ಹಾವೇರಿ09: ದೇಶದ ದಿನ,ದಲಿತರ ಹಾಗೂ ಹಿಂದುಳಿದ ವರ್ಗದವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಧೀಮಂತ ನಾಯಕರೇ ಪ್ರೋ.ಬಿ ಕೃಷ್ಣಪ್ಪನವರು. ಅವರ ಬದುಕೇ ಇಂದಿನ ಹೋರಾಟಕ್ಕೆ ಸ್ಪೂತರ್ಿಯಾಗಿದೆ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಡಿಎಸ್ಎಸ್ ಜಿಲ್ಲಾ ಶಾಖೆಯಿಂದ ಆಯೋಜಿಸಿದ ಪ್ರೋ.ಬಿ ಕೃಷ್ಣಪ್ಪನವರ 81ನೇ ಜನ್ಮ ದಿನಾಚಾರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ: ಬಿಆರ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತದಡಿ ಸರ್ವರಿಗೂ ನ್ಯಾಯ ಸಿಗಬೇಕು. ಸರ್ವರ ಏಳಿಗೆ ಬಯಸುವ ಮೂಲಕ ದಿನ,ದಲಿತರು ಹಾಗೂ ಆಥರ್ಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ವರ್ಗದವರನ್ನು ಶೋಷಣೆಯಿಂದ ಮುಕ್ತಗೊಳಿಸಲು ಕ್ರಾಂತಿ,ಹೋರಾಟ ಮುಖ್ಯ ಎಂದು ಅರಿತ ಪ್ರೋ.ಬಿ.ಕೃಷ್ಣಪ್ಪನವರ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು.
ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಬಿರಿದ್ದ ಅವರು ಬಡವರ,ಕೃಷಿಕರ ಹಾಗೂ ಕೂಲಿ ಕಾಮರ್ಿಕರ ಧ್ವನಿಯಾಗಿ ಸದಾ ಹೋರಾಟ ಮಾಡುತ್ತಾ ಬಂದಿದ್ದು, ಇಂದಿನ ಎಲ್ಲ ಹೋರಾಟಗಾರರಿಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ಉಡಚಪ್ಪ ಮಾಳಗಿ ಅವರ ಜೀವನ ಹಾಗೂ ಹೋರಾಟ ದಾರಿಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪೂರ ಮಾತನಾಡಿ ಪ್ರೋ ಬಿ ಕೃಷ್ಣಪ್ಪನವರು ದೂರದೃಷ್ಠಿಕೋನ ಉಳ್ಳವರಾಗಿದ್ದು, ಎಲ್ಲ ವರ್ಗದ ಜನರ ಏಳಿಗೆಗಾಗಿ ನಿರಂತರ ಕೆಲಸ ಮಾಡಿದವರು. ಹೋರಾಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಹೋರಾಟದಿಂದ ಎಲ್ಲ ಶೋಷಣೆಯಿಂದ ಮುಕ್ತವಾಗಬಹುದು ಎಂಬ ನಂಬಿಕೆಯಿಂದ ಬದುಕಿದವರು. ಅವರ ಜೀವನ ದಾರಿಯೇ ಇಂದಿನ ಹೋರಾಟಕ್ಕೆ ಹಾಗೂ ಹೋರಾಟಗಾರರಿಗೆ ದಾರಿದ್ವೀಪವಾಗಿವೆ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಮುಖಂಡರಾದ ನಾಗರಾಜ ಮಾಳಗಿ.ಹೊನ್ನಪ್ಪ ತಗಡಿನಮನಿ.ಮಂಜಪ್ಪ ಮರೋಳ.ಬಸವಣ್ಣ ಮುಗಳಿ.ಬಸವರಾಜ ಮೈಲಮ್ಮನವರ.ನೀಲಪ್ಪ ದೊಡ್ಡಮರೆಮ್ಮನವರ.ಬಸಣ್ಣ ಹೊಸೂರ.ನಿಂಗಪ್ಪ ನಿಂಬಕ್ಕನವರ.ಗುಡ್ಡಪ್ಪ ಚಿಕ್ಕಪ್ಪನವರ.ರಾಜು ಹರಿಜನ.ರಂಗಪ್ಪ ಮೈಲಮ್ಮನವರ.ಮಲ್ಲೇಶ ಕೆಂಚಲ್ಲನವರ.ರಮೇಶ ಹಿರಿಗಣ್ಣನವರ.ಗುಡ್ಡಪ್ಪ ಚೌಡಮ್ಮನವರ.ಬಸವರಾಜ ಹಾವೇರಿ.ಕುಮಾರ ಹುಚ್ಚಮ್ಮನವರ.ಮಾಲತೇಶ ಬಣಕಾರ. ಫಕ್ಕಿರೇಶ ಕೋಳೂರ.ರುದ್ರಪ್ಪ ಮಾದರ.ಯಲ್ಲಪ್ಪ ದೊಡ್ಡಮನಿ.ಮಾಲತೇಶ ಕನ್ನಮ್ಮನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.