ರಜೆ ಮುಕ್ತಾಯಗೊಳ್ಳುವ ಮುಂಚಿತವೆ ಮರಳಿ ದೇಶ ಸೇವೆಗೆ ತೆರಳಲು ಮೇಲಾಧಿಕಾರಿಗಳಿಂದ ಕರೆ

Call from superiors to return to national service before leave ends

ಸಂಬರಗಿ, 11 : ದೇಶದಲ್ಲಿ ಹೈ ಅಲರ್ಟ್‌ ಜಾರಿಗೆ ಬಂದ ನಂತರ ಸೈನಿಕರು ರಜೆ ಪಡೆದುಕೊಂಡು ಮನೆಗೆ ತೆರಳಿದ್ದಾರೆ. ಆದರೆ ರಜೆ ಮುಕ್ತಾಯಗೊಳ್ಳುವ ಮೊದಲೆ ತಮ್ಮ ಮೇಲಾಧಿಕಾರಿಗಳಿಂದ ಸಂದೇಶ ಬಂದ ನಂತರ ಮರಳಿ ತಮ್ಮ ಜವಾಬ್ದಾರಿ ನಿರ್ವಹಿಸಲು ಹೋಗುತ್ತಿದ್ದಾರೆ. ಜಂಬಗಿ ಗ್ರಾಮದ ಸೈನಿಕರಾದ ಸಚಿನ ಅಬಾ ಬಾಬರಸಾವಳಂಕೆ ಯೋಧರು ರಜೆ ಮುಕ್ತಾಯಗೊಳ್ಳುವ ಮುಂಚಿತವಾಗಿ ಮರಳಿ ದೇಶ ಸೇವೆಗಾಗಿ ತೆರಳಿದ್ದಾರೆ.  

ಸಚಿನ ಅಬಾ ಬಾಬರಸಾವಳಂಕೆ ಇವರು 15 ವರ್ಷದಿಂದ ಬಿ.ಎಸ್‌.ಎಫ್‌. ಸೇನೆಯಲ್ಲಿ ಗಡಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಅವರ 1 ತಿಂಗಳ ರಜೆಯಲ್ಲಿ ಗ್ರಾಮಕ್ಕೆ ಬಂದಿದ್ದರು. ಅವರ ಮೇಲಾಧಿಕಾರಿಯಾದ ನರೇಂದ್ರ ಸಿಂಗ್ ಇವರು ತಾತ್ಕಾಲಿಕವಾಗಿ ತಮ್ಮ ಯೂನಿಟ್‌ಗೆ ಬರಬೇಕೆಂದು ಆದೇಶ ಮಾಡಿದ ನಂತರ ತಮ್ಮ ರಜೆ ಮುಕ್ತಾಯಗೊಳ್ಳುವ ಮುಂಚಿತವಾಗಿ ಮೀರಜ ರೈಲ್ವೆದಿಂದ ಪ್ರಯಾಣ ಬೆಳೆಸಿದ್ದಾರೆ. ವೇಸ್ಟ ಬಂಗಾಲ ನ್ಯೂ ಕೊಚಿ ಬಿಹಾರ, ಬಟಾಲಿಯನ್ ಹೆಡ್‌ಕ್ವಾಟರ್ ಗೋಪಾಲಪೂರ ಗಡಿಯಲ್ಲಿ ಕೆಲಸ ಮಾಡುತ್ತಾರೆ. ಆದರೆ ಮೇಲಾಧಿಕಾರಿಗಳ ಆದೇಶ ಬಂದ ನಂತರ ದೇಶ ಸೇವೆಗಾಗಿ ತೆರಳಿದ್ದಾರೆ. ತಮ್ಮ ಪ್ರಪಂಚ, ಗ್ರಾಮ, ತಾಯಿ-ತಂದೆಗಿಂತ ದೇಶ ಸೇವೆ ಮಹತ್ವದ್ದಾಗಿದೆ ಎಂದು ಅವರು ದೇಶ ಸೇವೆಗಾಗಿ ಹೋಗಿದ್ದಾರೆ. 

ಗಡಿ ಭಾಗದ ಸಂಬರಗಿ, ಜಂಬಗಿ, ಶಿರೂರ, ಪಾಂಡೇಗಾವ, ಖಿಳೇಗಾಂವ, ಶಿವನೂರ, ಗುಂಡೆವಾಡಿ, ಮದಬಾವಿ ಈ ಭಾಗದ ಗ್ರಾಮದ ಯುವಕರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಪ್ರತಿ ಮನೆಯಲ್ಲಿ ಒಬ್ಬ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.