ಬಾಲಕ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ 18: ಕೊಪ್ಪಳ ಗಣೇಶ ನಗರದ ಮಹ್ಮದ ಫೈಜ್ ತಂದೆ ಬಾಬಾಶರೀಫ್, 15 ವರ್ಷದ ಬಾಲಕ ಮೇ. 18 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಸ್ಟೇಶನ್ ಹೌಸ್ ಆಫಿಸರ್ ರಮೇಶ ಹೆಚ್.ಸಿ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.  

ಮಹ್ಮದ ಫೈಜ್ ತಂದೆ ಬಾಬಾಶರೀಫ್, ವಯಸ್ಸು 15 ವರ್ಷ, ಈತನಿಗೆ ಭಾಗ್ಯನಗರದಲ್ಲಿ ಕೋಚಿಂಗ್ ಕ್ಲಾಸ್ಗೆ ಹಾಕಲಾಗಿತ್ತು.  ಆದರೆ ಕ್ಲಾಸಿಗೆ ಸರಿಯಾಗಿ ಹೋಗದೇ ಇರುವುದರಿಂದ ಮನೆಯಲ್ಲಿ ಬುದ್ದಿ ಹೇಳಿದ್ದರಿಂದ ಮೇ. 18 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಯಾರು ಹೇಳದೆ ಮನೆಯಿಂದ ಹೋದವನು ವಾಪಸ್ ಬಾರದೇ ಕಾಣೆಯಾಗಿದ್ದಾನೆ.  ಈತನು ಅಪ್ರಾಪ್ತನಾಗಿದ್ದು, ಇವನಿಗೆ ಯಾರೋ ಯಾವುದೋ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ನನಗೆ ಸಂಶಯ ಇದೆ ಎಂದು ಮಹ್ಮದ ಫೈಜ್ (15), ಬಾಲಕನ ತಂದೆ ಬಾಬಾಶರೀಫ್ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರ ನೀಡಿದ್ದಾರೆ.    

ಕಾಣೆಯಾದ ಬಾಲಕನ ಚಹರೆ ವಿವರ ಇಂತಿದೆ.  ಮಹ್ಮದ ಫೈಜ್ ತಂದೆ ಬಾಬಾಶರೀಫ್, ವಯಸ್ಸು 15 ವರ್ಷ, ವಿದ್ಯಾಭ್ಯಾಸ 9ನೇ ತರಗತಿ, ಎತ್ತರ 5.5 ಅಡಿ, ಸಾಧಾರಣ ಮೈಕಟ್ಟು, ಸಾದಾ ಕೆಂಪು ಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದಾನೆ.  ಕಾಣೆಯಾದಾಗ ಬಿಳಿ ಬಣ್ಣದ ಶರ್ಟ ಮತ್ತು ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಧರಿಸಿದ್ದು, ಕನ್ನಡ, ಉದರ್ು ಹಾಗೂ ಹಿಂದಿ ಭಾಷೆಯನ್ನು ಮಾತನಾಡುತ್ತಾನೆ.  ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ. 08539-230100/ 230222, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಮೊ.ಸಂ 9480803745, ದೂ.ಸಂ 08539-220333, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.