ಭಕ್ತರ ಹೃದಯದೊಳಗೆ ಬುಡ್ಡಮ್ಮ ದೇವಿ ಅದಾಳ ಅನ್ನುವುದಕ್ಕೆ ಇದೊಂದು ನಿದರ್ಶನ ಜಾತ್ರೆ

This fair is an example of how Buddhamamma Devi is in the hearts of devotees

ಭಕ್ತರ ಹೃದಯದೊಳಗೆ ಬುಡ್ಡಮ್ಮ ದೇವಿ ಅದಾಳ ಅನ್ನುವುದಕ್ಕೆ ಇದೊಂದು ನಿದರ್ಶನ ಜಾತ್ರೆ   

ಕೊಪ್ಪಳ  18:  ನಿಮ್ಮ ಭಕ್ತಿ ನಿಮ್ಮ ಭಾವ ನಿಮ್ಮ ಶ್ರದ್ಧೆ ಸದಾ ನಿಮ್ಮ ಸತ್ತ ಮನಸ್ಸು ನೋಡಿದರೆ ಅಮ್ಮ ಬುಡ್ಡಮ್ಮ ದೇವಿ ನಿಮ್ಮ  ಹೃದಯದೊಳಗೆ ಅನ್ನುವುದಕ್ಕೆ ಇದೊಂದು ನಿದರ್ಶನ ಜಾತ್ರೆ ವರ್ಷದಿಂದ ವರ್ಷಕ್ಕೆ ಬೆಳಿತಾ ಇದೆ ಬೆಳೆಯಲಿ ಅಮ್ಮನ ಕೃಪ ಸದಾ ನಿಮ್ಮೆಲ್ಲರ ಮೇಲೆ ಇರಲಿ ಎಂದು ಕೊಪ್ಪಳದ ಪರಮ ಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು  ಹಾರೈಸಿದರುತಾಲೂಕಿನ ಮೈನಹಳ್ಳಿ ಗ್ರಾಮದ ಆರಾಧ್ಯ ದೇವತೆ ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸಾಯಂಕಾಲ 6:00 ಗಂಟೆಗೆ ಸಾವಿರಾರು ಭಕ್ತ ಸಮೂಹದ ನಡುವೆ ಭಕ್ತಿ ಭಾವದಿಂದ ಮಹಾ ರಥೋತ್ಸವ  ಅದ್ದೂರಿಯಾಗಿ ಜರುಗಿತು. ಬೆಳಗ್ಗೆಯಿಂದ ರಥೋತ್ಸವಕ್ಕೆ ಭಕ್ತ ಸಮೂಹ ವಿಶೇಷ ಹೂವಿನ ಹಾರ,ಹಣ್ಣು, ಬಾಳೆದಿಂಡು, ಮಾವಿನ ಎಲೆಗಳಿಂದ ಶೃಂಗೀರಿಸಿದರು ಬುಡ್ಡಮ್ಮ ದೇವಿ ಮನೆಯಿಂದ ಮೂರ್ತಿಯನ್ನು ಡೊಳ್ಳು  ಭಜನೆ ಮೆರವಣಿಗೆ ಮುಖಾಂತರ ಗ್ರಾಮದ ಮುಖ್ಯ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ  ದೇವಸ್ಥಾನಕ್ಕೆ ಆಗಮಿಸಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು ಬುಡ್ಡಮ್ಮ ದೇವಿ ಮೂರ್ತಿಗೆ ಅಭಿಷೇಕ ವಿಶೇಷ ಪೂಜೆ ನೆರವೇರಿತು ಗ್ರಾಮೀಣ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಬಿಕನಹಳ್ಳಿ ಹಂದ್ರಳ, ಅಳವಂಡಿ, ಹಲಗೇರಿ, ಹಾಗೂ ಜಿಲ್ಲೆಗಳಿಂದ ಆಗಮಿಸಿ ಭಕ್ತರು ದೇವಿಯ ದರ್ಶನ ಪಡೆದುಕೊಂಡು ಪುನೀತರಾದರು. 

  ಮಹಾ ರಥೋತ್ಸವ ಜರಗುವ ಸಮಯದಲ್ಲಿ ಭಕ್ತರು ಭಕ್ತಿ, ಭಾವದಿಂದ ರಥೋತ್ಸವಕ್ಕೆ ಉತ್ತತ್ತಿ, ಹಣ್ಣು, ಹೂಗಳನ್ನು ಎಸೆದು ಹರಕೆ ತೀರಿಸಿದರು. ಪಟಾಕ್ಷಿ (ಧ್ವಜ) ಲೀಲಾವೊ  ನಡೆಯಿತು ರಥೋತ್ಸವವು ಪಾದಗಟ್ಟಿವರೆಗೂ ತಲುಪಿ ನಂತರ ವಾಪಸು ಬಂದಾಗ ಭಕ್ತರ  ಬುಡ್ಡಮ್ಮ ದೇವಿ ಮಹಾರಾಜಕೀ ಜೈ ಎಂದು ಘೋಷಣೆ ಕೂಗುತ್ತಾ ಭಕ್ತಿ ಸಮರ​‍್ಿಸಿದರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಿವ್ಯ ಸಾನಿಧ್ಯವನ , ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ  ಗವಿಮಠ ಕೊಪ್ಪಳ  ಚಿದಾನಂದ ಮಹಾಸ್ವಾಮಿಗಳು  ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು   ಷ.ಬ್ರ   ಮ.ನಿ.ಪ್ರ ಡಾಽ ಹಿರಿಶಾಂತವೀರ ಸ್ವಾಮಿಗಳು  .ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು  ಅತ್ಯಾನಂದ ಭಾರತಿ ಸ್ವಾಮಿಗಳು   ಪಟ್ಟದ ದೇವರು ಚಿನ್ಮಯಸ್ವಾಮಿಗಳು ಗೋಣಿಬಸವೇಶ್ವರ , ಮ.ಘ.ಚ. ಮೃತ್ಯುಂಜಯ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರುಪ್ರತಿ ವರ್ಷದಂತೆ ಈ ವರ್ಷವು ಬೆಳಿಗ್ಗೆ 08 ಗಂಟೆಯಿಂದ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಇವರಿಂದ ರಕ್ತದಾನ ಶಿಬಿರ ನಡೆಯಿತು.  ರಕ್ತದಾನಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಿದ್ದಾರೆ.    ಶಿವಶರಣೆ ಬುಡ್ಡಮ್ಮ ದೇವಿ ನಾಟ್ಯ ಸಂಘದಿಂದ ರಾತ್ರಿ 10.30 ಕ್ಕೆ ಧನಿಕರ ದೌರ್ಜನ್ಯ ಎಂಬ ಸುಂದರ ಸಾಮಾಜಿಕ ನಾಟಕ ಮೈನಹಳ್ಳಿ ಗ್ರಾಮದಲ್ಲಿ ಅಭಿನಯಿಸಿದರು ಜನಪ್ರತಿನಿಧಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು , ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಗ್ರಾಮದ ಗುರು-ಹಿರಿಯರು ಹಾಗೂ ಯುವಕ ಮಿತ್ರರು ಸೇರಿದಂತೆ ಸಕಲ ಸದ್ಭಕ್ತ ಮಂಡಳಿ  ಭಾಗವಹಿಸಿದ್ದರು