ಇಂದೋರ್. ನ 13 : ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತವರು ನೆಲದಲ್ಲಿ 250ಕ್ಕೂ ಹೆಚ್ಚು ವಿಕೆಟ್ ಕಿತ್ತ ಭಾರತದ ಮೂರನೇ ಸ್ಪಿನ್ನರ್ ಎನಿಸಿಕೊಂಡರು. ಮೊದಲು ಹಾಗೂ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಅನಿಲ್ ಕುಂಬ್ಳೆ ಹಾಗೂ ಹರಭಜನ್ ಸಿಂಗ್ ಇದ್ದಾರೆ.
ಇಲ್ಲನ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಮೊಮಿನುಲ್ ಹಕ್ (37) ಅವರ ವಿಕೆಟ್ ಪಡೆಯುತ್ತಿದ್ದಂತೆ ಈ ಸಾಧನೆಗೆ ಅವರು ಭಾಜನರಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡಕ್ಕೆ ಭಾರತದ ವೇಗಿಗಳು ಆರಂಭಿಕ ಆಘಾತ ನೀಡಿದರು. ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಒಂದೊಂದು ವಿಕೆಟ್ ಕಿತ್ತರು. ನಂತರ, ಚೆಂಡು ಕೈಗೆತ್ತಕೊಂಡ ಆರ್. ಅಶ್ವಿನ್ ಅತ್ಯುತ್ತಮ ಬ್ಯಾಟಿಂಗ್ ಮಾಡುವ ಮೂಲಕ ಕ್ರೀಸ್ ನಲ್ಲಿ ನೆಲೆಯೂರಿದ್ದ ಮೊಮಿನುಲ್ ಹಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಒಟ್ಟಾರೆ, ಬಾಂಗ್ಲಾದೇಶ 47 ಓವರ್ ಗಳಿಗೆ ಐದು ವಿಕೆಟ್ ಕಳೆದುಕೊಂಡು 120 ರನ್ ಗಳಿಸಿದೆ. ಮುಷ್ಫಿಕರ್ ರಹೀಮ್ (41) ಹಾಗೂ ಲಿಟನ್ ದಾಸ್ (4) ಕಣದಲ್ಲಿ ಇದ್ದಾರೆ.