ರಾಜ್ಯದಲ್ಲಿ 4 ತಿಂಗಳ ಮಗುವಿಗೆ ಕೊರೋನಾ ಸೋಂಕು; ಸೋಂಕಿತರ ಸಂಖ್ಯೆ 425ಕ್ಕೇರಿಕೆ

ಬೆಂಗಳೂರು, ಏ 22,ರಾಜ್ಯದಲ್ಲಿ  ಕಲಬುರಗಿಯ ನಾಲ್ಕು ತಿಂಗಳ ಮಗು ಸೇರಿ 5 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನದವರೆಗೆ ಏಳು ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಎರಡು ಪ್ರಕರಣಗಳು ಸೇರಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ 425ಕ್ಕೇರಿಕೆಯಾಗಿದೆ. 129 ಜನರು ಗುಣಮುಖರಾಗಿದ್ದು, 17 ಜನರು ಮೃತಪಟ್ಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ 54 ವರ್ಷದ ಪುರುಷ ಮತ್ತು 28 ವರ್ಷದ ಹೆಣ್ಣು, ಕಲಬುರಗಿಯ 46,57 ವರ್ಷದ ಪುರುಷರು, 35 ವರ್ಷದ ಮಹಿಳೆ , ನಾಲ್ಕು ತಿಂಗಳ ಮಗು ಮತ್ತು 26 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.