ರಫೇಲ್ ಒಪ್ಪಂದದ ಬಗ್ಗೆ ಗೊಂದಲು ಸೃಷ್ಟಿಸಲು ಕಾಂಗ್ರೆಸ್, ರಾಹುಲ್ ಪ್ರಯತ್ನ-ಪ್ರಮೋದ್ ಸಾವಂತ್

  ಪಣಜಿ, ನ 15 :     ಕಾಂಗ್ರೆಸ್ ಮತ್ತು ಆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಒಪ್ಪಂದದ ಬಗ್ಗೆ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ. 

  ರಫೇಲ್ ಕುರಿತ ತೀಪು ಮರುಪರಿಶೀಲಿಸಬೇಕು ಎಂಬ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ಜನತೆಗೆ ಸಂದ ಜಯ ಎಂದು ಅವರು ಹೇಳಿದ್ದಾರೆ.  

 ರಾಹುಲ್ ಗಾಂಧಿ ಅವರು ಕೇವಲ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಭದ್ರತೆಯ ನಿರ್ಣಾಯಕ ವಿಷಯದ ಬಗ್ಗೆ ಗೊಂದಲ ಸೃಷ್ಟಿಸುವ ಪ್ರಯತ್ನಗಳನ್ನು ರಫೇಲ್ ಕುರಿತ ತೀಪು ಬಯಲು ಮಾಡಿದೆ. ಈ ತೀಪು ಮೋದಿ ಸರ್ಕಾರದ ಪರವಾಗಿ ನಿಂತ ಭಾರತದ ಜನರಿಗೆ ದೊರೆತ ಜಯವಾಗಿದೆ ಎಂದು ಅವರು ಹೇಳಿದ್ದಾರೆ.  

 ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ನೊಂದಿಗಿನ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಮೋದಿ ಸರ್ಕಾರವನ್ನು ದೋಷಮುಕ್ತಗೊಳಿಸಿ, ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಅಜರ್ಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿತ್ತು.