ಶಿವಾಜಿ ಮಹಾರಾಜರು ದಿ ಗ್ರೇಟ್ ಇಂಡಿಯನ್ : ಸಚಿವ ಸತೀಶ್ ಜಾರಕಿಹೊಳಿ

Shivaji Maharaj The Great Indian : Minister Satish Jarakiholi

 ಶಿವಾಜಿ ಮಹಾರಾಜರು ದಿ ಗ್ರೇಟ್ ಇಂಡಿಯನ್ : ಸಚಿವ ಸತೀಶ್ ಜಾರಕಿಹೊಳಿ 

ಬೆಳಗಾವಿ 18: ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮರಾಠಾ ,ಮುಸ್ಲಿಂ ಸಮಾಜದವರು ಸಹೋದರಂತೆ  ಇದ್ದರು. ಇಂದಿನ ಕಾಲಘಟ್ಟದಲ್ಲಿ ನೈಜತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನೈಜ ಇತಿಹಾಸ ಸಮಾಜಕ್ಕೆ ತಿಳಿಸುವ ಕೃತಿಗಳು ರಚನೆಯಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದ ಕನ್ನಡ ಭವನದಲ್ಲಿ ಭಾನುವಾರ ಡಾ. ಸರಜೂ ಕಾಟ್ಕರ್ ಅವರ ಛತ್ರಪತಿ "ಶಿವಾಜಿ ದಿ ಗ್ರೇಟ್ ಮರಾಠಾ" ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.  ಛತ್ರಪತಿ ಶಿವಾಜಿ ಮಹಾರಾಜರ ದಿ ಗ್ರೇಟ್ ಮರಾಠಾ ಅನುವುದಕ್ಕಿಂತ ದಿ ಗ್ರೇಟ್ ಇಂಡಿಯನ್ ಎಂದು ಕರೆಯಬೇಕು.  ಅವರು,  ಶ್ರೇಷ್ಠ ಸಮಾಜ ಸೇವಕರಾಗಿದ್ದರು. ದೇಶದಲ್ಲಿ ತಮ್ಮ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿಕೊಂಡು, ಬಹಳಷ್ಟು ದೇಶಾಭಿಮಾನ ಇಟ್ಟುಕೊಂಡಿದ್ದ ಅವರು,  ಬ್ರಿಟಿಷರ ವಿರುದ್ಧ ಎದೆಗೆ..ಎದೆಯೊಡ್ಡಿ ಹೋರಾಡಿದವರು ಶಿವಾಜಿ ಮಹಾರಾಜರು.  ಅಫ್ಜಲ್ ಖಾನ್  ಕ್ರೂರ ಆಡಳಿಂದದಿಂದ ಬೆಸತ್ತ ಕೆಲವರು ಮುಸ್ಲಿಂ ಸಮುದಾಯದವರು,  ಅಫ್ಜಲ್ ಖಾನ್ ಮುಗಿಸಲು ಶಿವಾಜಿ ಮಹಾರಾಜರೊಂದಿಗೆ ಕೈ ಜೋಡಿಸಿದ್ದು ಇತಿಹಾಸ. ದೇಶದ ಇತಿಹಾಸ ತಿಳಿಯಲು ಇಂತಹ ಪುಸ್ತಕ ಅಗತ್ಯ. ಶಿವಾಜಿ ಮಹಾರಾಜರ ಕುರಿತು ಈ ಪುಸ್ತಕದಲ್ಲಿ ನೈಜ ರೂಪದಲ್ಲಿ ಹೇಳುವ ಪ್ರಯತ್ನ ಡಾ. ಸರಜೂ ಕಾಟ್ಕರ್ ಅವರು ಮಾಡಿದ್ದಾರೆ. ಸರಿಯಾದ ದೃಷ್ಟಿ ಕೋನದಿಂದ ಓದಿದಾಗ ದೇಶದ ಇತಿಹಾಸ ತಿಳಿಯಲಿದೆ.  ಶಿವಾಜಿ ಮರಾಠಕ್ಕಷ್ಟೇ ಸೀಮಿತವಲ್ಲ, ಬಸವಾದಿ ಶರಣರು ಲಿಂಗಾಯತರಿಗಷ್ಟೇ ಸೀಮಿತವಲ್ಲ, ಹಾಗೆಯೇ ಬಾಬಾ ಸಾಹೇಜ ಅಂಬೇಡ್ಕರ್ ಅವರು ದಲಿತರಿಗಷ್ಟೆ ಸೀಮಿತರಾದವರಲ್ಲ. ಹೀಗಾಗಿ ದೇಶದ ಜನತೆ ನಿಜಾಂಶ ತಿಳಿದುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. ಬ್ರಿಟಿಷ್ ರೊಂದಿಗೆ ಡಚ್ಚರೊಂದಿಗೆ ಪೋರ್ಚುಗೀಸ್ ರೊಂದಿಗೆ ಇತರರೊಂದಿಗೆ ಹೋರಾಡಿದರು.  ಛತ್ರಪತಿ ಶಿವಾಜಿ ಮಹಾರಾಜರು ಇತಿಹಾಸ ಜಗತ್ತಿಗೆ ಪರಿಚಯಿಸಿದರು ಜ್ಯೋತಿಬಾ ಪುಲೆ ಅವರು,  ಶಿವಾಜಿ ಜೊತೆಗೆ ಹಿಂದುಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದರು. ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಂ ಸಮುದಾಯದವರು, ಅಫ್ಜಲ್ ಖಾನ್ ನ್ನು ಮುಗಿಸಲು ಮುಸ್ಲಿಂರ ಸಹಾಯ ಇದೆ. ಇದನ್ನು ತಿರುಚುವ ಪ್ರಯತ್ನ ಆಗಬಾರದು. ಇದು ಸಮಾಜಕ್ಕೆ ಮಾರಕ ಎಂದು ಹೇಳಿದರು. ಮೋಘಲರಿಂದ ದೇಶವನ್ನು  ರಕ್ಷಿಸುವ ಪ್ರಯತ್ನ ಮಾಡಿದವರು ಶಿವಾಜಿ ಮಹಾರಾಜರು ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಇಂದು ಲೆಫ್ಟ್‌, ರೈಟ್ ಎಂದು ದೇಶ ಬೆಳೆಯಲು ಮಾರಕವಾಗಿದೆ. ಅವರು ಈ ಕಡೆ ಬರುವುದಿಲ್ಲ, ಇವರು ಆ ಕಡೆ ಬರುವುದಿಲ್ಲ ಎಂದೂ ಅವರು ಹೇಳಿದರು. ಅವರೊಬ್ಬ ದೂರದೃಷ್ಟಿಯ ನಾಯಕರಾಗಿದ್ದರು. ಶೂದ್ರ ಎನ್ನುವ ಕಾರಣಕ್ಕೆ ಪಟ್ಟಾಭಿಷೇಕ ಮಾಡಲು ತಡೆಯಲಾಗಿತ್ತು. ಹೆಸರು ಮಾಡುತ್ತಾನೆ ಎಂದು ಸಮಾಧಿಯನ್ನು ಮುಚ್ಚಿಡಲಾಗಿತ್ತು. ಇಂದು ಅವರ ಪರವಾಗಿರುವವರೇ ಅಂದು ಅವರ ವಿರೋಧಿಗಳಾಗಿದ್ದರು. ನಿಜವಾದ ಇತಿಹಾಸ ತಿಳಿದುಕೊಳ್ಳುವವರೆಗೆ ಗೊಂದಲ, ಹೊಡೆದಾಟ ಇರುತ್ತದೆ. ಮೊಬೈಲ್ ಬಂದ ಮೇಲೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತಿದೆ ಎಂದು ವಿವರಿಸಿದರು. ಶಿವಾಜಿಯನ್ನು ಕೇವಲ ಮರಾಠಾ ಎಂದು ನೋಡದೆ ನಮ್ಮ ರಕ್ಷಕರು ಎಂದು ನೋಡಬೇಕು. ಅವರು ಇಡೀ ದೇಶದ ಆಸ್ತಿ. ಅವರೊಬ್ಬ ಗ್ರೇಟ್ ಇಂಡಿಯನ್ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕೃತಿಕಾರ ಡಾ.ಸರಜೂ ಕಾಟ್ಕರ ಕೃತಿ ರಚನೆ ಕುರಿತು ಮಾತನಾಡಿದರು. ರಾಮಕೃಷ್ಣ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.  ಅಧ್ಯಕ್ಷತೆಯನ್ನು ಡಾ.ಮನು ಬಳಿಗಾರ ವಹಿಸಿದ್ದರು. ಡಾ. ಗುರುದೇವಿ ಹುಲೆಪ್ಪನವರಮಠ, ಯ.ರು. ಪಾಟೀಲ ಕೃತಿ ಪರಿಚಯ ಮಾಡಿದರು.ಡಾ.ರಾಮಕೃಷ್ಣ ಮರಾಠೆ ಸ್ವಾಗತಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.  ಪತ್ನಿ ಸುಮಾ ಕಾಟ್ಕರ ವಂದಿಸಿದರು.