ಖಾಸಗಿ ಬ್ಯಾಂಕುಗಳಿಂದ ಮೋಸ: ಕ್ರಮಕ್ಕೆ ಆಗ್ರಹಿಸಿ ಮನವಿ

Fraud by private banks: A plea for action

ಖಾಸಗಿ ಬ್ಯಾಂಕುಗಳಿಂದ ಮೋಸ: ಕ್ರಮಕ್ಕೆ ಆಗ್ರಹಿಸಿ ಮನವಿ 

ಬೆಳಗಾವಿ 02: ಸಾಲ ಮಂಜೂರು ಮಾಡಿ ಪೂರ್ಣ ಸಾಲ ಕೊಡದೇ ಮೋಸ ಮಾಡಿ ರುವ ಖಾಸಗಿ ಬ್ಯಾಂಕಗಳು ಹಾಗೂ ಅವರ ಪ್ರತಿನಿಧಗಳ ವಿರುದ್ಧ ಕ್ರಮಕೈಗೊಂಡು ರೈತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಅರ​‍್ಿಸಿತು. 

ಮನವಿಯಲ್ಲಿ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಕೆಲ ಖಾಸಗಿ ಬ್ಯಾಂಕುಗಳು ಜಿಲ್ಲೆಯ ಸುತ್ತಮುತ್ತಲಿ ಗ್ರಾಮಸ್ಥರಿಗೆ ತಮ್ಮ ಪ್ರತಿನಿಧಿಗಳ ಮೂಲಕ ವೈಯಕ್ತಿಕ ಸಾಲವನ್ನು ಮಂಜೂರು ಮಾಡಿ ಪೂರ್ಣ ಸಾಲವನ್ನು ಕೊಡದೇ ಮೋಸ ಮಾಡಿವೆ. ಬ್ಯಾಂಕಿನ ಪ್ರತಿನಿಧಿಗಳು ಸಾಲವನ್ನು ಮಂಜೂರು ಮಾಡಿ ಗ್ರಾಮಸ್ಥರ ಖಾತೆಗೆ ಜಮೆ ಮಾಡಿ ಅವರ ಖಾತೆಯಿಂದ ಹಣ ತೆಗೆದು ಮಂಜೂರಾದ ಸಾಳದ ಮೊತ್ತವನ್ನು ನೀಡಿರುವುದಿಲ್ಲ. ಮಂಜೂರಾದ ಸಾಲವನ್ನು ಕಂತುಗಳಲ್ಲಿ ಅಲ್ಪಸ್ವಲ್ಪ ಮೊತ್ತವನ್ನು ಅಂದರೆ ಶೇ. 35 ಮಾತ್ರ ಕೊಟ್ಟಿರುತ್ತಾರೆ. ಈಗ ಏಜೆಂಟರು ಕಾಣೆಯಾಗಿದ್ದಾರೆ.ಈ ರೀತಿಯಾಗಿ ಗೋಕಾಕ ತಾಲೂಕಿನ ನೆಲಗಂಟಿ, ಮೂಡಲಗಿ, ಹಾಗೂ ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮಸ್ಥರಿಗೆ ಮೋಸ ಮಾಡಿರುವುದು ಖಂಡನೀಯ. ಅಲ್ಲದೆ ಈಗ ಬ್ಯಾಂಕಿನವರು ಸಾಲ ವಸೂಲಾತಿಗಾಗಿ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ. ಮನೆಗಳಿಗೆ ನೋಟಿಸು ಅಂಟಿಸುವುದಲ್ಲದೆ ಮನೆಗಳನ್ನು ಜಪ್ತು ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಸಾಲದ ಪೂರ್ಣಪ್ರಮಾಣದ ಹಣವನ್ನು ಪಡೆಯದೇ ಈಗ ಸಾಲ ಭರಣಾ ಮಾಡಲು ಹೇಗೆ ಸಾಧ್ಯ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರೀಶೀಲನೆ ನಡೆಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅಲ್ಲದೆ ಈ ಪ್ರಕರಣದ ವಿಲೇವಾರಿ ಆಗುವವರೆಗೆ ತೊಂದರೆ ಕೊಡಬಾರದೆಂದು ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿವೆ.  

 ಈ ಸಮಯದಲ್ಲಿ ರಾಜ್ಯ ಸಂಚಾಲಕ ಅನಿಲ ಶಿಂಗೆ, ಜಿಲ್ಲಾ ಗೌರವಾಧ್ಯಕ್ಷ ವಿ.ಬಿ.ನಿಂಬರಗಿ, ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಿಕ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪಾ ಕಮತಗಿ, ಕಾರ್ಯಾಧ್ಯಕ್ಷ ಸಣ್ಣಪ್ಪ ಸನದಿ, ಪ್ರ. ಕಾರ್ಯದರ್ಶಿ ಭಾರತಿ ಪಾಟೀಲ, ಹುಕ್ಕೇರಿ ತಾಲೂಕಾಧ್ಯಕ್ಷರು, ತಾಲೂಕಾ ಮುಖಂಡ ಮ. ಮೇಟಿ, ಚಂದ್ರಾ​‍್ಪ ತಳವಾರ, ಸಂತೋಷ ತಳವಾರಯಲ್ಲಪ್ಪ ತಳವಾರ, ಶೋಭಾ ರಾಮಗಾನಟ್ಟಿ ಮೊದಲಾದವರು ಉಪಸ್ಥಿತರಿದ್ದರು.