ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ

Child marriage is a punishable offence- Belagavi

ಬೆಳಗಾವಿ 30: ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌.ಎಸ್‌.ಎಸ್‌. ಘಟಕದ ಮತ್ತು ಮಹಿಳಾ ಸಬಲೀಕರಣ ಕೋಶದ ವತಿಯಿಂದ ಅರಿವು ಕಾರ್ಯಕ್ರಮವನ್ನು ದಿ. 30 ಶನಿವಾರದಂದು ಹಾತಲಗೇರಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆಗೆ ಹೋಗಿ ಬಾಲ್ಯ ವಿವಾಹದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ನಂತರ ಗ್ರಾಮದ ಓಣಿ ಓಣಿಯಲ್ಲಿ ನಡೆದು ಹೆಣ್ಣು ಮಕ್ಕಳನ್ನ ಓದಿಸಿ ಹೆಣ್ಣು ರಕ್ಷಿಸಿ ಘೋಷಣೆ ಕೂಗಿ ಅರಿವು ಮೂಡಿಸಲಾಯಿತ್ತು.  

ಎನ್‌.ಎಸ್‌.ಎಸ್‌. ಸ್ವಯಂ ಸೇವಕರಾದ ಕುಮಾರಿ. ರಂಜಿತಾ ಎಸ್‌. ಅವರು ಮಾತನಾಡಿ ಬಾಲ್ಯ ವಿವಾಹ ಮಾಡುವುದರಿಂದ ಹೆಣ್ಣು ಗರ್ಭಪಾತ ವಾಗುವುದರ ಜೋತೆಗೆ ಮರಣ ಹೊಂದುತ್ತಾರೆ ಎಂದು ಹೇಳಿದರು ಮತ್ತು  ಎನ್‌.ಎಸ್‌.ಎಸ್‌. ಸ್ವಯಂ ಸೇವಕರಾದ ಕುಮಾರ. ಬಸನಗೌಡ ಕಾಶೀಗೌಡರ ಅವರು ಮಾತನಾಡಿ ಈ ಬಾಲ್ಯ ವಿವಾಹಕ್ಕೆ ಮುಖ್ಯ ಕಾರಣ ಬಡತನ, ಅನಕ್ಷರತೆ, ಹಾಗೂ ಬಾಲ್ಯ ವಿವಾಹ ಮಾಡುವವರಿಗೆ  1 ಲಕ್ಷ ದಂಡ ಮತ್ತು ಜೈಲು ಶಿಕ್ಷೆ, ಇದನ್ನು ತಡೆಯಲು ಕಾನೂನು ಪ್ರಕಾರ 2006 ಅಡಿಯಲ್ಲಿ ವಿವಾಹ ತಡೆ ಕಾಯ್ದೆ ಬಗ್ಗೆ ಮಾತನಾಡಿದರು.  

ಈ ಅರಿವು ಕಾರ್ಯಕ್ರಮದಲ್ಲಿ  ಕೆ.ಎಲ್‌.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌.ಎಸ್‌.ಎಸ್‌. ಘಟಕದ ಸಹ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವೀರಣ್ಣ ಬಡಿಗೇರ, ಮಹಿಳಾ ಸಬಲೀಕರಣ ಕೋಶದ ವತಿಯಿಂದ ಪ್ರೊ. ವಿಶಲಾ ತೆಳಗಡೆ, ಪ್ರೊ. ಗೌರಾ. ವಾಯ್‌., ಎನ್‌.ಎಸ್‌.ಎಸ್‌. ಎರಡು ತಂಡದ ನಾಯಕರಾದ ಕುಮಾರ. ಆಕಾಶ ಕಳಗಣ್ಣವರ, ಕುಮಾರ. ಫಕ್ಕೀರೇಶ ಒಂಟಿ, ಕುಮಾರಿ. ರಂಜಿತಾ ಎಸ್‌., ಕುಮಾರಿ. ಅಕ್ಷತಾ ದೊಡ್ಡಮನಿ, ಹಾತಲಗೇರಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಗೀತಾ ಕಟಗಿ, ಶಿಕ್ಷಕರಾದ ಲಿಂಗನಗೌಡ ಪಾಟೀಲ, ದೈಹಿಕ ಶಿಕ್ಷರಾದ ಸವಿತಾ ಅಮರಶೆಟ್ಟಿ, ಎನ್‌.ಎಸ್‌.ಎಸ್‌. ಘಟಕದ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.