ಲೋಕದರ್ಶನ ವರದಿ
ಬೆಳಗಾವಿ 07: ಮನೆ ಬಾಗಿಲಿಗೆ ಕೀಲಿಯನ್ನು ಹಾಕಲು ಹಾಗೂ ತೆಗೆಯಲು ಒಂದೇ ಸಾಧಾನವೆಂದರೆ ಕೀಲಿಕೈ.. ಎಡಕ್ಕೆ ತಿರುವುಗಿಸಿದರೆ ಕೀಲಿ ಹಾಕಿಕೊಳ್ಳುತ್ತದೆ. ಬಲಕ್ಕೆ ತಿರುವುಗಿಸಿದರೆ ಕೀಲಿ ತೆರೆದುಕೊಳ್ಳುತ್ತದೆ ಅದರಂತೆ ಮನಸ್ಸಿವೆಂಬ ಸಾಧನವನ್ನು ಭಗವಂತನಲ್ಲಿ ಇಟ್ಟರೆ ಮೊಕ್ಷಕ್ಕೆ ಸಾಧನವಾಗುತ್ತದೆ. ಲೌಕಿಕದತ್ತ ಹೊರಳಿಸಿದಲ್ಲಿ ಸಂಸಾರ ಬಂಧನಕ್ಕೆ ಕಾರಣವಾಗುತ್ತದೆ. ಆದರೆ ನಮ್ಮ ಮನಸ್ಸು ನಾವು ಹೇಳಿದಂತೆ ಕೇಳುವುದಿಲ್ಲವಲ್ಲ ಎನ್ನಬಹುದು. ಪ್ರಾಣಾಯಾಮ ಮಾಡುವುದರಿಂದ ಏಕಾಗ್ರತೆ ಮೂಡುವುದು ಎಂದು ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದೈಹಿಕ ಉಪನ್ಯಾಸಕರೆಂದು ಸೇವೆ ಸಲ್ಲಿಸುತ್ತಿರುವ ಪೂರ್ಣಬೋಧ ಕಡಗದಕೈ ಇಂದಿಲ್ಲಿ ಹೇಳಿದರು.
ಟಿಳಕವಾಡಿಯ ಮಂಗಳವಾರ ಪೇಟೆಯಲ್ಲಿರುವ ಆಶಾಬಾಯಿ ಪೋತದಾರ ಸಭಾಭವನದಲ್ಲಿ ಹಿಂದವಾಡಿಯ ವೇಣುಗೋಪಾಲ ಭಜನಾ ಮಂಡಳದವರು 17 ನೇ ವರ್ಷದ ವಾಷರ್ಿಕೋತ್ಸವ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಡಾ. ಪೂರ್ಣಬೋಧ ಕಡಗದಕೈ ಮೇಲಿನಂತೆ ಅಭಿಪ್ರಾಯ ಪಟ್ಟರು.
ಅತಿಥಿಗಳಾಗಿ ಆಗಮಿಸಿದ್ದ ನಿವೇದಿತಾ ಮುರಗೋಡ, ವ್ಯಾಸಸಾಹಿತ್ಯ ಹಾಗೂ ದಾಸಸಾಹಿತ್ಯ ಒಂದಕ್ಕೊಂದು ಪೂಷಕ, ಪೂರಕ. ವ್ಯಾಸಸಾಹಿತ್ಯದ ಮೂಲತತ್ವಗಳೇ ದಾಸಸಾಹಿತ್ಯ. ತ್ರೇತಾಯುಗದ ಹನುಮಂತದೇವರೇ ಪ್ರಥಮ ದಾಸರು. ದಾಸ ಸಾಹಿತ್ಯ ವಾಯುದೇವರಿಂದಲೇ ಬಂದುದು. ನಮ್ಮಲ್ಲಿರುವ ಅಹಂಕಾರ, ಮೋಹಗಳನ್ನು ಬಿಟ್ಟು ಭಗವಂತನೆಡೆಗೆ ಮನಸ್ಸನ್ನು ಹೊರಳುವಂತೆ ದಾಸರಪದಗಳು ಮಾಡುತ್ತವೆ. ದಾಸರ ಪದಗಳ ಒಳಅರ್ಥಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಹರಿದಾಸ ಹಬ್ಬದ ಕೇಶವ ಮಾಹುಲಿ ಮಾತನಾಡಿ ಕಳದೆರಡು ವರ್ಷಗಳಿಂದ ವೇಣುಗೋಪಾಲ ಭಜನಾ ಮಂಡಳ ತುಂಬ ಚಟುವಟಿಕೆಯುಳ್ಳವದಾಗಿದ್ದು. ಇನ್ನು ಮುಂದೆಯೂ ಸಹ ಇದೇ ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಹೋಗಲಿ. ನನ್ನಿಂದಾಗುವ ಎಲ್ಲ ರೀತಿಯ ಸಹಾಯವನ್ನು ಮಾಡಿಕೊಡುವೆ ಎಂದು ಹೇಳಿದರು.
'ಸಂಘಟಕರ ಸಂಕಟಗಳು' ವಿಷಯ ಕುರಿತಂತೆ ಮಾತನಾಡುತ್ತ ಸಂಘಟಕ ಗುಂಡೇನಟ್ಟಿ ಮಧುಕರ ಅವರು ಮಾತನಾಡಿ ಹೆಚ್ಚಿನ ಸಂಘಟನೆಗಳು ಅಲ್ಪಾಯುಷಿಗಳಾಗಿರುತ್ತವೆ. ಇಂದು ಉದ್ಘಾಟನೆಗೊಂಡ ಸಂಘ ಮರುದಿನವೇ ಕಾಣಸಿಗುವುದಿಲ್ಲ. ಆದರೆ ವೇಣುಗೋಪಾಲ ಭಜನಾ ಮಂಡಳಿ ಯಶಸ್ವಿ 17 ವರ್ಷಗಳನ್ನು ಪುರೈಸಿರುವ ಹಿಂದೆ ಹಿರಿಯರಾದ ಪ್ರಭಾ ಉಡುಪಿಯವರ ಶ್ರಮ ಬಹಳಷ್ಟಿದೆ. ಎಂದು ಸಂಘಟನೆಯ ಕಾರ್ಯಗಳನ್ನು ಅವರು ಕೊಂಡಾಡಿದ ಅವರು ಸಂಘಟಕರ ಸಂಕಟಗಳನ್ನು ನವಿರಾದ ಹಾಸ್ಯದೊಂದಿಗೆ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಡಾ. ಪೂರ್ಣಬೋಧ ಕಡಗದಕೈ, ಕೇಶವ ಮಾಹುಲಿ, ಶ್ರೀಮತಿ ನಿವೇದಿತಾ ಮುರಗೋಡ, ಗುಂಡೇನಟ್ಟಿ ಮಧುಕರ, ಸುಜಾತಾ ಕುಲಕಣರ್ಿ ಅಲ್ಲದೆ ಹಿರಿಯ ನಾಗರಿಕರಾದ ಶುಭಾಂಗಿ ಕುಲಕಣರ್ಿ, ಶೈಲಜಾ ನೇಲರ್ೇಕರ, ವಿಜಯಾ ಹೊನ್ನಂಗಿ, ಸೀತಾ ಹರಿಹರ, ಜಾಹ್ನವಿ ಕುಲಕಣರ್ಿ, ಗೀತಾ ಲಕ್ಷೇಶ್ವರ, ಸುಧಾ ಕುಲಕಣರ್ಿ, ರಮಾ ಹುಯಿಲಗೋಳ ಇರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಲಕ್ಷ್ಮೀ ಕುಲಕಣರ್ಿ, ನೇತ್ರಾ ಕಿತ್ತೂರ, ರಾಧಿಕಾ ಜೋಶಿ, ರೂಪಾ ಹೊನ್ನಂಗಿ, ಮೀರಾ ಕುಲಕಣರ್ಿ, ಲಕ್ಷ್ಮೀ ಬೀಜಾಪುರೆ, ಸುಧಾ ಪೋತದಾರ, ವೀಣಾ ಅವಧಾನಿ, ಗಾಯತ್ರಿ ಜೋಶಿ, ಮಂದಾ ಗುಂಡೇನಟ್ಟಿ, ಸರಿತಾ ಕುಲಕಣರ್ಿ, ಪ್ರಭಾ ಉಡುಪಿ, ಪಂಕಜಾ ಕುಲಕಣರ್ಿ, ಮಾಧುರಿ ಜೋಶಿ, ಮಾಯಾ ಕುಲಕಣರ್ಿ, ಸವಿತಾ ಕುಲಕಣರ್ಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಮಾ ಕುಲಕಣರ್ಿ, ಅನುಷಾ ದೇಶಪಾಂಡೆ ಪ್ರಾಥರ್ಿಸಿದರು. ಕಲ್ಪನಾ ಕಾಕಡೆ ನಿರೂಪಿಸಿದರು. ಮೇಘಾ ಕುಲಕಣರ್ಿ, ಪ್ರಿಯಾ ಗುಮಾಸ್ತೆ, ಮಾಧುರಿ ಕುಲಕಣರ್ಿ, ರಾಧಾ ಗುಮಾಸ್ತೆ ಪರಿಚಯಿಸಿದರು. ಅಂಜನಾ ದೇಶಪಾಂಡೆ ವಂದಿಸಿದರು.