ರೂ. 4.5 ಕೋಟಿಯ ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

ಲೋಕದರ್ಶನ ವರದಿ

ಕೊಪ್ಪಳ 01: 50-54 ಯೋಜನೆಯ ಅಡಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳ ಸುದಾರಣೆ 2018-19ರ ಅನುಧಾನದಲ್ಲಿ ಹಿಟ್ನಾಳ-ಹುಲಗಿ ಗ್ರಾಮಕ್ಕೆ ರೂ.4 ಕೋಟಿ ವ್ಯಚ್ಚದಲ್ಲಿ ಡಾಂಬರ ರಸ್ತೆ ನಿಮರ್ಾಣ ಹಾಗೂ ಗುಡದಳ್ಳಿ ಮತ್ತು ಹೊಸಕನಕಾಪುರ ಗ್ರಾಮದಲ್ಲಿ ಟಿ.ಎಸ್.ಪಿ.ಯೋಜನೆ ಅಡಿಯಲ್ಲಿ ರೂ.50 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಗ್ರಾಮಗಳ ವಿಕಾಸ ಯೋಜನೆ ಅಡಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಕ್ಷೇತ್ರದ ಜನತೆಗೆ ಜಿಲ್ಲಾ ಕೇಂದ್ರಕ್ಕೆ ಸುಗಮವಾಗಿ ಬರುವಂತೆ ಸಂಪರ್ಕ ಕಲ್ಪಿಸಲಾಗಿದ್ದು, ವ್ಯಾಪಾರ ವಹಿವಾಟು ಗ್ರಾಮಗಳಿಂದ ವಿಧ್ಯಾಭ್ಯಾಸಕ್ಕಾಗಿ ಬರುವ ವಿದ್ಯಾಥರ್ಿಗಳಿಗೆ  ಹೆಚ್ಚಿನ ಸವಲತ್ತು ಕಲ್ಪಿಸಲಾಗಿದೆ. ಪ್ರತಿ ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದು, ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ ಕೋಡಲಾಗಿದ್ದು, ನಗರದ ಅಭಿವೃದ್ಧಿಗೂ ಹೆಚ್ಚು ಮಾನ್ಯತೆ ಕೋಡಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ.ಅಧ್ಯಕ್ಷ ದರ್ಮರಾಜ ಕಲಾಲ್, ಮಾಜಿ ಜಿ.ಪಂ.ಸದಸ್ಯೆ ಕೆ.ರಮೇಶ ಹಿಟ್ನಾಳ, ನಾಗರಾಜ ಪಟವಾರಿ, ಬಸವರಾಜ ಆನೆಗುಂದಿ, ಅಶೋಕ ಇಳಿಗೇರ, ವೆಂಕಪ್ಪ ಬನ್ನಿಗಿಡ, ಮಾರುತ್ತೇಪ್ಪ ಹಲಗೇರಿ, ನಾಗರಾಜ ಕುರಟ್ಟಿ, ಯಂಕಪ್ಪ ಹಂಚಿ, ಯಂಕಪ್ಪ ಪೂಜಾರ, ರವಿ ಹಾದಿಮನಿ, ನಗರಸಭೆ ಸದಸ್ಯ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.