ವಿಜಯಪುರ 10: ನಗರದ ಬಿ ಎಲ್ ಡಿ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಇನಸ್ಟಿಟ್ಯೂಟ್ ಆಪ್ ನರ್ಸಿಂಗ್ ಸೈನ್ಸ್ ಮಹಾವಿದ್ಯಾಲಯದ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ವಿಭಾಗದ ಮುಖ್ಯಸ್ಥ ಅಮರನಾಥ ಷಣ್ಮುಕ ಅವರಿಗೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಲಭಿಸಿದೆ.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ವಿವಿಯ 27ನೇ ಘಟಿಕೋತ್ಸವದಲ್ಲಿ ಅವರಿಗೆ ಪಿ.ಎಚ್.ಡಿ ಪ್ರದಾನ ಮಾಡಲಾಯಿತು.
ಪ್ರೊ. ಡಾ. ಬಿ. ಎ.ಯತೆಕುಮಾರಸ್ವಾಮಿ ಗೌಡ ಮಾರ್ಗದರ್ಶನದಲ್ಲಿ "ರಿಸ್ಕ್ ಸ್ಟ್ರ್ಯಾಟಿಫಿಕೇಶನ್ ಫಾರ್ ಡಿಕಟೆಕ್ಷನ್ ಆಫ್ ಕೊನೊನರಿ ಆರ್ಟರಿ ಡೀಸೀಸ್ ಆ್ಯಂಡ್ ಎಪೆಕ್ಟಿವನೆಸ್ ಆಫ್ ಸೆನ್ಸಿಟೈಜೆಷನ್ ಪ್ರೊಗ್ರಾಮ ಆನ್ ರಿಡಕ್ಷನ್ ಆಫ್ ರಿಸ್ಕ್ ಫಾರ್ ಕೊರೊನರಿ ಆರ್ಟರಿ ಡೀಸೀಸ್ (ಖಣಡಿಚಿಣಜಿಛಿಚಿಣಠ ಜಿಠ ಜಜಣಜಛಿಣಠ ಠ ಛಿಠಠಚಿಡಿಥಿ ಚಿಡಿಣಜಡಿಥಿ ಜಜಛಿಜ ಚಿಟಿಜ ಜಜಿಜಿಜಛಿಣತಜಟಿ ಠ ಜಠಿಣದಚಿಣಠ ಠಿಡಿಠಡಿಚಿಟಟಜ ಠ ಡಿಜಜಣಛಿಣಠ ಠ ಡಿಞ ಜಿಠ ಛಿಠಠಚಿಡಿಥಿ ಚಿಡಿಣಜಡಿಥಿ ಜಜಛಿಜ)ಎಂಬ ವಿಷಯದ ಮೇಲೆ ಅಮರನಾಥ ಷಣ್ಮುಖ ಅವರು ಸಂಶೋಧನೆ ಪ್ರಬಂಧಕ್ಕೆ ಮಂಡಿಸಿದ್ದರು.
ಡಾ. ಅಮರನಾಥ ಷಣ್ಮುಖ ಅವರ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಾಲ್ಮೋನ್ ಚೋಪ್ಡೆ, ಉಪರಾಚಾರ್ಯ ಡಾ. ಸುಚಿತ್ರ ರಾಟಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಹೊರತಾದ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.