ಲೋಕದರ್ಶನವರದಿ
ರಾಣೇಬೆನ್ನೂರು11: ಕಷ್ಟವೇ ಇರಲಿ, ಸುಖವೇ ಇರಲಿ, ದು:ಖವೇ ಬರಲಿ ಯಾವುದಕ್ಕೂ ಎದೆಗುಂದದೇ, ಇದೆಲ್ಲವೂ ಭಗವಂತನ ನಿರ್ಣಯವೆಂದು ತಿಳಿದುಕೊಂಡು ಪಾಲಿಗೆ ಬಂದದ್ದನ್ನು ಪಂಚಾಮೃತವೆಂದು ಭಾವಿಸಿ ಆತ್ಮವಿಶ್ವಾಸದಿಂದ ಮುನ್ನಡೆದಾಗ ಮಾತ್ರ ಪುನ: ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು ಇದಕ್ಕೆ ನಾಗರೀಕರು ಸಂಪೂರ್ಣವಾಗಿ ಲಾಕ್ಡೌನ್ಗೆ ಸಹಕರಿಸಿದಾಗ ಮಾತ್ರ ಕರೋನಾ ವೈರಸ್ನಿಂದ ಹೊರಬರಲು ಸಾಧ್ಯವಾಗುವುದು ಎಂದು ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ, ನಗರದ ವರ್ತಕ ರವೀಂದ್ರ ಬಿಜಾಪುರ ಹೇಳಿದರು.
ಅವರು ಶನಿವಾರ ಮುಂಜಾನೆ ಇಲ್ಲಿನ ಎಪಿಎಂಸಿ ರಸ್ತೆಯ ಪೊಲೀಸ್ ಉಪ-ಅಧೀಕ್ಷಕರ ಕಾಯರ್ಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ, ಪೋಲಿಸ್ ಇಲಾಖಾ ಸಿಬ್ಬಂದ್ಧಿಗಳಿಗೆ ಉಪಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೋನಾ ವೈರಸ್ ಸೊಂಕು ರೋಗವು ಜನರನ್ನು ತಪಾಸಿಸುವ ವೈದ್ಯರಾಧಿಯಾಗಿ ಯಾರನ್ನೂ ಬಿಟ್ಟಿಲ್ಲ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಹಬ್ಬಿರುವ ಈ ವೈರಸ್ ಮಹಾಮಾರಿಯಿಂದಾಗಿ ನಾಗರೀಕರು ಪ್ರಾಣಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಯಾವ ಜನ್ಮದ ಅದೃಷ್ಠವೋ ಏನೋ ಹಾವೇರಿ ಜಿಲ್ಲೆಗೆ ಈ ಮಾರಿ ಕಾಲಿಡದೇ ಇರುವುದು ನಮ್ಮೆಲ್ಲರ ಪುಣ್ಯ ವಿಶೇಷವೆನ್ನಬೇಕಾಗಿದೆ ಎಂದ ಅವರು ಸಮಾಜದಲ್ಲಿ ನಿತ್ಯ ರಕ್ಷಣೆಯಲ್ಲಿರುವ ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ದಿನದ 24 ತಾಸುಗಳ ಕಾಲ ಯಾವುದೇ ವಿಶ್ರಾಂತಿ ಇಲ್ಲದೇ, ಮನೆ-ಮಠ, ಮಕ್ಕಳು, ಕುಟುಂಬ ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ರವೀಂದ್ರ ಬಿಜಾಪುರ ಇಲಾಖೆಗೆ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ಸಮ್ಮುಖದಲ್ಲಿ ಅವರ ಪುತ್ರ ಪ್ರತಿಭಾವಂತ ಯುವಕ ಪ್ರಸನ್ನಕುಮಾರ ವಿಜಾಪುರ ಅವರ ಹುಟ್ಟುಹಬ್ಬವನ್ನು ಸಾಂಪ್ರದಾಯಿಕ ಸರಳವಾಗಿ ಆಚರಿಸಲಾಯಿತು.
ಭಾರತ್ ಸ್ವಾಭಿಮಾನ್ ಟ್ರಸ್ಟ್ ಅಧ್ಯಕ್ಷ ಆರ್.ಎನ್.ರಾಠೋಡ, ಯುವಪ್ರಭಾರಿ ಕೆ.ಜಿ.ದಿವಾಕರ ಮೂತರ್ಿ, ಪತಂಜಲಿ ಯೋಗಶಿಕ್ಷಕರಾದ ಕೆ.ಸಿ.ಕೋಮಲಾಚಾರ್, ಆರ್.ಬಿ.ಪಾಟೀಲ, ಪ್ರಕಾಶ್ ಮಾಗೋಡ ಅಮೋಘ ಮೇಲಗಿರಿ, ನಿನಾದ ಸೇರಿದಂತೆ ಬಿ.ಎಸ್.ಟಿ.ಸದಸ್ಯರು, ಪತಂಜಲಿ ಪರಿವಾರದವರು, ಪೋಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.