ಹೈದರಾಬಾದ್, ನ 21 : ೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಷಸರ್್ ಲಿಮಿಟೆಡ್ ನಿಂದ ಆಂಧ್ರ ಪ್ರದೇಶದ ಮಹತ್ವಾಕಾಂಕ್ಷಿ ಪೋಲವರಂ ನೀರಾವರಿ ಯೋಜನೆಯನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಲು ಮುಂದಾಗಿದ್ದು, ಕಾಮಗಾರಿ ತೀವ್ರಗೊಂಡಿದೆ.
ಈ ಭಾರೀ ಯೋಜನೆಯ ಕಾಮಗಾರಿ ಆರಂಭಿಸಿರುವ ಕೃಷ್ಣಾರೆಡ್ಡಿ ಅವರ ನೇತೃತ್ವದ ಮೆಘಾ ಸಂಸ್ಥೆಯು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸುವ ಕಾರ್ಯ ಶ್ರೇಷ್ಠತೆಗೆ ಹೆಸರಾಗಿದ್ದು, ಪೋಲವರಂ ಸ್ಪಿಲ್ ವೇ ಕಾಮಗಾರಿಯನ್ನು 2020ರ ಜೂನ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.
ಆಂಧ್ರ ಪ್ರದೇಶದ ಪ್ರಮುಖ ನೀರಾವರಿ ಯೋಜನೆ ಪೋಲಾವರಂ ಅನ್ನು ಕಾರ್ಯರೂಪಕ್ಕೆ ತರುವ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಮೆಘಾ ಕಾಮಗಾರಿಯನ್ನು ಆರಂಭಿಸಿದ್ದು, ಯೋಜನೆಯ ತ್ವರಿತ ಜಾರಿಗೆ ಮುಂದಡಿ ಇರಿಸಿದೆ.
ಮುಖ್ಯಮಂತ್ರಿ ಜಗ ಮೋಹನ್ ರೆಡ್ಡಿ ಅವರ ಆಶಯದಂತೆ ರಿವಸರ್್ ಟೆಂಡರಿಂಗ್ ಮೂಲಕ ಈ ಯೋಜನೆ ಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆಯು ತೆಲಂಗಾಣದ ಪ್ರತಿಷ್ಠಾತ್ಮಕ ಕಾಳೇಶ್ವರಂ ಯೋಜನೆಯ ಅನುಭವ ಮತ್ತು ಶ್ರೇಷ್ಠತೆಯನ್ನು ಇಲ್ಲಿ ಧಾರೆ ಎರೆಯಲಿದೆ.
ಕಳೆದ ತಿಂಗಳು ಈ ಯೋಜನೆಯ ಕಾಮಗಾರಿಯನ್ನು ಉದ್ಘಾಟಿಸಲಾಗಿದ್ದು, ಸ್ಪಿಲ್ ವೇ ನಿಮರ್ಾಣಕ್ಕಾಗಿ ಸಂಸ್ಥೆಯು ಕಾಳೇಶ್ವರಂ ಯೋಜನೆಯಲ್ಲಿ ತೊಡಗಿಕೊಂಡಿದ್ದ ತಜ್ಞರನ್ನು ನೇಮಿಸಿಕೊಂಡಿದೆ. ಇದರಿಂದ ಮೇಘಾ ಸಂಸ್ಥೆಯು ವರಂ ಪೋಲಾವರಂ ಯೋಜನೆಯಲ್ಲೂ ತನ್ನ ಯುಗವನ್ನು ಪ್ರಾರಂಭಿಸಿದೆ.
ಸ್ಪಿಲ್ ವೇ ನಿಮರ್ಾಣಕ್ಕೆ ಕಾಂಕ್ರೀಟ್ ಕಾಮಗಾರಿ ಗುರುವಾರ ಆರಂಭವಾಗಿದ್ದು, 100 ಘನ ಮೀಟರ್ ಕಾಂಕ್ರೀಟ್ ಕಾಮಗಾರಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪೋಲಾವರಂ ಸ್ಪಿಲ್ವೇ ಪ್ರದೇಶವನ್ನು ಪೂರ್ಣಗೊಳಿಸಲು ದಿನಕ್ಕೆ 2 ಘನ ಮೀಟರ್ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಮತ್ತೊಂದೆಡೆ, ರಾಕ್ಫಿಲ್ ಡ್ಯಾಮ್ ನಿಮರ್ಿಸಲು 1.50 ಕೋಟಿ ಘನ ಕಾಂಕ್ರೀಟ್ ಕಾಮಗಾರಿಗಳನ್ನು ನಡೆಸಬೇಕಿದ್ದು, ಮೇಘಾ 2020 ರ ಜೂನ್ ವೇಳೆಗೆ ಸ್ಪಿಲ್ ವೇ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಪ್ರಕಟಿಸಿದೆ.