತಲೆಯನ್ನ ಕಳೆಯುವ ಶಕ್ತಿ ವಚನಕ್ಕಿದೆ ಎಂದು ಶ್ರೀಗಳು ತಿಳಿಸಿದರು.            ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಮಾಜ ಬಾಂಧವರಿಗೆ ಸನ್ಮಾನ ಕಾರ್ಯಕ್ರಮ ಏರಿ​‍್ಡಸಲಾಯಿತು. ಈ ವೇಳೆ ಜಿಲ್ಲೆಯ ಭೋವಿ ಸಮಾಜ ಬಾಂಧವರು ಭಾಗಿಯಾಗಿದ್ದರು.