ವಿಶ್ವಮಾನವರ ಶಾಂತಿದೂತ ಏಸುಪ್ರಭು: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 25: ನಗರ ಇಸಿಐ ಚರ್ಚನಲ್ಲಿ ಕ್ರೀಸ್ಮಸ್ ಹಬ್ಬದ್ದ ಸಂಭ್ರಮಾಚರನೆಯಲ್ಲಿ ಪಾಲ್ಗೊಂಡು ಕ್ರೈಸ್ತ ಬಾಂದವರ ಜೂತೆ ಶುಭಾಶಯ ವಿನಿಮಯ ಮಾಡಿಕೊಂಡ ಬಳಿಕ ಮಾತನಾಡಿದ ರಾಜ್ಯ ಸರಕಾರದ ಸಂಸದೀಯ ಕಾರ್ಯದಶರ್ಿ ಕೆ. ರಾಘವೇಂದ್ರ ಹಿಟ್ನಾಳರವರು ವಿಶ್ವಶಾಂತಿಯನ್ನು ಎತ್ತಿಹಿಡಿದ ಏಸು ಪ್ರಭು ಸಕಲ ಜೀವಿಗಳ ಉದ್ದಾರಕರಾಗಿದ್ದು, ಬೆತ್ಲೆಹೇಮನಲ್ಲಿ ಮರಿಯಮ್ಮ ಮತ್ತು ಜೋಸೆಪ್ ದಂಪತಿಗಳ ಉದ್ದರದಲ್ಲಿ ಜನಿಸಿದ ಏಸುರವರು, ತಮ್ಮ ಇಡೀ ಜೀವನವೇ ಮನುಕುಲದ ಏಲ್ಗೆಗಾಗಿ ಶ್ರಮಿಸಿದ್ದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬರುವ 6ಚರ್ಚಗಳಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ರೂ 3 ಕೋಟಿಯ ಅನುದಾನ ಒದಗಿಸಲಾಗಿದೆ ಹಾಗೂ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದ್ದರು.

ಈ ಶುಭದಿನದಂದು ಪ್ರತಿಯೊಬ್ಬರು ಅನ್ಯದಮರ್ಿಯರ ಜೊತೆಗೆ ಪ್ರೀತಿ ಶಾಂತೆ ಸಹಬಾಳ್ವೆ ಸೌರ್ಹದತೆಯ ಜೀವನ ನಡೆಸಲ್ಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಇಸಿಐ ಚರ್ಚ ಪಾದರ್ ರವಿಕುಮಾರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸುರೇಶ ಭೂಮರಡ್ಡಿ, ನಗರ ಸಭೆ ಸದಸ್ಯರಾದ ಅಮ್ಜದ್ ಪಟೇಲ್, ಅಕ್ಬರ ಪಾಷ ಪಲ್ಟನ್, ಮುಖಂಡರುಗಳಾದ ಗವಿಸಿದ್ದಪ್ಪ ಚಿನ್ನೂರ, ಮಹೆಬೂಬ ಮಚ್ಚಿ, ಸಮಾಜದ ಬಾಂದವಾರಾದ ಶ್ಯಾಮ ಸುಂದರ ಹುಣಿಸಿಮರದವ, ಮೋಹನ ಬಾಬೂರಡ್ಡಿ, ಪ್ರಕಾಶ ಕರಡಿಗಿ, ಚಂದ್ರು ಬೆದವಟ್ಟಿ, ಶ್ಯಮಾಸನ್, ಪರಶುರಾಮ ಹುಣಿಸಿಮರದ. ವಿರೇಶ ಮಂಗಳೂರು. ಉಪಸ್ಥಿರಿದ್ದರು.