ಸುಧಾಕರ ದೈವಜ್ಞ
ಶಿಗ್ಗಾವಿ14 : ಕೊರೊನಾ ವೈರಸನಿಂದ ಇಡಿ ವಿಶ್ವವೇ ಅಲ್ಲೋಲ ಕಲ್ಲೋಲವಾಗಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಿನ ರೀತಿಯಲ್ಲಿ ಉಲ್ಬಣವಾಗುತ್ತಾ ಸಾಗಿದೆ ಸನ್ಮಾನ್ಯ ನರೇಂದ್ರ ಮೋದಿಜೀಯವರು ಮನೆಯಲ್ಲಿ ಇರುವುದರಿಂದ ಈ ಸೋಂಕನ್ನು ತಡೆಗಟ್ಟಬಹುದು, ನಿಯಂತ್ರಣ ಮಾಡಬಹುದು ಅಥವಾ ನಿಮರ್ೂಲನೆ ಮಾಡಬಹುದು ಎಂದು ತಮ್ಮ ಸುದ್ದಿಗೋಷ್ಟಿಯಲ್ಲಿ ಹೇಳಿದರು ಅದನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಉಲ್ಬಣವಾಗುತ್ತಿರಲಿಲ್ಲ ಉಲ್ಬಣವಾದ್ದರಿಂದ ಇಲ್ಲಿ ವೈದ್ಯರು ಮತ್ತು ವೈದ್ಯಕಿಯೇತರ ಸಿಬ್ಬಂದಿಗಳ ಸೇವೆ ಅವಶ್ಯವಾಯಿತು.
ವಿಶ್ವದಲ್ಲಿ ಅನೇಕ ಸರಕಾರಿ ಹಾಗೂ ಖಾಸಗಿ ವೈದ್ಯರು ನಿರಂತರ ಸೇವೆಯನ್ನು ಸಲ್ಲಿಸಿ ಸೋಂಕಿಗೆ ತುತ್ತಾಗಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ಮುಂಜಾಗ್ರತೆವಹಿಸಿ ಸೇವೆಯನ್ನು ಸಲ್ಲಿಸಿದರೂ ಸಹಿತ ಕೆಲವು ವೈದ್ಯರನ್ನು ಕೊರೋನಾ ಸೋಂಕು ಬಲಿತೆಗೆದುಕೊಂಡಿತು ಆ ನಿಟ್ಟಿನಲ್ಲಿ ಸೇವೆಯನ್ನು ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಸರಕಾರಿ ಹಾಗೂ ಖಾಸಗಿ ವೈದ್ಯರಿಗೆ ಇಡಿ ವಿಶ್ವದ ಜನತೆಯ ಪರವಾಗಿ ವಂದನೆ ಅಭಿನಂದನೆಗಳನ್ನು ಸಲ್ಲಿಸೋಣ.
ಕನರ್ಾಟಕದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವುದರಲ್ಲಿ ಶಿಗ್ಗಾವಿ ಖಾಸಗಿ ವೈದ್ಯರ ಸಂಘದ ಕಾರ್ಯವು ಇಡಿ ಭಾರತ ದೇಶಕ್ಕೆ ಮಾದರಿಯಾದ ಸಂಗತಿ ಏನೆಂದರೆ ತಮ್ಮ ತಮ್ಮ ಕ್ಲಿನಿಕ್ ಗಳಲ್ಲಿ ಈ ಸಂದರ್ಭದಲ್ಲಿ ಸೇವೆಯನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮುಂಜಾಗ್ರತೆವಹಿಸಲು ಅನೇಕ ತಾಂತ್ರಿಕ ಸಮಸ್ಯೆಗಳ ಹಿತದೃಷ್ಟಿಯಿಂದ ಪಟ್ಟಣದ ಖಾಸಗಿ ವೈದ್ಯರೆಲ್ಲರೂ ಸೇರಿ ನಿರ್ಣಯವನ್ನು ಕೈಗೊಂಡು ನಿತ್ಯ ಪಟ್ಟಣದ ಮಾಮಲೇ ದೇಸಾಯಿ ಮಾಹಾವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡು ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ಸಾಮಾನ್ಯ ಜನರಿಗೆ ಹೊರರೋಗಿ ಚಿಕಿತ್ಸಾ ಕೇಂದ್ರವನ್ನು ತೆರೆದು ಸೋಂಕು ಹರಡುವಿಕೆ ತಡೆಯಲು, ಸಾಮಾಜಿಕ ಅಂತರ ಕಾಯಲು ಹಾಗೂ ಜನದಟ್ಟನೆ ನಿಯಂತ್ರಿಸಲು ಬೇರೆ ಬೇರೆ ಕೊಠಡಿಯಲ್ಲಿ ಬೇರೆ ಬೇರೆ ತಜ್ಞ ವೈದ್ಯರ ಮುಖಾಂತರ ಪ್ರತಿ ನಿತ್ಯ ಬೆಳಿಗ್ಗೆ 9 ರಿಂದ ಮದ್ಯಾಹ್ನ 2 ಗಂಟೆಯವರೆಗೆ ಸೇವೆಯನ್ನು ಸಲ್ಲಿಸಿ ಈ ಚಿಕಿತ್ಸಾ ಕೇಂದ್ರದಿಂದ ಸಂಗ್ರಹವಾಗುವ ರೋಗಿಯ ಶುಲ್ಕವನ್ನು ಕೊರೋನಾ ವೈರಸ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಾಗುವುದು ಎಂದು ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ ಪ್ರಶಾಂತ ಬಿ.ಕೆ ತಿಳಿಸಿದರು. ಮಾನವೀಯತೆಯನ್ನು ಮೆರೆದ ಪಟ್ಟಣದ ವೈದ್ಯರಿಗೆ ವಂದನೆ ಅಭಿನಂದನೆಗಳು.
ಡಾ|| ಪ್ರಶಾಂತ ಬಿ.ಕೆ : ಸಾಯಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ವೈದ್ಯರು ಹಾಗೂ ಖಾಸಗಿ ವೈದ್ಯರ ಸಂಘದ ಅಧ್ಯಕ್ಷರು ಮತು ಸಾಯಿ ಸಮೂಹ ಸಂಸ್ಥೆಗಳ ಪಾಲುದಾರರು, ಸನ್ಮಾನ್ಯರು ಸಹಿತ ಪ್ರತಿನಿತ್ಯ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಡಾ|| ಪ್ರಭು.ಆರ್.ಪಾಟೀಲ : ಪ್ರಭು ನಸರ್ಿಂಗ ಹೋಮನ ವೈದ್ಯರು ಹಾಗೂ ವೈದ್ಯರ ಸಂಘದ ಗೌರವಾಧ್ಯಕ್ಷರು ಮತ್ತು ನಳಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದರು.
ಡಾ|| ನಿಜಾಮುದ್ದೀನ ಮುಲ್ಲಾ : ಗೌಸಿಯಾ ಕ್ಲಿನಿಕನ ವೈದ್ಯರು ಹಾಗೂ ವೈದ್ಯರ ಸಂಘದ ಕಾರ್ಯದಶರ್ಿಗಳು. ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದರು.
ಡಾ|| ವ್ಹಿ.ಎಸ್. ದಮಾನಿ : ದಮಾನಿ ಪಾಲಿ ಕ್ಲಿನಿಕನ ವೈದ್ಯರು ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸಾಮಾಜಿಕ ಸೇವೆಯನ್ನು ಸಲ್ಲಿಸಿದರು.
ಡಾ|| ಚಂದ್ರಶೇಖರ ತೋಟಗೇರ : ತೋಟಗೇರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಪಿಜಿಷಿಯನ್ ತಜ್ಞ ವೈದ್ಯರು ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದರು.
ಡಾ|| ಎಮ್.ಎಮ್.ತಿಲರ್ಾಪೂರ : ಮೃತ್ಯುಂಜಯ ನಸರ್ಿಂಗ ಹೋಮನ ವೈದ್ಯರು ಹಾಗೂ ಪಿನಿಕ್ಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸನ್ಮಾನ್ಯರು ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದರು.
ಡಾ|| ರಾಣಿ ತಿಲರ್ಾಪೂರ : ಮೃತ್ಯುಂಜಯ ನಸರ್ಿಂಗ ಹೋಮನ ವೈದ್ಯರು ಹಾಗೂ ಪಿನಿಕ್ಸ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿಗಳು ಮತ್ತು ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿದ ತಿಲರ್ಾಪೂರ ಕುಟುಂಬ ವರ್ಗದ ಸದಸ್ಯೆ ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದರು.
ಡಾ|| ಲತಾ ನಿಡಗುಂದಿ : ಅಶ್ವಿನಿ ಪಾಲಿ ಕ್ಲಿನಿಕನ ವೈದ್ಯರು ಹಾಗೂ ಬಸವ ತತ್ವಗಳ ಆಧಾರಕರು ಮತ್ತು ವಚನಾ ನಿಧಿ ವನಿತಾ ಸಂಘದ ಅಧ್ಯಕ್ಷರು ಹಾಗೂ ಭರತ ನಾಟ್ಯ ಪ್ರವಿಣರು ಇವರು ಸಹಿತ ಸಾಮಾನ್ಯ ಮಹಿಳೆಯರಿಗೆ ಚಿಕಿತ್ಸೆ ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ಸಲ್ಲಿಸಿದರು.
ಡಾ|| ಅವಿನಾಶ ರಾಜಮಾನೆ : ಅವಿನಾಶ ಚಿಕ್ಕ ಮಕ್ಕಳ ಆಸ್ಪತ್ರೆ ಚಿಕ್ಕ ಮಕ್ಕಳ ತಜ್ಞ ವೈದ್ಯರು ಸಹಿತ ಪ್ರತಿನಿತ್ಯ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಅಪರ್ಿಸಿದರು.
ಡಾ|| ರಾಜಶೇಖರ ಕಂಬಾಳಿಮಠ : ಶೇಖರ ಕ್ಲಿನಿಕನ ವೈದ್ಯರು ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದರು.
ಡಾ|| ಶ್ವೇತಾ ತೋಟಗೇರ : ತೋಟಗೇರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ತ್ರೀ ತಜ್ಞ ವೈದ್ಯರು ಸಹಿತ ಪ್ರತಿನಿತ್ಯ ಮಹಿಳೆಯರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸರ್ಮಪಿಸಿದರು.
ಡಾ|| ಕುಮಾರಗೌಡ ಪಾಟೀಲ : ಜ್ಯೋತಿ ಪಾಲಿ ಕ್ಲಿನಿಕನ ಯೋಗ ಮತ್ತು ನಿಸರ್ಗಪೋಚಾರ ಚಿಕಿತ್ಸೆಯ ವೈದ್ಯರು ಹಾಗೂ ವೈದ್ಯರ ಸಂಘದ ಖಜಾಂಚಿ ಮತ್ತು ಉತ್ಸಾಹಿ ಯುವಕರು. ಪ್ರತಿನಿತ್ಯ ಚಿಕಿತ್ಸಾ ಕೇಂದ್ರದ ಆಗುಹೋಗುಗಳ ಮಾಹಿತಿಯನ್ನು ಸನ್ಮಾನ್ಯರು ಸಹಿತ ಪ್ರತಿನಿತ್ಯ ನೀಡುವ ಮೂಲಕ ತಮ್ಮ ಸಮಾಜಮುಖಿ ಕಳಕಳಿಯನ್ನು ಅರಿತವರು.
ಡಾ|| ಚಂದ್ರಿಕಾ ಪಾಟೀಲ : ಜ್ಯೋತಿ ಪಾಲಿ ಕ್ಲಿನಿಕನ ಮಹಿಳಾ ವೈದ್ಯರು ಸಹಿತ ಪ್ರತಿನಿತ್ಯ ಸಾಮಾನ್ಯ ಮಹಿಳೆಯರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದವರು.
ಡಾ|| ಆರ್.ಎಫ್.ಪಾಟೀಲ : ಜ್ಯೋತಿ ಪಾಲಿ ಕ್ಲಿನಿಕನ ವೈದ್ಯರು ಸಹಿತ ಪ್ರತಿನಿತ್ಯ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದರು.
ಡಾ|| ಜ್ಯೋತಿ ಕಂಬಾಳಿಮಠ : ಶೇಖರ ಕ್ಲಿನಿಕನ ವೈದ್ಯರು ಸಹಿತ ಪ್ರತಿನಿತ್ಯ ಸಾಮಾನ್ಯ ಮಹಿಳೆಯರಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದರು.
ಪಟ್ಟಣದ ತಜ್ಞ ವೈದ್ಯರಾದ ಡಾ|| ಪದ್ಮಾವತಿ ಪತ್ತಾರ, ಡಾ|| ಈರಣ್ಣಾ , ಡಾ|| ಹೆಚ್.ಜಿ.ಪಾಟೀಲ ಈ ಎಲ್ಲ ವೈದ್ಯರು ಸಹಿತ ದೂರವಾಣಿಯ ಮೂಲಕ ತಮ್ಮ ಸೇವೆಯನ್ನು ನಿಭಾಯಿಸಿದ್ದಾರೆ.
ಸಾಮಾನ್ಯ ಜನರಿಗೆ ಹೊರರೋಗಿ ಚಿಕಿತ್ಸಾ ಕೇಂದ್ರವನ್ನು ತೆರೆದು ಪ್ರತಿನಿತ್ಯ ನೊಂದಣಿ ಮಡಲು ಸಹಕರಿಸಿದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಾದ ಪ್ರವೇಶಗೌಡ ಮರಿಗೌಡ್ರ, ಯಲ್ಲಪ್ಪ ಸುಣಗಾರ, ಅನಿತಾ ಬೆಂಗಳೂರು, ಮಹಾಂತೇಶ ಮುಂತಾದವರು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ಖಾಸಗಿ ವೈದ್ಯರ ಸಂಘದ ಸಾಮಾನ್ಯ ಜನರಿಗೆ ಹೊರರೋಗಿ ಚಿಕಿತ್ಸಾ ಕೇಂದ್ರವನ್ನು ತೆರೆಯಲು ಅನುವು ಮಾಡಿಕೊಟ್ಟ ಪಟ್ಟಣದ ಮಾಮಲೇ ದೇಸಾಯಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ವರ್ಗಕ್ಕೂ ಮತ್ತು ಪ್ರಾಚರ್ಾಯರಾದ ರಮಾಕಾಂತ ಭಟ್ ಮತ್ತು ಉಪ ಪ್ರಾಚರ್ಾಯರಾದ ಜಿ.ಎನ್.ಯಲಿಗಾರ ಗುರುಗಳಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳು.