ಶಿಕ್ಷಣದೊಂದಿಗೆ ಸಂಸ್ಕೃತಿ ಅಗತ್ಯವಿದೆ: ಚಂದ್ರಶೇಖರ ಶಿವಾಚಾರ್ಯ ಶ್ರೀ

ಬೆಳಗಾವಿ, 24: ನಾನು ಇಂಗ್ಲೀಷ್ ಭಾಷೆಯ ವಿರೋಧಿಯಲ್ಲ. ಇಂಗ್ಲೀಷ ಸಂಸ್ಕೃತಿಯ ವಿರೋಧಿ. ಪಾಲಕರು ಶಿಕ್ಷಣದೊಂದಿಗೆ ನಾಡಿನ ಸಂಸ್ಕೃತಿಯನ್ನು ಕಲಿಸುವ ಅಗತ್ಯವಿದೆ ಎಂದು ಹುಕ್ಕೇರಿ ಹಿರೇಮಠದ ಪರಮಪೂಜ್ಯ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು  ಹೇಳಿದರು.

ನಗರದ ಲಿಂಗಾಯತ ಭವನದಲ್ಲಿ ಶನಿವಾರ ಶ್ರಾವಣ ಮಾಸದ ನಿಮಿತ್ಯ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, 

ಪ್ರೇಮಕ್ಕಿಂತ ದೊಡ್ಡದಾದ ಮಂತ್ರವಿಲ್ಲ, ಪ್ರೇಮಕ್ಕಿಂತ ದೊಡ್ಡದಾದ ದೇವರಿಲ್ಲ. ಆದ್ದರಿಂದ ಎಲ್ಲರನ್ನು ಪ್ರೀತಿಸುವುದನ್ನು ಕಲಿಯಬೇಕು. ಆದ್ದರಿಂದ ಶ್ರಾವಣ ಮಾಸದಲ್ಲಿ ಒಳ್ಳೆಯ ವಿಚಾರಗಳನ್ನ ಕೇಳುತ್ತಾ. ಒಳ್ಳೆಯ ಚಿಂತನೆಗಳ ಕಡೆಗೆ ನೀವೆಲ್ಲಾ ಸಾಗಬೇಕು ಎಂದು ಶ್ರೀಗಳು ಕರೆ ನೀಡಿದರು.

ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಮಹಿಳೆಯರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಶೀಲಾ ಬ್ಯಾಕೋಡ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕುಮಾರಿ ಅಂಬಿಕಾ, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ, ಶೈಲಜಾ ಭಿಂಗೆ, ಮಧು ಪಟ್ಟಣಶೆಟ್ಟಿ, ಅನು ಮೆಳವಂಕಿ, ಮಧು ಪಟ್ಟಣಶೆಟ್ಟಿ, ಮಾಧವಿ ಸಂಬರಗಿ, ಕಾವೇರಿ ಕಿಲಾರಿ, ಸುರೇಖಾ ಮುಮ್ಮಿಗಟ್ಟಿ, ಸುಧಾ ಪಾಟೀಲ, ಡಾ.ಹೇಮಾ ಸೂನಳ್ಳಿ, ಇಂದಿರಾ ದೊಟೆಬೆನ್ನೂರ, ಸವಿತಾ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.