ಎನ್,ಎಸ್,ಎಸ್ ಶಿಬಿರಾರ್ಥಿಗಳಿಗೆ ಶ್ರೀ ಮಠದಿಂದ ಪ್ರಮಾಣ ಪತ್ರ ವಿತರಣೆ

ಎನ್,ಎಸ್,ಎಸ್ ಶಿಬಿರಾರ್ಥಿಗಳಿಗೆ ಶ್ರೀ ಮಠದಿಂದ ಪ್ರಮಾಣ ಪತ್ರ ವಿತರಣೆ

ಯಮಕನಮರಡಿ 03: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ನಿಮಿತ್ಯ ಶ್ರೀ ಹರಿ ಮಂದಿರ ಯಮಕನಮರಡಿಯಲ್ಲಿ ಶ್ರಮದಾನ ಕೈಗೊಳ್ಳಲಾಯಿತು.  

ಶ್ರೀಮಠದಲ್ಲಿ ಸ್ವಚ್ಛತಾ ಕಾರ್ಯದ ನಂತರ ಮಠದ ಪೀಠಾದಿಕಾರಿಗಳಾದ ಆನಂದ ಗೋಸ್ವಾಮಿ ಮಹಾರಾಜರು ಮಾತನಾಡಿ ಎನ್‌.ಎಸ್‌.ಎಸ್‌.ನಂತಹ ಚಟುಚಟಿಕೆಗಳಿಂದ ರಾಷ್ಟ್ರದ ನಿರ್ಮಾಣ ಮತ್ತು ಯುವಕರಲ್ಲಿ ಸೇವಾ ಮನೋಭಾವನೆ ಬೆಳೆಯುದರ ಜೊತೆ ಯುವಕರಲ್ಲಿ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿ ಆಗುತ್ತದೆ ಎಂದು ತಿಳಿಸಿ ಶ್ರೀ ಹರಿ ಮಂದಿರದಲ್ಲಿ ಸ್ವಚ್ಛತಾ ಶ್ರಮದಾನ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದರು, ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಬಿ.ಬಿ.ಕೊಡ್ಲಿ ಪ್ರಾಸ್ತಾವಿಕ ಮಾತನಾಡಿದರೆ ಎಸ್‌.ಆರ್ ತಬರಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್‌.ಎ.ರಾಮನಕಟ್ಟಿ ಎ.ಎ.ಕಿವಂಡಾ ಹಾಗೂ ಪತ್ರಕರ್ತರಾದ ಗೋಪಾಲ ಚಿಪಣಿ ಭಾಗವಹಿಸಿದ್ದರು.